ಗದಗ : ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ವಿವೇಕಾನಂದಗೌಡ ಪಾಟೀಲ್‌ಗೆ ಮತ ನೀಡುವುದೆಂದರೆ ಸದ್ವಿನಯತೆ, ಸತ್ಚಾರಿತ್ರ್ಯಕ್ಕೆ ಮತ ನೀಡಿದಂತೆ. ಜಿಡ್ಡುಗಟ್ಟಿರುವ ಜಿಲ್ಲಾ ಕಸಾಪದಲ್ಲಿ ವಿವೇಕಾನಂದರ ಆಯ್ಕೆ ಹೊಸ ಮನ್ವಂತರಕ್ಕೆ ನಾಂದಿ ಹಾಡಲಿದೆ ಎಂದು ಹಿರಿಯ ಸಾಹಿತಿ ಚಂದ್ರಶೇಖರ ವಸ್ತ್ರದ ಅಭಿಪ್ರಾಯಪಟ್ಟರು.
ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಸೇವಾಕಾಂಕ್ಷಿ ವಿವೇಕಾನಂದಗೌಡರ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಪ್ರಚಾರ ಸಭೆಯಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದರು. ಹೆಸರೇ ಸೂಚಿಸುವಂತೆ “ವಿವೇಕ’ದ ಪ್ರತಿನಿಧಿ ಯಂತಿರುವ ವಿವೇಕಾನಂದಗೌಡರು ಕಸಾಪ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದರೆ ನಾಡಿಗೆ ಮಾದರಿಯಾಗುವಂತೆ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸುವರು. ಚುನಾವಣೆಯಲ್ಲಿ ವಿವೇಕಾನಂದಗೌಡ ಗೆಲುವು ಸಾಧಿಸುವುದು ಎಷ್ಟು ಸತ್ಯವೋ, ಗೆದ್ದ ಮೇಲೆ ಕಾರ್ಯಪ್ರವೃತ್ತರಾಗುವುದು ಸಹ ಅಷ್ಟೇ ಸತ್ಯ ಎಂದರು.
ಹಿರಿಯ ಸಾಹಿತಿ ಕೆ.ಎಚ್ ಬೇಲೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 5 ವರ್ಷಗಳಿಂದ ಜಿಲ್ಲೆಯ ಸಾತ್ವಿಕ ಸಾಹಿತಿಗಳು ಕಸಾಪ ಕಡೆಗೆ ತಲೆ ಹಾಕಿಲ್ಲ. ಇಂಥ ಅನಾರೋಗ್ಯಕರ ವಾತಾವರಣದಿಂದ ಸಾಹಿತ್ಯ ಪರಿಷತ್ತನ್ನು ಮುಕ್ತವಾಗಿಸುವುದು ನಮ್ಮೆಲ್ಲರ ಹೊಣೆ. ವಿವೇಕಾನಂದಗೌಡರ ಗೆಲುವು ನಮ್ಮೆಲ್ಲರ ಗೆಲುವಾಗಲಿದೆ ಎಂದರು. ನಿಕಟಪೂರ್ವ ಕಸಾಪ ಅಧ್ಯಕ್ಷ ಡಾ|ಶಿವಪ್ಪ ಕುರಿ ಮಾತನಾಡಿ, ಕನ್ನಡ ನಾಡು-ನುಡಿಯ ಹಿತಾಸಕ್ತಿ ಕಾಯುವ ಧ್ಯೇಯದೊಂದಿಗೆ ಆರಂಭವಾದ ಸಾಹಿತ್ಯ ಪರಿಷತ್ತಿನ ಸ್ಥಿತಿ ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಅಧೋಗತಿ ತಲುಪಿರುವುದು ದುರ್ದೈವದ ಸಂಗತಿ. ಒಂದೇ ಅವ ಧಿಗೆ ನನ್ನ ಅಧಿ ಕಾರವಧಿಸೀಮಿತ ಎಂದು ಪ್ರಮಾಣ ಮಾಡಿದವರು ಈಗ ಮತ್ತೆ ಅಧ್ಯಕ್ಷಗಿರಿ ಆಕಾಂಕ್ಷಿಗಳಾಗುವ ಮೂಲಕ ವಚನಭ್ರಷ್ಟರಾಗಿದ್ದಾರೆ ಎಂದರು.
ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿವೇಕಾನಂದಗೌಡ ಪಾಟೀಲ, ನಿವೃತ್ತ ಪ್ರಾಚಾರ್ಯ ಡಾ|ಜಿ.ಬಿ.ಪಾಟೀಲ, ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಲಕ್ಷೆ¾àಶ್ವರದ ಪ್ರಾಚಾರ್ಯ ಎಸ್.ಎನ್. ಮಳಲಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಎಸ್.ಎಂ.ಕಾತರಕಿ, ಸಾಹಿತಿ ಮಂಜುಳಾ ವೆಂಕಟೇಶಯ್ಯ, ನಿವೃತ್ತ ಶಿಕ್ಷಕ ಎಸ್.ಎನ್. ಬಳ್ಳಾರಿ, ಅಂದಾನಯ್ಯ ಹಿರೇಮಠ, ದಸಾಪ ರಾಜ್ಯಾಧ್ಯಕ್ಷ ಡಾ|ಅರ್ಜುನ ಗೊಳಸಂಗಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಕಂಠಿ, ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ ವೇದಿಕೆಯಲ್ಲಿದ್ದರು.