Advertisement

ಒಳ್ಳೆಯ ಗುಣವುಳ್ಳ ವ್ಯಕ್ತಿಗೆ ಮತ ನೀಡಿ: ಬೀರನಕಲ್‌

04:33 PM Dec 03, 2021 | Team Udayavani |

ಯಾದಗಿರಿ: ಒಂದು ಗ್ರಾಪಂ ಸದಸ್ಯನೆಂದರೆ ಸುಮಾರು 300 ಜನರ ಶಕ್ತಿಯಾಗಿದ್ದಾರೆ. ನೀವು ಆಯ್ಕೆಯಾಗಿದ್ದು ಕೇವಲ ವರ್ಚಸ್ಸಿನಿಂದಲ್ಲ. ಬದಲಿಗೆ ಹಲವರ ಶ್ರಮದಿಂದ. ಆ ಶಕ್ತಿಯನ್ನು ಬಳಕೆ ಮಾಡಿಕೊಳ್ಳಲು ನಿಮಗೆ ಈಗಿರುವ ಅವಕಾಶವನ್ನು ಬಳಸಿಕೊಳ್ಳಬೇಕು. ಕೇವಲ ಚುನಾವಣೆ ಬಂದಾಗ ಮಾತ್ರ ಒಗ್ಗಟ್ಟಾಗಿರದೇ ಪ್ರತಿದಿನವೂ ಒಗ್ಗಟ್ಟಾಗಿ ಜೆಡಿಎಸ್‌ ಪಕ್ಷವನ್ನು ಬಲಿಷ್ಠಗೊಳಿಸಬೇಕು ಎಂದು ರಾಜ್ಯ ಜೆಡಿಎಸ್‌ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬೀರನಕಲ್‌ ಹೇಳಿದರು.

Advertisement

ಇಲ್ಲಿನ ಯಾದಗಿರಿ ವಿಧಾನಸಭಾ ಮತಕ್ಷೇತ್ರದ ಗ್ರಾಪಂ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಹಣ ಬಲ, ತೋಳ್ಬಲ, ಜನ ಬಲ ಇರುವವರು ಸಾಕಷ್ಟು ಜನರಿದ್ದಾರೆ. ಆದರೆ, ಜನ ಸಾಮಾನ್ಯರ ಮನವಿಗೆ ಸ್ಪಂದಿಸುವವರು ನಮಗೆ ಬೇಕಾಗಿದೆ. ಹಣಕ್ಕಾಗಿ ಮತ ನೀಡದೇ ಗುಣಕ್ಕಾಗಿ ಮತ ನೀಡಿ ಎಂಬ ಉಕ್ತಿಯೊಂದಿಗೆ ಜನಪರ ವ್ಯಕ್ತಿಗೆ ನಿಮ್ಮ ಮತ ನೀಡಬೇಕು ಎಂದರು.

ಕಲ್ಯಾಣ ಕರ್ನಾಟಕ ಜೆಡಿಎಸ್‌ ವೀಕ್ಷಕರಾದ ತಿಮ್ಮಯ್ಯ ಪುರ್ಲೆ ಮಾತನಾಡಿ, ಬಿಜೆಪಿ ಸರ್ಕಾರವು ಶ್ರೀಮಂತರ ಪರವಾಗಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆ ಪಕ್ಷದ ನಾಯಕರಿಂದಾಗುತ್ತಿಲ್ಲ. ಆದ್ದರಿಂದ ಎಷ್ಟೋ ಜನರು ಇಂದಿಗೂ ಬಡತನ ರೇಖೆಯಿಂದ ಹೊರಬರಲಾಗುತ್ತಿಲ್ಲ. ಅತ್ಯವಶ್ಯಕ ಸಾಮಗ್ರಿಗಳ ಬೆಲೆ ಏರಿಕೆಯಾಗುತ್ತಿರುವುದರಿಂದ ಜನರು ಹೈರಾಣಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರ ಘಟಕದ ತಾಲೂಕು ಅಧ್ಯಕ್ಷ ವಿಶ್ವನಾಥ ಶಿರವಾಳ ಮಾತನಾಡಿದರು. ಈ ಸಂದರ್ಭದಲ್ಲಿ ಸಿದ್ದಪ್ಪಗೌಡ ಜೋಳದಡಗಿ, ಮಹ್ಮದ್‌ ಅನ್ಸರ್‌, ರಫೀಕ್‌ ಪಟೇಲ್‌ ಉಳ್ಳೆಸೂಗೂರು, ಸಿದ್ದಪ್ಪಗೌಡ ಶಿವಪೂರ, ಚೆನ್ನಪ್ಪಗೌಡ ಮೋಸಂಬಿ, ಶರಣಪ್ಪ ಗುಳಗಿ, ಡಾ| ಶಫಿ ಸಾಬ ತುನ್ನೂರ, ಹಣಮಂತ್ರಾಯಗೌಡ ತೇಕರಾಳ, ಠಾಣಗುಂದಿ ಗ್ರಾಪಂ ಅಧ್ಯಕ್ಷರಾದ ಕಾಶಪ್ಪ ತಳಕ, ಹಾಲಗೇರಾ ಗ್ರಾಪಂ ಅಧ್ಯಕ್ಷರಾದ ಲಕ್ಷ್ಮೀ ರಾಜಶೇಖರ, ದೋರನಹಳ್ಳಿ ಗ್ರಾಪಂ ಅಧ್ಯಕ್ಷರಾದ ಹಣಮಂತ, ತುಮಕುರು ಗ್ರಾಪಂ ಅಧ್ಯಕ್ಷರಾದ ಮರೆಮ್ಮ ಮಲ್ಲಯ್ಯ ಪಿಲ್ಲಿ, ವಡಗೇರಾ ಗ್ರಾಪಂ ಅಧ್ಯಕ್ಷರಾದ ನರಸಮ್ಮ ಮರೆಪ್ಪ, ಐಕೂರು ಗ್ರಾಪಂ ಅಧ್ಯಕ್ಷರಾದ ಪಾರ್ವತಿ ಶೇಖಪ್ಪ, ಇಬ್ರಾಹಿಂಪೂರ ಗ್ರಾಪಂ ಅಧ್ಯಕ್ಷರಾದ ನಾಗಪ್ಪ ಮೇಟಿ, ಉಪಾಧ್ಯಕ್ಷರಾದ ಪ್ರೇಮಾ ಚೆನ್ನಪ್ಪ, ವಿನೋದ ಶಿರಗೋಳ, ವಿಶ್ವನಾಥ ನಾಯಕ, ಖಾಜಾಸಾಬ ದೋರನಹಳ್ಳಿ, ಚಂದ್ರಶೇಖ ಗುಂಡಳ್ಳಿ ಗ್ರಾಪಂ ಸದಸ್ಯರು ಹಾಗೂ ಜೆಡಿಎಸ್‌ ಕಾರ್ಯಕರ್ತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next