ಗುಜರಾತ್‌ನ ಆನಂದ್ ಪಟ್ಟಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಬೃಹತ್ ಪ್ರಚಾರ ರ್ಯಾಲಿಯಲ್ಲಿ ಮಾತ ನಾಡಿದ ಪ್ರಧಾನಿ, ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಸೋದರ ಸಂಬಂಧಿ ಮರಿಯಾ ಆಲಂ ಅವರು ವೋಟ್ ಜೆಹಾದ್‌ಗೆ ಕರೆ ನೀಡಿದ್ದನ್ನು ಪ್ರಸ್ತಾವಿಸಿ ಐಎನ್‌ಡಿಐಎ ಒಕ್ಕೂಟದ ವಿರುದ್ಧ ವಾಗ್ಧಾಳಿ ನಡೆಸಿದರು. ಸಮಾಜವಾದಿ ಪಕ್ಷದ ನಾಯಕಿ ಆಲಂ ಅವರು ಉ. ಪ್ರದೇಶದ ಫರೂಖಾ ಬಾದ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಸುಶಿಕ್ಷಿತ ಮುಸ್ಲಿಮ್ ಕುಟುಂಬ ದಿಂದ ಬಂದ ಆಲಂ ವೋಟ್ ಜೆಹಾದ್‌ಗೆ ಕರೆ ನೀಡಿದ್ದಾರೆ. ಜೆಹಾದ್ ಅಂದರೆ ಏನು, ಯಾರ ವಿರುದ್ಧ ಜೆಹಾದ್ ಸಾರಲಾಗುತ್ತದೆ ಎಂಬುದು ನಿಮಗೆ ಗೊತ್ತಿದೆ ಎಂದು ಭಾವಿಸುತ್ತೇನೆ ಎಂದು ಮೋದಿ ಹೇಳಿದರು.
Advertisement
ವೋಟ್ ಜೆಹಾದ್‌ಗೆ ಕರೆ ನೀಡಿ ರು ವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮಾಡುತ್ತಿರುವ ಅವಮಾನ ವಾಗಿದೆ. ಕಾಂಗ್ರೆಸ್‌ನ ಯಾವುದೇ ನಾಯಕ ಈ ಹೇಳಿಕೆಯನ್ನು ಇದು ವರೆಗೆ ಖಂಡಿಸಿಲ್ಲ. ಇಂಥ ಹೇಳಿಕೆ ಐಎನ್‌ಡಿಐಎ ಒಕ್ಕೂಟದ ಉದ್ದೇಶ ಗಳು ಅಪಾಯಕಾರಿ ಎಂಬುದನ್ನು ಸೂಚಿಸುತ್ತದೆ ಎಂದರು.
“ಸಂವಿಧಾನ ಮತ್ತು ಪ್ರಜಾ ಪ್ರಭುತ್ವವು ಅಪಾಯದಲ್ಲಿದೆ ಎಂದು ಜನರು ಹೇಳುತ್ತಿದ್ದಾರೆ. ಆದರೆ ಮಾನವೀಯತೆಯೇ ಅಪಾಯ ದಲ್ಲಿದ್ದು, ಈ ಸರಕಾರ ವನ್ನು ವೋಟ್ ಜೆಹಾದ್ ಮೂಲಕ ಕೆಳ ಗಿಳಿ ಸುವುದೊಂದೇ ದಾರಿ’ ಎಂದು 2 ದಿನಗಳ ಹಿಂದೆ ಮರಿಯಾ ಆಲಂ ಹೇಳಿದ್ದರು. ಮಾರಿಯಾ ಹೇಳಿಕೆಯ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದೂರು ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.