Advertisement

ಸಂಪುಟ ರಚನೆಯೆಂಬ ಕಸರತ್ತು

06:31 AM May 31, 2019 | Team Udayavani |

ಸಂಪುಟ ರಚನೆ ವಿಶೇಷ ಕಸರತ್ತು. ಪ್ರಧಾನಿ ಆದವರು ಪ್ರತಿಭೆ ಮತ್ತು ಅನುಭವವನ್ನು ಗಮನದಲ್ಲಿಟ್ಟು ಕೊಂಡೇ ಈ ಕಸರತ್ತು ನಡೆಸಬೇಕಾಗುತ್ತದೆ. ಅದರಲ್ಲೂ ಸಮ್ಮಿಶ್ರ ಸರ್ಕಾರದಲ್ಲಿ ಈ ಲೆಕ್ಕಾಚಾರ ಇನ್ನೂ ಕಷ್ಟ. ಭಾರತದ ಎಲ್ಲ ರಾಜ್ಯಗಳು, ಎಲ್ಲ ಸಮುದಾಯಗಳನ್ನೂ ಸಂಪುಟ ರಚನೆಯ ಹದದೊಳಗೆ ತರಬೇಕಾಗುತ್ತದೆ.

Advertisement

ಮೋದಿ 2ನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ತೆಗೆದುಕೊಂಡಿರುವಂತೆಯೇ, ಸಂಪುಟ ರಚನೆಯ ಕಸರತ್ತಿಗೆ ವಿಶೇಷ ಮಹತ್ವ ಬಂದಿತು. ಯಾರು ಯಾವ ಖಾತೆ ಪಡೆಯುತ್ತಾರೆ, ಎಂಬ ಲೆಕ್ಕಾಚಾರ ದಿನದಿನಕ್ಕೂ ತೀವ್ರ ಗೊಂಡಿತ್ತು. ಭಾರತದ ವೈವಿಧ್ಯತೆಯನ್ನು ಗಮನದಲ್ಲಿ ಟ್ಟುಕೊಂಡರೆ, ಸಂಪುಟ ರಚನೆ ವಿಶೇಷ ಕಸರತ್ತು. ಪ್ರಧಾನಿ ಆದವರು ಪ್ರತಿಭೆ ಮತ್ತು ಅನುಭವವನ್ನು ಗಮನದಲ್ಲಿಟ್ಟು ಕೊಂಡೇ ಈ ಕಸರತ್ತು ನಡೆಸಬೇಕಾಗುತ್ತದೆ.

ಅದರಲ್ಲೂ ಸಮ್ಮಿಶ್ರ ಸರ್ಕಾರದಲ್ಲಿ ಈ ಲೆಕ್ಕಾಚಾರ ಇನ್ನೂ ಕಷ್ಟ. ಭಾರತದ ಎಲ್ಲ ರಾಜ್ಯಗಳು, ಎಲ್ಲ ಸಮುದಾಯಗಳನ್ನೂ ಸಂಪುಟ ರಚನೆಯ ಹದದೊಳಗೆ ತರಬೇಕಾಗುತ್ತದೆ. ಬಿಜೆಪಿ ಸ್ವತಂತ್ರವಾಗಿ 303 ಸ್ಥಾನ ಪಡೆದಿದೆ. ಆದರೂ ಮೋದಿ, ಮೈತ್ರಿ ಪಕ್ಷಗಳ ಸದಸ್ಯರನ್ನು ಸಂಪುಟದೊಳಗೆ ಸೇರಿಸಿಕೊಳ್ಳುವ ತೀರ್ಮಾನ ಮಾಡಿದ್ದಾರೆ.

ಮೈತ್ರಿಪಕ್ಷಗಳು, ವಾಜಪೇಯಿ ಮತ್ತು ಮಂತ್ರಿಮಂಡಲ- ಮೊದಲ ಬಾರಿ ಎನ್‌ಡಿಎ ಮೈತ್ರಿಕೂಟವನ್ನು ಪೂರ್ಣಾವಧಿಗೆ ನಡೆಸಿದ ಶ್ರೇಯಸ್ಸು ವಾಜಪೇಯಿಗೆ ಸಲ್ಲುತ್ತದೆ. ಅದಕ್ಕೂ ಮುಂಚೆ ಅವರು ಎರಡು ಬಾರಿ ಈ ಯತ್ನದಲ್ಲಿ ವಿಫ‌ಲವಾಗಿದ್ದರು. 1999ರಷ್ಟೊತ್ತಿಗೆ ತಮ್ಮ ಮೈತ್ರಿಕೂಟದಲ್ಲಿ ಹಲವಾರು ಪಕ್ಷಗಳನ್ನು ಸೇರಿಸಿಕೊಂಡು ವಾಜಪೇಯಿ ಚುನಾವಣೆ ಎದುರಿಸಿದ್ದರು. ಆಗ ಬಿಜೆಪಿಗೆ ಆತ್ಮವಿಶ್ವಾಸವೂ ಬಂದಿತ್ತು, ಸಮ್ಮಿಶ್ರ ಸರ್ಕಾರ ನಡೆಸುವ ಕೌಶಲ್ಯವೂ ಸಿದ್ಧಿಸಿತ್ತು.

1999ರಿಂದ 2004ರವರೆಗೆ ನಡೆದ ಸರ್ಕಾರ ವಾಜಪೇಯಿಗೆ ತೇಪೆ ಹಾಕುವ ಅನಿವಾರ್ಯತೆಯಿತ್ತು. ಕೇವಲ ತನ್ನ ಪಕ್ಷದೊಳಗಿರುವ ಬೇರೇ ಬೇರೆ ಹಿತಾಸಕ್ತಿಗಳು ಮಾತ್ರವಲ್ಲ, ಮೈತ್ರಿಪಕ್ಷಗಳಾದ ಡಿಎಂಕೆ ಮತ್ತದರ ತಮಿಳು ಹಿಂಬಾಲಕರನ್ನು ತೃಪ್ತಿಪಡಿಸುವುದರಿಂದ ಹಿಡಿದು ಜೆಡಿಯು, ತೃಣಮೂಲ ಕಾಂಗ್ರೆಸ್‌, ಅಕಾಲಿದಳ, ಶಿವಸೇನೆವರೆಗಿನ ಭಿನ್ನ ಆಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿತ್ತು.

Advertisement

ಸಮತಾ ಪಕ್ಷದ (ನಂತರ ಜೆಡಿಯುನೊಳಗೆ ವಿಲೀನಗೊಂಡಿತು) ನೇತಾರರಾಗಿದ್ದ ಜಾರ್ಜ್‌ ಫೆರ್ನಾಂಡಿಸ್‌, ಆಗ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸೇರಿದ ಮೊದಲ ಪ್ರಮುಖ ಜಾತ್ಯತೀತ ನಾಯಕ. ಅದಕ್ಕೆ ಪ್ರತಿಫ‌ಲವಾಗಿ ಅವರಿಗೆ ರಕ್ಷಣಾ ಖಾತೆಯನ್ನು ನೀಡಲಾಯಿತು. ಇದರ ಜೊತೆಗೆ ಭದ್ರತೆಗೆ ಸಂಬಂಧಿಸಿದಂತೆ ಸಂಪುಟ ಸಮಿತಿಯಲ್ಲೂ ಒಂದು ಸ್ಥಾನವಿತ್ತು.

ಫೆರ್ನಾಂಡಿಸ್‌ ಅವರ ಸಹವರ್ತಿಗಳಾದ ನಿತೀಶ್‌ ಕುಮಾರ್‌ ಮತ್ತು ಶರದ್‌ ಯಾದವ್‌ ಅವರಿಗೆ ಕ್ರಮವಾಗಿ ರೈಲ್ವೆ ಮತ್ತು ಕಾರ್ಮಿಕ ಸಚಿವಾಲಯಗಳನ್ನು ನೀಡಲಾಯಿತು. ಮೊದಲು ಭಾರೀ ಕೈಗಾರಿಕಾ ಸಚಿವರಾಗಿದ್ದ ಶಿವಸೇನಾದ ಮನೋಹರ್‌ ಜೋಷಿಯನ್ನು ನಂತರ ಲೋಕಸಭಾ ಸ್ಪೀಕರ್‌ ಆಗಿಸಲಾಯಿತು. ಶಿವಸೇನಾದ ಇನ್ನೊಬ್ಬ ನಾಯಕ ಸುರೇಶ್‌ ಪ್ರಭು ಅವರಿಗೆ ಇಂಧನ ಖಾತೆ ನೀಡಲಾಯಿತು.

ಎಲ್‌ಜೆಪಿ ನಾಯಕ ರಾಂ ವಿಲಾಸ್‌ ಪಾಸ್ವಾನ್‌ ಅವರಿಗೆ ಆಕರ್ಷಕ ಸಂವಹನ ಖಾತೆ ನೀಡ ಲಾಯಿತು. ಬಿಜೆಡಿಯ ನವೀನ್‌ ಪಟ್ನಾಯಕ್‌ಗೆ ಗಣಿಗಾರಿಕೆ, ಡಿಎಂಕೆಯ ಮುರಸೋಲಿ ಮಾರನ್‌, ಟಿ.ಆರ್‌.ಬಾಲುಗೆ ಕ್ರಮವಾಗಿ ವಾಣಿಜ್ಯ ಮತ್ತು ಕೈಗಾರಿಕೆ, ಪರಿಸರ ಮತ್ತು ಅರಣ್ಯ ಖಾತೆಯನ್ನು ಹಂಚಲಾಯಿತು. ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾಗೆ ಅವರು ಸಮ್ಮಿಶ್ರ ಸರ್ಕಾರದಲ್ಲಿ ಇರುವವರೆಗೆ ರೈಲ್ವೆ ಖಾತೆಯನ್ನು ವಹಿಸಲಾಗಿತ್ತು.

ಪ್ರಾದೇಶಿಕತೆ ಮತ್ತು ಸಮುದಾಯಗಳು: ಉತ್ತರಪ್ರದೇಶವನ್ನು ಸ್ವತಃ ವಾಜಪೇಯಿ ಪ್ರತಿನಿಧಿ ಸುತ್ತಿದ್ದರು. ಅವರ ಜೊತೆಗೆ ಮುರಳಿ ಮನೋಹರ್‌ ಜೋಷಿ, ಸಂತೋಷ್‌ ಗಂಗ್ವಾರ್‌, ಮನೇಕಾ ಗಾಂಧಿ ಇನ್ನಿತರರೂ ಇದ್ದರು. ಅಡ್ವಾಣಿ ಗುಜರಾತನ್ನು ಪ್ರತಿನಿಧಿ ಸುತ್ತಿದ್ದರು. ಜಸ್ವಂತ್‌ ಸಿಂಗ್‌ ರಾಜಸ್ಥಾನದ ಮುಖ ವಾಗಿದ್ದರು. ಬಿಹಾರಕ್ಕೆ ದೊಡ್ಡ ಪಾಲು ಸಿಕ್ಕಿತ್ತು.

ಯಶ್ವಂತ್‌ ಸಿನ್ಹಾ, ನಿತೀಶ್‌ ಕುಮಾರ್‌, ಶತೃಘ್ನ ಸಿನ್ಹಾ, ಶಹನವಾಜ್‌ ಹುಸೇನ್‌, ರವಿಶಂಕರ್‌ ಪ್ರಸಾದ್‌, ಸಂಜಯ್‌ ಪಾಸ್ವಾನ್‌, ರಾಜೀವ್‌ ಪ್ರತಾಪ್‌ ರೂಡಿ ಎಲ್ಲ ಬಿಹಾರದ ಪ್ರತಿನಿಧಿಗಳು. ಮಧ್ಯಪ್ರದೇಶದಿಂದ ಸುಂದರ್‌ಲಾಲ್‌ ಪತ್ವಾ, ಉಮಾಭಾರತಿ, ಸುಮಿತ್ರಾ ಮಹಾಜನ್‌, ಪ್ರಹ್ಲಾದ್‌ ಪಟೇಲ್‌ ಸಚಿವರಾಗಿದ್ದರು. ಆದಿವಾಸಿಗಳಾದ ಕರಿಯ ಮುಂಡಾ, ಬಾಬುಲಾಲ್‌ ಮರಾಂಡಿ ಜಾರ್ಖಂಡ್‌ನ‌ ಪ್ರತಿನಿಧಿಗಳಾಗಿದ್ದರು. ಶಿವಸೇನಾ ನಾಯಕರನ್ನು ಹೊರತುಪಡಿಸಿಯೂ, ಮಹಾ ರಾಷ್ಟ್ರದಿಂದ ಹಲವು ನಾಯಕರು ಸಚಿವ ಸಂಪುಟ ಸೇರಿದ್ದರು.

ರಾಮ್‌ನಾಯಕ್‌, ಪ್ರಮೋದ್‌ ಮಹಾಜನ್‌, ಬಾಳಾ ಸಾಹೇಬ್‌ ವಿಖೆ ಪಾಟೀಲ್‌, ಅಣ್ಣಾ ಸಾಹೇಬ್‌ ಪಾಟೀಲ್‌, ವೇದಪ್ರಕಾಶ್‌ ಗೋಯಲ್‌, ಜಯವಂತಿಬೆನ್‌ ಮೆಹ್ತಾ ಸರ್ಕಾರದಲ್ಲಿದ್ದರು. ಆಗ ಆಂಧ್ರಪ್ರದೇಶದಿಂದ ಬಿಜೆಪಿಗೆ ಬಹುತೇಕ ಸಂಸದರೇ ಇರಲಿಲ್ಲ. ಆದರೂ ವೆಂಕಯ್ಯ ನಾಯ್ಡು, ಬಂಗಾರು ಲಕ್ಷ್ಮಣ್‌, ಬಂಡಾರು ದತ್ತಾತ್ರೇಯ, ವಿದ್ಯಾಸಾಗರ್‌ ರಾವ್‌ ಸರ್ಕಾರದಲ್ಲಿ ಸೇರಿಕೊಂಡಿದ್ದರು. ತಮಿಳುನಾಡು ಕೂಡ ಹಲವು ಸಚಿವರನ್ನು ಹೊಂದಿತ್ತು.

ದ್ರಾವಿಡ ಪಕ್ಷಗಳನ್ನು ಅವರು ಪ್ರತಿನಿಧಿಸುತ್ತಿದ್ದರು. ಪಿ.ಆರ್‌.ಕುಮಾರಮಂಗಲಂ, ತಿರುನವುಕ್ಕರಸರ್‌ ಆಗ ಸ್ಥಾನ ಪಡೆದಿದ್ದರು. ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಓಮರ್‌ ಅಬ್ದುಲ್ಲಾ, ಚಮನ್‌ಲಾಲ್‌ ಗುಪ್ತಾ ಅವರು ಜಮ್ಮುಕಾಶ್ಮೀರದ ಪ್ರತಿನಿಧಿಗಳಾಗಿ ಸಂಪುಟ ಸೇರಿದ್ದರು. ವಾಜಪೇಯಿ, ಜೋಷಿ, ಸುಷ್ಮಾ ಸ್ವರಾಜ್‌, ಮಹಾಜನ್‌, ಜೇಟ್ಲಿ, ಶಾಂತಕುಮಾರ್‌, ಅನಂತ್‌ ಕುಮಾರ್‌ ಬ್ರಾಹ್ಮಣರಾಗಿದ್ದರೆ, ಜಸ್ವಂತ್‌ ಸಿಂಗ್‌, ರಾಜನಾಥ್‌ ಸಿಂಗ್‌ ಮತ್ತು ರೂಡಿ ರಜಪೂತ್‌ ಸಮುದಾಯಕ್ಕೆ ಸೇರಿದ್ದರು.

ರಾಮ್‌ ಜೇಠ್ಮಲಾನಿಯಂತೆ ಅಡ್ವಾಣಿ ಸಿಂಧಿ ಸಮುದಾಯದ ಮುಖವಾಗಿದ್ದರು. ಪಾಸ್ವಾನ್‌, ಸತ್ಯನಾರಾಯಣ್‌ ಜತಿಯಾ, ಕೈಲಾಶ್‌ ಮೇಘಾಲ್‌, ಸಂಜಯ್‌ ಪಾಸ್ವಾನ್‌ ದಲಿತ ವರ್ಗದವರಾಗಿದ್ದರು. ಉಮಾ ಭಾರತಿ, ಪ್ರಹ್ಲಾದ್‌ ಪಟೇಲ್‌ ಲೋಧ್‌ ರಜಪೂತರಾಗಿದ್ದರು. ಸುಂದರ್‌ಲಾಲ್‌ ಪತ್ವಾ ಮತ್ತು ವೇದಪ್ರಕಾಶ್‌ ಗೋಯಲ್‌ ವೈಶ್ಯರಾಗಿದ್ದರು.

ಸಾಹಿಬ್‌ ಸಿಂಗ್‌ ವರ್ಮ ಜಾಟರಾಗಿದ್ದರೆ, ಇಬ್ಬರು ಸಿನ್ಹಾಗಳು ಮತ್ತು ಪ್ರಸಾದ್‌ ಕಾಯಸ್ಥರಾಗಿದ್ದರು. ನಿತೀಶ್‌, ಶರದ್‌ ಯಾದವ್‌, ನಾಗಮಣಿ ಇತರೆ ಹಿಂದುಳಿದ ಜಾತಿಯವರಾಗಿದ್ದರು. ಇಂಡಿಯನ್‌ ಫೆಡರಲ್‌ ಡೆಮಾಕ್ರ್ಯಾಟಿಕ್‌ ಪಕ್ಷದ ಪಿ.ಸಿ.ಥಾಮಸ್‌ ಕೇರಳ ಮತ್ತು ಕೈಸ್ತ ಸಮುದಾಯದ ಗುರುತಾಗಿದ್ದರು. ಫೆರ್ನಾಂಡಿಸ್‌ ಬಿಹಾರ ಮತ್ತು ಕೈಸ್ತ ಸಮುದಾಯದ ಧ್ವನಿಯಾಗಿದ್ದರು. ಮಮತಾ ಪ.ಬಂಗಾಳಕ್ಕೇ ಆಶಯಗಳ ಸಂಕೇತವಾಗಿದ್ದರು.

ಮನಮೋಹನ್‌ ಸಂಪುಟ: ಒಂದು ಜನಪ್ರಿಯ ವದಂತಿಯೊಂದು ಈಗಲೂ ಚಾಲ್ತಿಯಲ್ಲಿದೆ. ವಾಜಪೇಯಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರಟಾಗ, ನೂತನ ಪ್ರಧಾನಿ ಮನಮೋಹನ್‌ಗೆ ಒಂದು ಸಲಹೆ ನೀಡಿದ್ದರಂತೆ. ಭದ್ರತೆಗೆ ಸಂಬಂಧಪಟ್ಟ ಖಾತೆಯನ್ನು ಮೈತ್ರಿಪಕ್ಷಗಳಿಗೆ ನೀಡಲೇಬೇಡಿ ಎನ್ನುವುದು ಆ ಸಲಹೆಯಾಗಿತ್ತಂತೆ! ಅದರ ಪರಿಣಾಮವೋ ಏನೋ, ನಾಲ್ಕು ಅಗ್ರಖಾತೆಗಳಾದ ಗೃಹ, ರಕ್ಷಣೆ, ವಿದೇಶಾಂಗ ಮತ್ತು ವಿತ್ತವನ್ನು ಕಾಂಗ್ರೆಸ್‌ ತಾನೇ ಇಟ್ಟುಕೊಂಡಿತ್ತು.

2009ರ ಲೋಕಸಭಾ ಚುನಾವಣೆಯಲ್ಲಿ ಯುಪಿಎ 262 ಸ್ಥಾನ ಗೆದ್ದಿತು, ಇವುಗಳಲ್ಲಿ 206 ಸ್ಥಾನಗಳು ಕಾಂಗ್ರೆಸ್‌ನದ್ದೇ ಆಗಿದ್ದವು. ಸೋನಿಯಾ-ಮನಮೋಹನ್‌ ಜೋಡಿ ಎನ್‌ಡಿಎದ ಮಾದರಿಯನ್ನು ಅನುಸರಿಸಿ, ಮೈತ್ರಿಪಕ್ಷಗಳಿಗೆ ಪ್ರಮುಖ ಖಾತೆಗಳನ್ನು ನೀಡಿತು. ಎನ್‌ಸಿಪಿ ಮುಖ್ಯಸ್ಥ ಶರದ್‌ಪವಾರ್‌ ಕೃಷಿ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸರಬರಾಜು ಸಚಿವರಾದರೆ, ಡಿಎಂಕೆಯ ಟಿಆರ್‌ ಬಾಲುಗೆ ಸಾರಿಗೆ, ಆರ್‌ಜೆಡಿಯ ಲಾಲೂ ಪ್ರಸಾದ್‌ಗೆ ರೈಲ್ವೆ, ಪಾಸ್ವಾನ್‌ಗೆ ರಾಸಾಯನಿಕ-ರಸಗೊಬ್ಬರ ಇಲಾಖೆ ಸಿಕ್ಕಿತ್ತು.

ಎ.ಆರ್‌. ಅಂಟುಲೆ, ಸೈಫ‌ುದ್ದೀನ್‌ ಸೋಝ್ ಮತ್ತು ಇ.ಅಹಮ್ಮದ್‌ನಂಥ ಮುಸ್ಲಿಂ ನಾಯಕರು, ಎ.ಕೆ. ಆ್ಯಂಟನಿ, ಆಸ್ಕರ್‌ರಂಥ ಕ್ರಿಶ್ಚಿಯನ್‌ ನಾಯಕರು, ಸುಶೀಲ್‌ ಶಿಂದೆ, ಮೀರಾ ಕುಮಾರ್‌, ಮಹಾ ವೀರ್‌ ಪ್ರಸಾದ್‌ರಂಥ ದಲಿತ ಪ್ರತಿನಿಧಿಗಳು, ಸಂತೋಷ್‌ ಮೋಹನ್‌, ಹ್ಯಾಂಡಿಕ್‌ರಂಥ ಈಶಾನ್ಯದ ಪ್ರತಿನಿಧಿಗಳು ಕೇಂದ್ರ ಸಂಪುಟದ ಭಾಗವಾದರು. ಯುಪಿಎ-2ರ ಸಚಿವ ಸಂಪುಟದಲ್ಲೂ ಯುಪಿಎ-1ರಲ್ಲಿದ್ದ ಅನೇಕ ನಾಯಕರು ಇದ್ದರಾದರೂ, 2ನೆ ಬಾರಿ ಅಲ್ಪ ಸಂಖ್ಯಾತರು, ದಲಿತರಿಗೆ ಹೆಚ್ಚು ಪ್ರತಿನಿಧಿತ್ವ ಸಿಕ್ಕಿತ್ತು. ಇವರಲ್ಲಿ ಆ್ಯಂಟನಿ, ಗುಲಾಂ ನಬಿ, ಸಲ್ಮಾನ್‌ ಖುರ್ಷಿದ್‌, ಮಲ್ಲಿಕಾರ್ಜುನ ಖರ್ಗೆ ಕೂಡ ಇದ್ದರು.

ಮೋದಿ ಮೊದಲ ಕ್ಯಾಬಿನೆಟ್‌: ಪೂರ್ಣ ಬಹುಮತದೊಂದಿಗೆ 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿಯವರು ತಮ್ಮ ಮಿತ್ರಪಕ್ಷಗಳಿಗೆ ಸಂಪುಟದಲ್ಲಿ ಅಷ್ಟೊಂದು ಮನ್ನಣೆ ನೀಡಲಿಲ್ಲ. ಆದಾಗ್ಯೂ ಎನ್‌ಜೆಪಿಯ ಪಾಸ್ವಾನ್‌, ಶಿವಸೇನೆಯ ಅನಂತ ಗೀತೆ, ಮತ್ತು ಎಸ್‌ಎಡಿಯ ಹರಸಿಮ್ರತ್‌ ಕೌರ್‌ಗೆ ತಮ್ಮ ಸರ್ಕಾರದಲ್ಲಿ ಅಧಿಕಾರ ನೀಡಿದರಾದರೂ, ಇವರಿಗೆಲ್ಲ ಪ್ರಮುಖ ಸ್ಥಾನಗಳನ್ನೇನೂ ನೀಡಲಿಲ್ಲ. ಜೆಡಿಯುಗಂತೂ ರಾಜ್ಯಸಭೆಯಲ್ಲಿ ಡೆಪ್ಯೂಟಿ ಚೇರ್‌ವೆುನ್‌ ಸ್ಥಾನ ದಕ್ಕಿತ್ತು..

(ಕೃಪೆ: ದಿ ಇಂಡಿಯನ್‌ ಎಕ್ಸ್‌ಪ್ರೆಸ್‌)

Advertisement

Udayavani is now on Telegram. Click here to join our channel and stay updated with the latest news.