Advertisement

ಚುನಾವಣೆಯಲ್ಲಿ ನಿರೀಕ್ಷೆ ಗಿಂತ ಹೆಚ್ಚು ಮತ

10:56 PM Jan 17, 2022 | Team Udayavani |

ಕನಕಗಿರಿ: ಪಟ್ಟಣದಲ್ಲಿ ಕಸಾಪ ಸದಸ್ಯರಿಗೆ ಕೃತಜ್ಞತಾ ಹಾಗೂ ಸಮಾಲೋಚನಾ ಸಮಾರಂಭ ರವಿವಾರ ನಡೆಯಿತು. ಬಳಿಕ ನೂತನ ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ರೀತಿಯ ರಚನಾತ್ಮಕ ಚಟುವಟಿಕೆ ರೂಪಿಸಲಾಗುವುದು ಮತ್ತು ಐತಿಹಾಸಿಕ ಸಾಂಸ್ಕೃತಿಕ ಸಾಹಿತ್ಯ ಕ್ಷೇತ್ರಗಳಲ್ಲಿ ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು.

Advertisement

ನನ್ನ ಗೆಲುವಿಗೆ ನಿರೀಕ್ಷೆಗಿಂತ ಅತಿ ಹೆಚ್ಚು ಮತಗಳನ್ನು ನೀಡಿರುವ ಕನ್ನಡದ ಮನಸ್ಸುಗಳಿಗೆ ಕನ್ನಡಭಿಮಾನಿಗಳಿಗೆ ನಾನು ಋಣಿಯಾಗಿರುತ್ತೇನೆ ಎಂದು ಹೇಳಿದರು. ಧಾರವಾಡ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ಮಾತನಾಡಿ, ಕನಕಗಿರಿಯಲ್ಲಿ ಐತಿಹಾಸಿಕವಾದ ಸ್ಮಾರಕಗಳಿಗೆ ಮತ್ತು ಕನಕಗಿರಿಗೆ ರಾಜ್ಯದಲ್ಲಿ ತನ್ನದೇ ಆದ ಇತಿಹಾಸವಿದೆ. ಪಟ್ಟಣದ ಸ್ಮಾರಕಗಳು, ಸಾಹಿತ್ಯ, ಮುದ್ರಣ, ಇತಿಹಾಸ ಇತರ ಡಿಜಿಟಲ್‌ ಮಾಧ್ಯÊುಗ ‌ ಳಲ್ಲಿ ಜಗತ್ತಿನಾದ್ಯಂತ ಪ್ರಸರ ಮಾಡುವ ಕಾರ್ಯಗಳಾಗಲಿಈಭಾಗದ ಜನತೆ ಯುವ ಮಿತ್ರರು ಸಾಹಿತ್ಯ ಮತ್ತು ಸಂಸ್ಕೃತಿಕ ಕ್ಷೇತ್ರಗಳಲ್ಲಿ ಕ್ರೀಯಾಶಿಲರಾಗಿದ್ದಾರೆ ಎಂದು ಹೇಳಿದರು. ಕಸಾಪ ನಿಕಟಪೂರ್ವ ಅಧ್ಯಕ್ಷ ಮೆಹಬೂಬ್‌ ಹುಸೇನ್‌ ಮಾತನಾಡಿದರು.

ರಮೇಶ ನಾಯಕ, ಹೊನ್ನೂರಸಾಬ್‌, ತುಕಾರಾಮಪ್ಪ, ಪಾಂಡುರಂಗ ಜನದ್ರಿ, ರವಿ ಪಾತರದ್‌, ವಿನಯ ಮರಾಠಿ, ತಿಪ್ಪಣ್ಣ ಮಡಿವಾಳರ, ಶರೀಫ್‌ ವಟಪರವಿ, ಚಾಂದ್‌ ಪಾಷಾ ಯಲಿಗಾರ, ವಿÍÌನಾ¥ ‌ ‌ ಇತರರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next