Advertisement

Maharashtra: ಲೋಕಸಭೆ ಚುನಾವಣೆ ವೇಳೆ ಮಹಾರಾಷ್ಟ್ರದಲ್ಲಿ ಮತ ಜಿಹಾದ್‌: ಬಿಜೆಪಿ

11:25 PM Oct 01, 2024 | Team Udayavani |

ಮುಂಬೈ: ಲೋಕಸಭೆ ಚುನಾವಣೆಯ ಸಮ‌ಯದಲ್ಲಿ ಮಹಾರಾಷ್ಟ್ರದಲ್ಲಿ “ವೋಟ್‌ ಜಿಹಾದ್‌’ ನಡೆದಿದೆ. ಹಾಗಾಗಿ 14 ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾ ಗಿದೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫ‌ಡ್ನವಿಸ್‌ ಆರೋಪಿಸಿದ್ದಾರೆ.

Advertisement

ಕೊಲ್ಲಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಸಮುದಾಯವನ್ನು ನೇರವಾಗಿ ಉದ್ದೇಶಿಸದೆ ವೋಟ್‌ ಜಿಹಾದ್‌ ಪದ ಬಳಕೆ ಮಾಡಿದರು.

“ಧುಲೆಯಲ್ಲಿ ಬಿಜೆಪಿ ಅಭ್ಯರ್ಥಿ 1.9 ಲಕ್ಷ ಮತಗಳಿಂದ ಮುಂದಿದ್ದರು. ಆದರೆ ಗೆದ್ದಿದ್ದು ಮಾತ್ರ 4000 ಮತಗಳಲ್ಲಿ. 10 ವರ್ಷಗಳ ಹಿಂದೆ ಲವ್‌ ಜಿಹಾದ್‌ ಎಂಬುದು ಸಮಸ್ಯೆಯಾಗಿ ನಮಗೆ ಕಾಣಿಸಿರಲಿಲ್ಲ. ಈಗ ನೂರಾರು ಮಹಿಳೆಯರು ಇದರಿಂದ ತೊಂದರೆ ಗೊಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ವೋಟ್‌ ಜಿಹಾದ್‌ ಸಹ ಇದೇ ರೀತಿ ಆಗಲಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next