ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸಬಹು ದಾದ ಅಥವಾ ಪರಸ್ಪರ ದ್ವೇಷವನ್ನು ಉಂಟುಮಾಡುವ ಅಥವಾ ವಿವಿಧ ಜಾತಿಗಳು ಮತ್ತು ಸಮುದಾಯಗಳ ನಡುವೆ ಧಾರ್ಮಿಕ ಅಥವಾ ಭಾಷಿಕ ಉದ್ವಿಗ್ನತೆಯನ್ನು ಉಂಟುಮಾಡುವ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಾರದು. ಇತರ ರಾಜಕೀಯ ಪಕ್ಷಗಳ ಪರಸ್ಪರ ಟೀಕೆಗಳು ಅವರವರ ನೀತಿ ಮತ್ತು ಸಾಧನೆಗಳಿಗೆ ಸೀಮಿತವಾಗಿರಬೇಕೇ ಹೊರತು ವೈಯಕ್ತಿಕ ಮಟ್ಟಕ್ಕೆ ಹೋಗಬಾರದು. ಸಾರ್ವಜನಿಕ ಮತ್ತು ರಾಜಕೀಯ ಜೀವನಕ್ಕೆ ಸಂಬಂಧಪಡದ ವೈಯಕ್ತಿಕ ಮತ್ತು ಖಾಸಗಿ ಜೀವನದ ಬಗ್ಗೆ ಟೀಕೆಗಳನ್ನು ಮಾಡಬಾರದು. ಆಧಾರರಹಿತ ಮತ್ತು ತಿರುಚಿದ ಆರೋಪ ಮತ್ತು ಟೀಕೆಗಳಿಂದ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ದೂರವಿರಬೇಕು.
ದೂರು ನೀಡಿ
ಚುನಾವಣ ಅಕ್ರಮ ಮತ್ತು ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ನಾಗರಿಕರು cVIGIL ಆ್ಯಪ್ ಮೂಲಕ ಅಥವಾ 1950 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು.