Advertisement

ಉಪಚುನಾವಣೆಯಲ್ಲಿ “ಕೈ’ಹಿಡಿದ ಮತದಾರ

06:12 PM Dec 21, 2017 | Team Udayavani |

ತರೀಕೆರೆ: ನಡೆದ ಗಡಿಹಳ್ಳಿ ತಾಲೂಕು ಪಂಚಾಯತ್‌ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪ್ರೇಮಾ ಕೃಷ್ಣಮೂರ್ತಿ ಜಯಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಎನ್‌. ಟಿ. ಧರ್ಮೋಜಿರಾವ್‌ ಘೋಷಿಸಿದರು.

Advertisement

ತಾಲೂಕಿನಾದ್ಯಂತ ಅತ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಉಪ ಚುನಾವಣೆಯಲ್ಲಿ ಪ್ರೇಮಾ ಕೃಷ್ಣಮೂರ್ತಿ 2278 ಮತಗಳನ್ನು
ಪಡೆದರೆ, 1833 ಮತಗಳನ್ನು ಪಡೆದ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಜಿ.ಈ.ಪ್ರತಾಪ್‌ ವಿರುದ್ಧ 445 ಮತಗಳ ಅಂತರದಿಂದ
ಜಯಗಳಿಸಿದರು. ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಜನತಾದಳದ ಅಭ್ಯರ್ಥಿ ಮೈಕ್‌ಮಲ್ಲೇಶಪ್ಪ 1682 ಮತಗಳನ್ನು ಪಡೆದ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಪ್ರಮುಖ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಮುಖಭಂಗ ಅನುಭವಿಸಿದೆ. ಹಿಂದಿನ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಅಲ್ಪ
ಮತದ ಅಂತರದಿಂದ ಸೋಲು ಅನುಭವಿಸಿದ್ದ ಜಿ.ಈ.ಪ್ರತಾಪ್‌ ಈ ಬಾರಿ ಬಿಜೆಪಿ ಟಿಕೆಟ್‌ ಪಡೆದರೂ ಸಹ ಗೆಲುವಿನ ದಡ ಮುಟ್ಟಲಿಲ್ಲ.
ಕಾಂಗ್ರೆಸ್‌ ಅಭ್ಯರ್ಥಿ ಪ್ರೇಮಾ ಕೃಷ್ಣಮೂರ್ತಿ ಪತಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಅನುಕಂಪದ ಮತ ಪಡೆಯುವಲ್ಲಿ ಯಶಸ್ವಿಯಾದರು.
5902 ಮತದಾರರಲ್ಲಿ 109 ನೋಟಾ ಮತಗಳು ಬಿದ್ದಿವೆ.

ಕಾಂಗ್ರೆಸ್‌ ವಿಜಯೋತ್ಸವ: ಚುನಾವಣೆಯಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಮತ ಕೇಂದ್ರದ ಹೊರಭಾಗದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಹೊಡೆದು ಸಂಭ್ರಮಾಚರಣೆ ನಡೆಸಿದರು. ನಂತರ ಶಾಸಕ ಜಿ.ಎಚ್‌. ಶ್ರೀನಿವಾಸ್‌ ನೇತೃತ್ವದಲ್ಲಿ ಪಕ್ಷದ ಅಭ್ಯರ್ಥಿ ಪ್ರೇಮಾ ಅವರೊಂದಿಗೆ ಕಾರ್ಯಕರ್ತರು ಮಿನಿವಿಧಾನಸೌಧದಿಂದ ಮಹಾತ್ಮ ಗಾಂಧಿ  ವೃತ್ತದ ತನಕ ಮೆರವಣಿಗೆ ನಡೆಸಿ
ವಿಜಯೋತ್ಸವ ಆಚರಿಸಿದರು.

ಅನುಕಂಪದ ಮತಗಳಿಂದ ಕಾಂಗ್ರೆಸ್‌ಗೆ ಜಯ 
ತರೀಕೆರೆ: ಚುನಾವಣೆಯಲ್ಲಿ ಸೋಲು ಗೆಲುವು ಸ್ವಾಭಾವಿಕ. ಮತದಾರ ನೀಡಿದ ತೀರ್ಪನ್ನು ವಿನಮ್ರವಾಗಿ ಪಕ್ಷ ಸ್ವೀಕರಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಸಂಘಟಿಸಲಾಗವುದು ಎಂದರು. ಸುದ್ದಿಗಾರರೊಂದಿಗೆ ಮಾತನಾಡಿದ
ಅವರು, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪ್ರೇಮ ಕೃಷ್ಣಮೂರ್ತಿ ಅವರ ಗೆಲುವಿಗೆ ಅವರ ಪತಿ ನಾಪತ್ತೆಯಾಗಿದ್ದು ಕಾರಣ. ಇದರಿಂದಾಗಿ
ಮತದಾರರಲ್ಲಿ ಅನುಕಂಪ ಮೂಡಿಸಿದ ಹಿನ್ನೆಲೆಯಲ್ಲಿ ಅನುಕಂಪದ ಅಲೆಯಲ್ಲಿ ಅವರು ಗೆಲುವು ಸಾ ಧಿಸಿದ್ದಾರೆ. ಗೆಲುವು ಸಾ ಧಿಸಿದ
ಕಾಂಗ್ರೆಸ್‌ ಅಭ್ಯರ್ಥಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. 

Advertisement

ಶಾಸಕ ಜಿ.ಎಚ್‌.ಶ್ರೀನಿವಾಸ್‌ ಮಾಡಿದ ಅಭಿವೃದ್ಧಿ ಕೆಲಸಗಳಿಂದ ಜಯಗಳಸಿದ್ದೇನೆ ಪ್ರತಿಪಕ್ಷಗಳನ್ನು ಧೂಳಿಪಟ ಮಾಡಿದ್ದೇವೆ ಎಂದು
ಹೇಳಿದ್ದಾರೆ. ಆದರೆ ಕ್ಷೇತ್ರದಲ್ಲಿ ಅಭಿವೃದ್ಧಿª ಕೆಲಸಗಳು ಅವರನ್ನು ಬೆಂಬಲಿಸಿಲ್ಲ. ಜಿ.ಬಿ.ಕೃಷ್ಣಮೂರ್ತಿ ಕಾಣೆಯಾದ ಹಿನ್ನೆಲೆಯಲ್ಲಿ
ಮತಗಳು ಅನುಕಂಪದ ಮತಗಳಾಗಿ ಪರಿವರ್ತನೆಯಾಗಿ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಿದೆ. ಯಾವುದೇ
ರಾಜಕೀಯ ಪಕ್ಷಗಳನ್ನು ಧೂಳಿಪಟ ಮಾಡಲು ಸಾಧ್ಯವಿಲ್ಲ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next