Advertisement

ಕುಡಿಯಲು ನೀರು ಕೊಟ್ಟರೆ ಮಾತ್ರ ಮತ

03:58 PM May 04, 2018 | |

ಸೇಡಂ: ಶಾಸಕನಾಗುವ ಕನಸುಹೊತ್ತು ಮತದಾರರ ಬಳಿ ಹೋಗುವ ಅಭ್ಯರ್ಥಿಗಳಿಗೆ ಮತದಾರರು ಬೇಡಿಕೆಗಳ ಮಹಾಪೂರವನ್ನೇ ಇಡುತ್ತಿದ್ದಾರೆ. ತಾಲೂಕಿನ ಕೋಲಕುಂದಾ, ಮುಧೋಳ, ಕೋಡ್ಲಾ ಜಿಪಂ ಕ್ಷೇತ್ರಗಳ ವ್ಯಾಪ್ತಿಯ ಬಹುತೇಕ ಜನರು ನೀರಿನ ಬೇಡಿಕೆ ಇಟ್ಟರೆ. ಆಡಕಿ, ಮಳಖೇಡದಲ್ಲಿ ಸ್ಥಳೀಯ ಮುಖಂಡರ ವಿರುದ್ಧ ಮುನಿಸು ತೋರಿಕೆಯಾಗುತ್ತಿವೆ.

Advertisement

ಇವು ಕಾಂಗ್ರೆಸ್‌ ಅಭ್ಯರ್ಥಿ ಡಾ| ಶರಣಪ್ರಕಾಶ ಪಾಟೀಲ ಎದುರಿಸುತ್ತಿರುವ ಮತಸಂಕಟಗಳಾದರೆ, ಬಿಜೆಪಿ ಅಧಿಕಾರದಲ್ಲಿ ಇರದೇ ಇದ್ದರೂ ಸಹ, ಕಾಂಗ್ರೆಸ್‌ ನಿಂದ ಆಗಿರುವ ಲೋಪದೋಷ ಸರಿಪಡಿಸಿದರೆ ಮತ ನೀಡುವುದಾಗಿ ಶರತ್ತನ್ನು ಮತದಾರ ವಿಧಿಸುತ್ತಿದ್ದಾನೆ.

ಒಟ್ಟಾರೆಯಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರೂ ಸಹ, ಜೆಡಿಎಸ್‌ ನಿಂದ ಸ್ಪರ್ಧಿಸಿರುವ ಹೊಸಮುಖ ಸುನೀತಾ ತಳವಾರ ತಾವೇನೂ ಕಮ್ಮಿ ಇಲ್ಲ ಎಂಬಂತೆ ಪ್ರಚಾರ ಮಾಡುತ್ತಿದ್ದಾರೆ.

ಲಂಬಾಣಿಗರ ಹೆಸರಲ್ಲಿ ರಾಜಕೀಯ: ಸೇಡಂ ತಾಲೂಕು ವ್ಯಾಪ್ತಿಯಲ್ಲಿ 119 ಹಳ್ಳಿಗಳಿದ್ದು, ಅದರಲ್ಲಿ 45 ತಾಂಡಾಗಳಿವೆ, ಇವುಗಳ ಪೈಕಿ 10 ಕಂದಾಯ ಗ್ರಾಮಗಳಾಗಿಸಲು ಅನುಮೋದನೆಗೆ ಕಳುಹಿಸಲಾಗಿದೆ. ಬಹುತೇಕ ತಾಂಡಾಗಳಲ್ಲಿ ಮಾಜಿ ಸಚಿವ ರೇವುನಾಯಕ ಬೆಳಮಗಿ ಅವರ ಹೆಸರನ್ನು ಹೇಳಿ ಕಾಂಗ್ರೆಸ್‌ ಮತಯಾಚಿಸುತ್ತಿದೆ. ಮಾಜಿ ಸಚಿವರಿದ್ದರೂ ಸಹ ಕಲಬುರಗಿ ಗ್ರಾಮೀಣ ಮತಕ್ಷೇತ್ರದಲ್ಲಿ ಬಿಜೆಪಿ ಅವರಿಗೆ ಟಿಕೆಟ್‌ ನೀಡದೆ ಮೋಸ ಮಾಡಿದೆ. ಅವರ ಸ್ಥಾನವನ್ನು ಅಕ್ರಮದಲ್ಲಿ ತೊಡಗಿರುವವರಿಗೆ ನೀಡಿದೆ ಎಂದು ಆರೋಪಿಸಿ, ಲಂಬಾಣಿಗರನ್ನು ಸೆಳೆಯುವ ಯತ್ನ ಮಾಡುತ್ತಿದೆ. ಇತ್ತ ಬಿಜೆಪಿ ಲಂಬಾಣಿ ಜನರನ್ನು ಓಲೈಸುವಲ್ಲಿ ಮಗ್ನವಾಗಿದೆ.

ನಿಮ್‌ ರೋಡ್‌ ಬ್ಯಾಡಾ, ನಾಲಿ ಬ್ಯಾಡಾ. ನಿಮ್‌ ರೊಕ್ಕ ಬ್ಯಾಡಾ. ತಿಂಗಳಗಟ್ಟಲೆ ನೀರ್‌ ಇಲ್ದ ಸಾಯ್ಲಕತ್ತೀವಿ. ಗುಡ್ಡ ಏರಿ, ಇಳುª ಕುಡಿಲಾಕ್‌ ನೀರ್‌ ತರಾಕತ್ತೀವಿ. ಮೊದ್ಲು ಕುಡಿಲಾಕ್‌ ನೀರು ಕೊಡ್ರಿ ಆಮ್ಯಾಲ್‌ ಮತ ಕೇಳಿರಿ.
 ಸೀತಾಬಾಯಿ, ಕೋಲಕುಂದಾ

Advertisement
Advertisement

Udayavani is now on Telegram. Click here to join our channel and stay updated with the latest news.

Next