Advertisement

ಐಡಿಯಾ-ವೋಡಾಫೋನ್‌ಗೆ ಅಗ್ರಸ್ಥಾನ

06:00 AM Sep 01, 2018 | Team Udayavani |

ನವದೆಹಲಿ: ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ಐಡಿಯಾ ಸೆಲ್ಯುಲರ್‌ ಹಾಗೂ ವೋಡಾಫೋನ್‌ ಅಧಿಕೃತವಾಗಿ ವಿಲೀನಗೊಂಡಿ ರುವುದಾಗಿ ಘೋಷಿಸಿದ್ದು, ಇದರಿಂದಾಗಿ ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

Advertisement

ಕಂಪನಿಯು ಒಟ್ಟಾಗಿ 40.08 ಕೋಟಿ ಸಕ್ರಿಯ ಗ್ರಾಹಕರನ್ನು ಹೊಂದಿದ್ದು, ದೇಶದ ಒಟ್ಟು ಮಾರುಕಟ್ಟೆಯ ಶೇ. 35 ರಷ್ಟು ಪಾಲನ್ನು ಹೊಂದಿದೆ. ಇದರಿಂದಾಗಿ ಕಳೆದ 15 ವರ್ಷಗಳಿಂದಲೂ ದೇಶದ ನಂಬರ್‌ 1 ಟೆಲಿಕಾಂ ಕಂಪನಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ಏರ್‌ಟೆಲ್‌ ಕೆಲವು ವಲಯಗಳಲ್ಲಿ 2ನೇ ಸ್ಥಾನಕ್ಕೆ ಕುಸಿಯುವಂತಾಗಿದೆ. ವಿಲೀನ ಗೊಂಡ ಸಂಸ್ಥೆಯು 9 ವಲಯಗಳಲ್ಲಿ  ದೊಡ್ಡ ಟೆಲಿಕಾಂ ಕಂಪನಿಯಾಗಿರಲಿದೆ. ಕುಮಾರ ಮಂಗಲಂ ಬಿರ್ಲಾ  ಈಗಲೂ ವಿಲೀನಗೊಂಡ ಸಂಸ್ಥೆಯ ಚೇರ್ಮನ್‌ ಆಗಿರಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next