Advertisement

ಪ್ರಜಾಪ್ರಭುತ್ವದ ಮೌಲ್ಯ ಕಾಪಾಡಿ 

12:11 PM Dec 13, 2021 | Team Udayavani |

ಗದಗ: ಭ್ರಷ್ಟಾಚಾರವನ್ನು ಬುಡ ಸಮೇತ ನಾಶ ಮಾಡಬೇಕಾದರೆ ಮೊದಲು ಮತದಾರರು ಜಾಗೃತರಾಗಬೇಕು.ಯಾವುದೇ ಆಮಿಷಗಳಿಗೆ ಒಳಗಾಗದೇಉತ್ತಮ ಸಾಮಾಜ ಸೇವಕ ಹಾಗೂಪ್ರಜ್ಞಾವಂತ ಅಭ್ಯರ್ಥಿಗಳಿಗೆ ಮತ ನೀಡಬೇಕು. ಈ ಮೂಲಕಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ಹೈಕೋರ್ಟ್‌ವಿಶ್ರಾಂತ ನ್ಯಾಯಾ ಧೀಶ ಅರಳಿ ನಾಗರಾಜ ಹೇಳಿದರು.

Advertisement

ವಿಶ್ವನಾಥ ಶೀರಿಯವರ ಮಾರ್ಗದರ್ಶನದಲ್ಲಿ ಇಲ್ಲಿನ ಬಸವೇಶ್ವರ ನಗರದ ಸಮಾನಮನಸ್ಕರ ಯುವಕರಿಂದ ಪ್ರಕಟಿಸಲಾದ ಮತದಾರರ ಜಾಗೃತಿ ಭಿತ್ತಿಪತ್ರವನ್ನು ಮಹಾತ್ಮ ಗಾಂಧಿವೃತ್ತದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಂವಿಧಾನದ ಆಶಯದಂತೆ ಮತದಾರರು ತಮ್ಮ ಹಕ್ಕುಚಲಾಯಿಸಿದರೆ, ಉತ್ತಮ ಆಡಳಿತ,ಅಭಿವೃದ್ಧಿ ಮತ್ತು ದೇಶದ ಪ್ರಗತಿನಿರೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕ ಮತದಾರರುಬಸವಣ್ಣನವರ ವಚನದ ವಾಣಿಯನ್ನುಪೂರಕವಾಗಿ ತೆಗೆದುಕೊಂಡು”ಛಲ ಬೇಕು ಶರಣಂಗೆ ಪರ ಧನವ ವಲ್ಲೆನೆಂಬ’ ಸಂಕಲ್ಪ ಮಾಡ ಬೇಕು.ಭ್ರಷ್ಟಾಚಾರ ಮುಕ್ತ ಭಾರತದೆಡೆಗೆ ನಮ್ಮ ನಡಿಗೆಯಾಗಬೇಕಾಗಿದೆ.ಪ್ರಜ್ಞಾವಂತ ನಿಸ್ವಾರ್ಥ ಮತದಾರರಿಂದ ಮಾತ್ರ ಭ್ರಷ್ಟಾಚಾರ ನಿರ್ಮೂಲನೆಸಾಧ್ಯ. ಸಂವಿಧಾನ ಸೈದ್ಧಾಂತಿಕ ಹಕ್ಕನ್ನು ಮತಬಾಂಧವರು ಶುದ್ಧ ಹಸ್ತ, ಯಾವುದೇ ಫಲಾಪೇಕ್ಷೆ ಇಲ್ಲದೇಮತ ಚಾಲಾಯಿಸಬೇಕು. ಆಲಸ್ಯ ಮನೋಭಾವ ತೊರೆದು, ಹೊರಬಂದು ಮತ ಚಾಲಾಯಿಸಬೇಕು ಎಂದು ಸಲಹೆ ನೀಡಿದರು.

ರೋಣ ಗುಲಗಂಜಿಮಠದ ಗುರುಪಾದ ದೇವರು ಸಾನ್ನಿಧ್ಯವಹಿಸಿ ಮಾತನಾಡಿ, ಧಾರ್ಮಿಕಮಠ ಮಂದಿರಗಳಿಂದಲೇಭ್ರಷ್ಟಾಚಾರ ನಿರ್ಮೂಲನೆ ಕುರಿತಂತೆ ಹಿತೋಪದೇಶ ಗಳಾಗಬೇಕು.ಮತದಾರರು ಆತ್ಮವಂಚಿತರಾಗದೇ, ಒಳ್ಳೆಯ ಆಡಳಿತಗಾರಪ್ರಾಮಾಣಿಕ ರಾಜಕಾರಣಿಗಳನ್ನುಆಶೀರ್ವದಿಸಬೇಕು ಎಂದುಕಿವಿಮಾತು ಹೇಳಿದರು.

Advertisement

ಶ್ರೀರಾಮ ಸೇನೆ ಧಾರವಾಡ ವಿಭಾಗ ಸಂಚಾಲಕ ರಾಜು ಖಾನಪ್ಪನವರಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಜಿಲ್ಲಾ ಚೇಂಬರ್‌ಆಫ್‌ ಕಾಮರ್ಸ್‌ ಅಧ್ಯಕ್ಷ ರಾಮನಗೌಡಬಿ. ದಾನಪ್ಪಗೌಡ್ರ, ಬಸಯ್ಯ ನಂದಿಕೋಲಮಠ, ಈಶ್ವರ ಕಾಟವಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next