Advertisement

ಮುನಿರತ್ನ ವಿರುದ್ಧ ವೋಟರ್‌ ಐಡಿ ಪ್ರಕರಣ: ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ದೂರು

11:21 AM Oct 20, 2024 | Team Udayavani |

ಬೆಂಗಳೂರು: ಆರ್‌.ಆರ್‌.ನಗರ ಶಾಸಕ ಮುನಿರತ್ನ ವಿರುದ್ಧದ ನಕಲಿ ವೋಟರ್‌ ಐಡಿ ಪ್ರಕರಣದ ತನಿಖೆ ವೇಳೆ ಹೈಕೋರ್ಟ್‌ ಆದೇಶ ಉಲ್ಲಂ ಸಿ ಕರ್ತವ್ಯಲೋಪ ಎಸಗಿದ ತನಿಖಾಧಿಕಾರಿಗಳು ಹಾಗೂ ಅಂದಿನ ಡಿಸಿಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಮಾಜಿ ವಿಧಾನ ಪರಿಷತ್‌ ಸದಸ್ಯ ಪಿ.ಎಂ.ಮುನಿರಾಜುಗೌಡ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದಗೆ ದೂರು ನೀಡಿದ್ದಾರೆ.

Advertisement

ಶನಿವಾರ ತಮ್ಮ ವಕೀಲರ ಜತೆಗೆ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಅವರನ್ನು ಭೇಟಿಯಾಗಿ ದೂರು ನೀಡಿದ ಮುನಿರಾಜುಗೌಡ, ದೂರಿನ ಜತೆಗೆ ಕೆಲವು ದಾಖಲೆಗಳನ್ನು ನೀಡಿದರು. ನಕಲಿ ವೋಟರ್‌ ಐಟಿ ಹಗರಣ ಸಂಬಂಧ ಜಾಲಹಳ್ಳಿ ಪೊಲೀಸ್‌ ಠಾಣೆಯಲ್ಲಿ 2018ರಲ್ಲಿ 2 ಪ್ರಕರಣಗಳು ದಾಖಲಾಗಿವೆ. ಅಪರಾಧ ಸಂಖ್ಯೆ 55ರ ಪ್ರಕರಣದ ಕಡತ 42ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಅದಕ್ಕೆ ಜೋಡಣೆಯಾಗಿರುವ ಅಪರಾಧ ಸಂಖ್ಯೆ 54ರ ಪ್ರಕರಣದ ಕಡತವನ್ನು ಜಾಲಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ಗಳು ಮತ್ತು ಪೂರ್ವ ವಿಭಾಗದ ಡಿಸಿಪಿಗಳು ಸೇರಿ ಮುನಿರತ್ನ ಅವರನ್ನು ಬಂಧನದಿಂದ ಪಾರು ಮಾಡಲು ನ್ಯಾಯಾಲಯವನ್ನು ಯಾಮಾರಿಸಿ ಪ್ರಕರಣವನ್ನು ಅಂತ್ಯಗೊಳಿಸಿದ್ದಾರೆ. ಜತೆಗೆ ಆರೋಪಿಗಳನ್ನು ಬಚಾವ್‌ ಮಾಡಲು ಅಪರಾಧ ಸಂಖ್ಯೆ 54ರ ಪ್ರಕರಣದ ಕಡತವನ್ನು ವಿಚಾರಣಾಧಿಕಾರದ ವ್ಯಾಪ್ತಿಯೇ ಇರದ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ಉಳಿಸಿ¨ªಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ನ್ಯಾಯಾಲಯಕ್ಕೆ ಸುಳ್ಳು ವರದಿ ಸಲ್ಲಿಕೆ: ಅಲ್ಲದೆ, ಅಪರಾಧ ಸಂಖ್ಯೆ 54 ಮತ್ತು 55ರ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಲು ಕೋರಿ ಸಲ್ಲಿಸಲಾಗಿದ್ದ ರಿಟ್‌ ಅರ್ಜಿ ಸಂಬಂಧ ಹೈಕೋರ್ಟ್‌, ಈ ಪ್ರಕರಣಗಳ ಮುಂದುವರಿದ ತನಿಖೆ ಮಾಡಿ ಆರೋಪ ಪಟ್ಟಿ ಸಲ್ಲಿಸುವಂತೆ ಆದೇಶಿಸಿದೆ. ಆದರೆ, ತನಿಖಾಧಿಕಾರಿಗಳು ಆರೋಪಿ ಮುನಿರತ್ನ ಮತ್ತು ಇತರೆ ಆರೋಪಿಗಳು ಹೇಳಿದಂತೆ ಕೇಳಿಕೊಂಡು ತನಿಖೆಯನ್ನೇ ಮಾಡಿಲ್ಲ. ಜಾಲಹಳ್ಳಿಯ ಈಗಿನ ಠಾಣಾಧಿಕಾರಿ ಸಿದ್ಧೇಗೌಡ ಅಪರಾಧ ಸಂಖ್ಯೆ 54ರ ಪ್ರಕರಣದ ತನಿಖೆ ಮುಗಿದಿದೆ ಎಂದು 2024 ಆ.5ರಂದು 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಸುಳ್ಳು ವರದಿ ಸಲ್ಲಿಸಿದ್ದಾರೆ.

ಈ ಮೂಲಕ ಆರೋಪಿ ಮುನಿರತ್ನ ಹಾಗೂ ಇತರೆ ಆರೋಪಿಗಳನ್ನು ಪಾರು ಮಾಡಲು ಪ್ರಯತ್ನಿಸಿ ಕರ್ತವ್ಯಲೋಪ ಎಸಗಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ತನಿಖೆ ಮಾಡಿರುವ ಪಿಐ ಹಾಗೂ ಪಿಎಸ್‌ಐಗಳು ಹಾಗೂ ಪ್ರಕರಣದ ಉಸ್ತುವಾರಿ ವಹಿಸಿದ್ದ ಪೂರ್ವ ವಿಭಾಗದ ಎಲ್ಲಾ ಡಿಸಿಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

ಈ ಎರಡೂ ಪ್ರಕರಣಗಳ ತನಿಖೆಗಾಗಿ ಹಿರಿಯ ಮತ್ತು ಪ್ರಾಮಾಣಿಕ ಐಪಿಎಸ್‌ ಅಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕ ಎಸ್‌ಐಟಿ ರಚಿಸಬೇಕು. ಅಂತೆಯೆ ಈ ಎರಡೂ ಪ್ರಕರಣಗಳಲ್ಲಿ ಪ್ರತ್ಯಕ್ಷ್ಯ ಸಾಕ್ಷಿಗಳಾದ ನಾನು ಮತ್ತು ಮಂಜುನಾಥ ರೆಡ್ಡಿ, ಪ್ರದೀಪ್‌ ಮುಳ್ಳೂರ್‌, ಮಂಜುನಾಥ, ಆನಂದ ಕುಮಾರ್‌, ಸಂತೋಷ್‌ ಕುಮಾರ್‌, ಪುರಷೋತ್ತಮ್‌ ಅವರ ಹೇಳಿಕೆಗಳನ್ನು ಕೂಡಲೇ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next