ನೆಲಮಂಗಲ: ಜನರ ಕಷ್ಟಗಳಿಗೆ ಸ್ಪಂದಿಸುವ ಜನ ನಾಯಕರು ಆಯ್ಕೆಯಾಗಬೇಕಾದರೆ ಮತದಾರರು ಚುನಾವಣೆಯಲ್ಲಿ ಆಮಿಷಗಳಿಗೆ ಬಲಿಯಾಗಬಾರದು ಎಂದು ತಹಶೀಲ್ದಾರ್ ಕೆ.ಎನ್.ರಾಜಶೇಖರ್ ಸಲಹೆ ನೀಡಿದರು.
ಪಟ್ಟಣದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾರತ ಚುನಾವಣಾ ಆಯೋಗ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಯುವ ಮತ್ತು ಭಾವಿ ಮತದಾರರ ಸಬಲೀಕರಣ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಡ್ಡಾಯ ಮತದಾನ ಅಗತ್ಯ: ದೇಶ ಅಭಿವೃದ್ಧಿ ಹೊದಬೇಕಾದರೆ ಉತ್ತಮ ನಾಯಕರು ಸರ್ಕಾರದ ಪ್ರತಿನಿಧಿಗಳಾಗಬೇಕು. ಅಂತಹ ನಾಯಕರ ಆಯ್ಕೆ ಮಾಡಲು ಮತದಾರರುಯಾವುದೇ ಆಮಿಷಗಳಿಗೆ ಬಲಿಯಾಗದೇ ಕಡ್ಡಾಯ ಮತ ದಾನ ಮಾಡುವ ಮೂಲಕ ಒಳ್ಳೆಯ ಅಭ್ಯರ್ಥಿಗೆ ಮತ ನೀಡಬೇಕು. ಅಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಪದವಿ ವಿದ್ಯಾರ್ಥಿಗಳು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸ್ವಾಗತಾರ್ಹ. ವಿದ್ಯಾವಂತರು ಚುನಾವಣೆಯಲ್ಲಿ ಕಡ್ಡಾಯ ಮತದಾನ ಮಾಡಿದರೆ ದೇಶ ಬಲಿಷ್ಠವಾಗಿ ನಿಲ್ಲುತ್ತದೆ. ಎಲ್ಲಾ 18 ವರ್ಷ ತುಂಬಿದ ಯುವಕ, ಯುವತಿಯರು ಕಡ್ಡಾಯವಾಗಿ ಮತದಾನದ ಗುರುತಿನ ಚೀಟಿ ಪಡೆ ಯಬೇಕು ಎಂದು ಹೇಳಿದರು.
ಉತ್ತಮರನ್ನು ಆಯ್ಕೆ ಮಾಡಿ: ಬಸವೇಶ್ವರ ಪ್ರಥಮ ದರ್ಜೆಕಾಲೇಜು ಪ್ರಾಂಶುಪಾಲೆ ಡಿ.ಜಿ.ರೇಖಾ ಮಾತನಾಡಿ, ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಜನತೆಗೆ ಮತದಾನದ ಹಕ್ಕ ನ್ನು ನೀಡಲಾಗಿದೆ. ಮತದಾರರು ಯಾವು ದೇ ಹಣ, ಹೆಂಡದಂತಹ ಆಮಿಷಗಳಿಗೆ ಬಲಿಯಾಗದೇ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆಗೆ ಮತದಾನದ ಉತ್ತಮ ಅವಕಾಶ ನೀಡಲಾಗಿದೆ. ವಿದ್ಯಾವಂತ ಯುವ ಜನತೆ ಆಲೋಚನೆ ಮಾಡಿ ಉತ್ತಮ ನಾಯಕರನ್ನು ಆಯ್ಕೆ ಮಾಡಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಬಹುಮಾನ ವಿತರಣೆ: ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಜಾಗೃತಿ ಮೂಡಿ ಸಲು ಆಯೋಜಿಸಿದ್ದ ಮ್ಯಾರಥಾನ್, ಪ್ರಬಂಧ, ಚರ್ಚಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು. ಮ್ಯಾರಥಾನ್‌ನಲ್ಲಿ ನವ ಭಾರತ್‌ಯೂತ್ ಖೊಖೊ ಕ್ಲಬ್‌ನ ಎಂ.ಕುಮಾರ್, ಅಂಬಿಕಾ ಪ್ರಥಮ ಸ್ಥಾನ, ಜಿಜಿಎಂ ಶಾಲೆಯ ಆರ್.ಬಾದ್‌ಪಾಷ್, ನವ ಭಾರತ್ ಯೂತ್ ಖೊಖೊ ಕ್ಲಬ್‌ನ ಚಂದನ್ ದ್ವಿತೀಯ, ಬರದಿ ಮಂಡಿಗೆರೆಯ ತಿಮ್ಮಪ್ಪ, ನವ ಭಾರತ್ ಯೂತ್ ಖೊಖೊ ಕ್ಲಬ್‌ನ ವನಿತಾ ತೃತೀಯ ಸ್ಥಾನ ಪಡೆದರೆ, ಪ್ರಬಂಧ ಸ್ಪರ್ಧೆಯಲ್ಲಿ ಬಸ ವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಿಂಧು ಪ್ರಥಮ, ವರಲಕ್ಷ್ಮೀ ದ್ವಿತೀಯ, ಅನಿತಾ ತೃತೀಯಸ್ಥಾನ ಪಡೆದರು. ಚರ್ಚಾ ಸ್ಪರ್ಧೆಯಲ್ಲಿ ಶೀಲಾ ಪ್ರಥಮ, ವಾಣಿಶ್ರೀ ದ್ವಿತೀಯ ಸ್ಥಾನ ಪಡೆದಿದ್ದು, ವಿಜೇತರಿಗೆ ತಹಶೀಲ್ದಾರ್ ಕೆ.ಎನ್.ರಾಜಶೇಖರ್ ಬಹುಮಾನ ವಿತರಿಸಿದರು.
ಗುರುತಿನ ಚೀಟಿ ವಿತರಣೆ: ಕಾರ್ಯಕ್ರಮದಲ್ಲಿ ಹೊಸ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ ನೀಡುವ ಮೂಲಕ ಮತ ದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಎಚ್.ಆರ್.ಹನುಮಂತರಾಯಪ್ಪ, ಪುರಸಭೆ ಮುಖ್ಯಾಧಿ ಕಾರಿ ಶಿವಪ್ರಸಾದ್, ಹಿರಿಯ ವಕೀಲ ಮುನಿರಾಜು, ತಾಪಂ ಸಹಾಯಕ ನಿರ್ದೇಶಕ ಲಕ್ಷ್ಮೀ ನಾರಾಯಣ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪ್ರಕಾಶ್, ಪ್ರಾಂಶುಪಾಲ ನಾಗರಾಜು, ಬಾಲಕೃಷ್ಣಯ್ಯ, ಅಧ್ಯಾಪಕ ಗಂಗರಾಜು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಮಂಜುನಾಥ್, ಗಂಗರಾಜು, ಮುನಿ ರಾಮೇ ಗೌಡ ಮತ್ತಿತರರು ಹಾಜರಿದ್ದರು.