ಪಂಜಾಬ್: ನಾನು ದೆಹಲಿಯನ್ನು ಕೈ ಬಿಟ್ಟು, ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಆಗಲಾರೆ. ದೆಹಲಿ ಜನರಿಗೆ ನೀಡಿದ ಭರವಸೆ ಈಡೇರಿಸುವುದು ನನ್ನ ಕರ್ತವ್ಯ. ಪಂಜಾಬ್ ಗೆ ಪಂಜಾಬ್ ನವರೇ ಸಿಎಂ ಅಭ್ಯರ್ಥಿಯಾಗಲಿದ್ದಾರೆ ಎಂದು ಎಎಪಿ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸ್ಪಷ್ಟನೆ ನೀಡುವ ಮೂಲಕ ಪಂಜಾಬ್ ಸಿಎಂ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯಲಿದ್ದಾರೆ ಎಂಬ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ಬುಧವಾರ ಪಂಜಾಬ್ ನಲ್ಲಿ ನಡೆದ ಎಎಪಿ ರಾಲಿ ವೇಳೆ ಅರವಿಂದ್ ಕೇಜ್ರಿವಾಲ್ ಅವರು ಈ ಹೇಳಿಕೆ ನೀಡುವ ಮೂಲಕ ಮನೀಶ್ ಸಿಸೋಡಿಯಾ ಅವರ ಕರೆಗೆ ಸ್ಪಷ್ಟನೆ ನೀಡಿದ್ದಾರೆ.
ಮಂಗಳವಾರ ಮೊಹಾಲಿಯಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, “ಪಂಜಾಬ್ ಜನರು ಕೇಜ್ರಿವಾಲ್ ಅವರೇ ಸಿಎಂ ಅಭ್ಯರ್ಥಿ ಎಂದು ಮನಸ್ಸಿನಲ್ಲಿ ಇರಿಸಿಕೊಂಡು ಆಪ್‌ಗೆ ಮತ ನೀಡಬೇಕು’ ಎಂದು ಮತದಾರರಲ್ಲಿ ಮನವಿ ಮಾಡಿದ್ದರು.
ಈ ಹೇಳಿಕೆ ಕುರಿತು ಅಕಾಲಿದಳ ನೇತಾರ, ಪಂಜಾಬ್ ಉಪಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಕೇಜ್ರಿವಾಲ್‌ರನ್ನು ತರಾಟೆಗೆ ತೆಗೆದು ಕೊಂಡಿದ್ದು, “ಪಂಜಾಬಿಗಳ ಮೇಲೆ ಆಪ್‌ಗೆ ನಂಬಿಕೆ ಇಲ್ಲ
ಎಂಬುದರ ಸಂಕೇತ ಇದು’ ಎಂದು ಟೀಕಿಸಿದ್ದರು.
ಕೇಜ್ರಿವಾಲ್ ದಿಲ್ಲಿ ಬಿಡುವ ಕುರಿತು ಬಿಜೆಪಿ, ಕಾಂಗ್ರೆಸ್ ಕೂಡ ಟೀಕಿಸಿದ್ದವು. ಆದರೆ ತಮ್ಮ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದಂತೆಯೇ ಸಿಸೋಡಿಯಾ ಉಲ್ಟಾ ಹೊಡೆಯಲು ಯತ್ನಿಸಿದ್ದು, “ಪಂಜಾಬ್ ಸಿಎಂ ಯಾರು ಆಗಬೇಕೆಂದು ಶಾಸಕರು ನಿರ್ಧರಿ ಸುತ್ತಾರೆ’ ಎಂದು ಸ್ಪಷ್ಟಪಡಿಸಿದ್ದರು. ಈ ಹಿಂದೆ ಕೂಡ ಕೇಜ್ರಿವಾಲ್ ಪಂಜಾಬ್‌ಗ ತೆರಳಲಿದ್ದಾರೆ. ಸಿಸೋಡಿಯಾ ದಿಲ್ಲಿ ಸಿಎಂ ಆಗಲಿದ್ದಾರೆ ಎಂಬ ಗುಸುಗುಸು ಹಬ್ಬಿದ್ದವು.