ಭಾರತೀನಗರ: ಗ್ರಾಪಂ ಚುನಾವಣೆಯ ಮತ ಏಣಿಕೆ ಸಮೀಪಿಸುತ್ತಿದ್ದಂತೆ ಅಭ್ಯರ್ಥಿಗಳ ಬೆಟ್ಟಿಂಗ್ ಭರಾಟೆ ಜೋರಾಗಿದೆ. ಗ್ರಾಪಂ ಚುನಾವಣೆ ಎಂದರೆಕಾರ್ಯಕರ್ತರ ಚುನಾವಣೆಯಾಗಿರುವುದರಿಂದ ವಿಧಾನ ಸಭಾ ಚುನಾವಣೆಯನ್ನೇ ಮೀರಿಸಿದೆ. ಸ್ಥಳೀಯರೇ ಸ್ಪರ್ಧೆಗಿಳಿದಿರು ವುದರಿಂದ ಪ್ರತಿ ದಿನ ಗ್ರಾಮದ ಮತದಾರರಿಗೆ ಸಿಗುವಅಭ್ಯರ್ಥಿಗಳು ಓಲೈಕೆಯಲ್ಲಿ ತೊಡಗಿದ್ದರು. ಜೊತೆಗೆ ಹಣ, ಬಾಡು, ಮದ್ಯಪಾನ ಹಂಚಲಾಗಿತ್ತು.
ಲಕ್ಷಾಂತರ ರೂ. ಬೆಟ್ಟಿಂಗ್: ಗ್ರಾಪಂಚುನಾವಣೆ ಫಲಿತಾಂಶದ ಮೇಲೆ ಲಕ್ಷಾಂತರರೂ.ಗಳ ಬೆಟ್ಟಿಂಗ್ ನಡೆಯುತ್ತಿವೆ. ಇದರಿಂದ ಬೆಳಗ್ಗೆಮತ್ತು ಸಂಜೆಯಾಗುತ್ತಿದ್ದಂತೆ ಹೋಟೆಲ್, ಟೀ ಅಂಗಡಿ,ಅರಳಿ ಕಟ್ಟೆ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳುಬೆಟ್ಟಿಂಗ್ ಕೇಂದ್ರವಾಗಿದ್ದು, ಅಭ್ಯರ್ಥಿಗಳ ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಅಲ್ಲದೆ, ಕುರಿ, ಮೇಕೆ, ಎತ್ತುಗಳನ್ನು ಗೌಪ್ಯವಾಗಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.
ತೆರೆ ಹಿಂದೆ ಹೂಡಿಕೆ: ಗ್ರಾಮಗಳ ಪ್ರಮುಖ ನಾಯಕರು ನೇರವಾಗಿ ಬೆಟ್ಟಿಂಗ್ ಅಕಾಡಕ್ಕೆದುಮುಕ್ಕಿಲ್ಲವಾದರೂ, ತಮ್ಮ ಆಪ್ತರ ಮೂಲಕ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ನಮ್ಮಅಭ್ಯರ್ಥಿಗಳು ಎಷ್ಟು ಲೀಡ್ ಬರುತ್ತವೆ, ಯಾವಬೂತ್‌ನಲ್ಲಿ ಯಾರಿಗೆ ನಷ್ಟ ಲಾಭ ಎನ್ನುವುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಗ್ರಾಮೀಣ ಭಾಗದಲ್ಲಿ ಸೋಲು- ಗೆಲುವಿನ ಲೆಕ್ಕಾಚಾರ ಪ್ರಾರಂಭವಾಗಿದ್ದು, 5 ಸಾವಿರದಿಂದ 1 ಲಕ್ಷ ರೂ. ವರೆಗೆ ಬೆಟ್ಟಿಂಗ್ ಕಟ್ಟುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಗ್ರಾಪಂ ಚುನಾವಣೆಗೆ ಸಂಬಂಧಿಸಿದಂತೆಯಾವುದೇ ಬೆಟ್ಟಿಂಗ್ ನಡೆದಿರುವುದು ಅಧಿಕೃತವಾಗಿ ಕಂಡು ಬಂದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು.ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರೆಅವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.ಒಂದು ವೇಳೆ ಬಿಟ್ಟಿಂಗ್‌ನಲ್ಲಿ ಭಾಗಿಯಾಗಿರುವುದು ಖಚಿತವಾದರೆ ಕಾನೂನು ಕ್ರಮ ಕೈಗೊಳ್ಳುತ್ತವೆ.
– ಕೆ.ಪರಶುರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಂಡ್ಯ
ಈಗಾಗಲೇ ಬೆಟ್ಟಿಂಗ್ ಮೇಲೆ ಕಣ್ಣಿಡಲು ಸಿಪಿಐ ಅವರಿಗೆಸೂಚಿಸಲಾಗಿದೆ.ಸಾರ್ವಜನಿಕರು, ಸಮೀಪದಪೊಲೀಸ್ ಠಾಣೆ, ಚುನಾವಣಾಧಿಕಾರಿಗಳುಅಥವಾ ತಹಶೀಲ್ದಾರ್ ಕಚೇರಿಗೆ ಸಾಕ್ಷಿ ಸಮೇತ ಲಿಖಿತವಾಗಿ ದೂರು ನೀಡಿದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
– ವಿಜಯ್ ಕುಮಾರ್, ತಹಶೀಲ್ದಾರ್, ಮದ್ದೂರು
– ಅಣ್ಣೂರು ಸತೀಶ್