Advertisement

ಓಟರ್ ಐಡಿಯಲ್ಲಿ ಇನ್ನು ನಿಮ್ಮ ಕಲರ್ ಫೊಟೋ ಬರುತ್ತದೆ!

11:57 AM Sep 02, 2019 | Hari Prasad |

ಬೆಂಗಳೂರು: ನಿಮ್ಮ ಮತದಾರರ ಚೀಟಿ ಹಳೆಯದಾಗಿದ್ದು ಅದರಲ್ಲಿ ನಿಮ್ಮ ಭಾವಚಿತ್ರ ಸರಿಯಾಗಿ ಕಾಣಿಸುತ್ತಿಲ್ಲವೇ? ಹಾಗಾದರೆ ಇಲ್ಲಿದೆ ಒಂದು ಗುಡ್ ನ್ಯೂಸ್. ಇದೀಗ ನಿಮ್ಮ ಹಳೆಯ ಮತದಾರರ ಚೀಟಿಗೆ ನಿಮ್ಮ ಇತ್ತೀಚೆಗಿನ ಹೊಸ ಕಲರ್ ಭಾವ ಚಿತ್ರವನ್ನು ಅಪ್ ಲೋಡ್ ಮಾಡಬಹುದು. ಮಾತ್ರವಲ್ಲದೇ ಎರಡು ಮೂರು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

Advertisement

ಇದಕ್ಕಾಗಿ ನೀವು www.nvsp.in ಸೈಟ್ ಗೆ ಲಾಗಿನ್ ಆಗಬೇಕಾಗುತ್ತದೆ. ಬಳಿಕ ಅಲ್ಲಿ ಭಾವಚಿತ್ರ ಮತ್ತು ಮಾಹಿತಿ ತಿದ್ದುಪಡಿಗಳನ್ನು ನೀವು ಮಾಡಬಹುದಾಗಿರುತ್ತದೆ.

ವಾರ್ತಾ ಇಲಾಖೆಯ ಕಚೇರಿಯಲ್ಲಿ ಭಾನುವಾರ ಚುನಾವಣಾ ಪಟ್ಟಿ ಪರಿಶೀಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರು ಈ ವಿಷಯವನ್ನು ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ಶೇ.1 ಕ್ಕಿಂತಲೂ ಹೆಚ್ಚು ನಕಲಿ ಮತದಾರರಿದ್ದಾರೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ. ಮತದಾರರ ಪಟ್ಟಿ ಪರಿಶೀಲನೆಗೆ ಸಾರ್ವಜನಿಕರು ಸೂಕ್ತವಾಗಿ ಸಹಕರಿಸಿದಲ್ಲಿ ಇಂತಹ ನಕಲಿ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸಹಾಯ ಆಗಲಿದೆ ಎಂದು ಸಂಜೀವ್ ಕುಮಾರ್ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಸದ್ಯದ ಚುನಾವಣಾ ಪಟ್ಟಿಯಲ್ಲಿ ಲಿಂಗ ಅಸಮಾನತೆ ಸರಿಯಾದ್ದು, ಪುರುಷ – ಮಹಿಳೆ ಮತದಾರರ ಸಂಖ್ಯೆ ಸಾವಿರಕ್ಕೆ 979 ಇದೆ.

Advertisement

ಇನ್ನು ಯುವ ಮತದಾರರ ಸಂಖ್ಯೆಯಲ್ಲಿ ಕೆಲವೊಂದು ಸಮಸ್ಯೆಗಳಿದ್ದು, ಅರ್ಹ ಯುವ ಮತದಾರರ ಸಂಖ್ಯೆ 11ಲಕ್ಷಕ್ಕೂ ಅಧಿಕ ಇದೆ. ಆದರೆ ನೋಂದಣಿ ಮಾಡಿಕೊಂಡಿರುವವರ ಸಂಖ್ಯೆ ಸುಮಾರು 10ಲಕ್ಷ ಇದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮದ ಮೂಲಕ ಯುವ ಮತದಾರರ ನೋಂದಣಿಯನ್ನು ಶೇ.100ರಷ್ಟು ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ಕೇಂದ್ರ ಚುನಾವಣಾ ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ಮಾತನಾಡಿ, ಓಟರ್ ಐಡಿಯಲ್ಲಿರುವ ಹಳೆ ಫೋಟೋ ಬದಲಾವಣೆಗೆ ಅವಕಾಶ ಇದೆ. ಹಾಗೆಯೇ ಒಂದು ಕುಟುಂಬದ ಎಲ್ಲ ಮತದಾರರನ್ನು ಒಂದೇ ಮತಗಟ್ಟೆಯಲ್ಲಿ ಸೇರಿಸಲು ಅವಕಾಶ ಇದೆ. ಈ ಬದಲಾವಣೆಗಳನ್ನು ಆನ್ಲೈನ್ ಮೂಲಕವೇ ಮಾಡಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next