Advertisement

ಮೋದಿ ವಿರೋಧಿಗಳಿಗೆ ವಿಕೆ ಸಿಂಗ್‌ ಮಾಸ್ಕಿಟೋ ಟ್ವೀಟ್‌, ವೈರಲ್‌

10:51 AM Mar 06, 2019 | udayavani editorial |

ಹೊಸದಿಲ್ಲಿ : ಪಾಕಿಸ್ಥಾನದ ಬಾಲಾಕೋಟ್‌ ನಲ್ಲಿನ ಜೆಇಎಂ ಉಗ್ರ  ತರಬೇತಿ ಶಿಬಿರದ ಮೇಲೆ ಭಾರತೀಯ ವಾಯು ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ  ಸತ್ತ ಉಗ್ರರ ಸಂಖ್ಯೆ ಎಷ್ಟು ಎಂಬ ವಿಷಯದಲ್ಲಿ ಕೇಂದ್ರ ಸರಕಾರ ಮತ್ತು ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳ ನಡುವೆ ತೀವ್ರ  ವಾಕ್ಸಮರ ಜಾರಿಯಲ್ಲಿರುವಂತೆಯೇ ಕೇಂದ್ರ ಸಚಿವ ವಿಕೆ ಸಿಂಗ್‌ ಅವರು ಮೋದಿ ವಿರೋಧಿ ತಂಡವನ್ನು ಕುಟುಕುವ ಸಲುವಾಗಿ ಮಾಸ್ಕಿಟೋ ಟ್ವೀಟ್‌ ಮಾಡಿದ್ದಾರೆ. ಅದೀಗ ವೈರಲ್‌ ಆಗಿದೆ.

Advertisement

ಈ ಮಾಸ್ಕಿಟೋ ಟ್ವೀಟ್‌ನಲ್ಲಿ ವಿಕೆ ಸಿಂಗ್‌ ಹೀಗೆ ಬರೆದಿದ್ದಾರೆ : 

ಇವತ್ತು ನಸುಕಿನ 3.30ರ ವೇಳೆ ತುಂಬಾ ಸೊಳ್ಳೆಗಳಿದ್ದವು; ನಾನು ಅವುಗಳನ್ನು ಕೊಲ್ಲಲು ಹಿಟ್‌ ಬಳಸಿದೆ. ಅದಾಗಿ ನಾನು ಸತ್ತ ಸೊಳ್ಳೆಗಳು ಎಷ್ಟೆಂಬುದನ್ನು ಲೆಕ್ಕ ಹಾಕಿ ಕೂರಬೇಕೇ ಅಥವಾ ಸುಮ್ಮನೆ ಹೊದ್ದು ಮಲಗಬೇಕೇ?

ವಿಕೆ ಸಿಂಗ್‌ ಅವರು ಈ ಮಾಸ್ಕಿಟೋ ಟ್ವೀಟ್‌ ಅನ್ನು ಹಿಂದಿಯಲ್ಲಿ ಮಾಡಿರುವುದು ಕುತೂಹಲಕಾರಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next