Advertisement

Vivo V20 Pro ಡಿಸೆಂಬರ್ 2ರಂದು ಭಾರತದಲ್ಲಿ ಬಿಡುಗಡೆ: ಬೆಲೆ, ವೈಶಿಷ್ಟ್ಯಗಳೇನು ಗೊತ್ತಾ ?

08:30 PM Nov 28, 2020 | Mithun PG |

ನವದೆಹಲಿ: ವಿವೋ ಸ್ಮಾರ್ಟ್ ಫೋನ್ ಕೊನೆಗೂ ಹೊಸ ಅವತರಣಿಕೆಯೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ. ವಿವೋ ಸ್ಮಾರ್ಟ್ ಫೋನಿನ ವಿ20 ಪ್ರೋ ಆವೃತ್ತಿ ಭಾರತದಲ್ಲಿ ಡಿಸೆಂಬರ್ 2 ರಂದು  ಬಿಡುಗಡೆಗೊಳ್ಳಲಿದ್ದು, ಈ ಕುರಿತು ಕಂಪೆನಿಯ ಅಧಿಕೃತ ಮಾಹಿತಿ ಹೊರಬಿದ್ದಿದೆ.

Advertisement

ಸ್ಮಾರ್ಟ್ ಫೋನಿನ  ಟೀಸರ್ ಕೂಡ ರಿಲೀಸ್ ಆಗಿದ್ದು, ಹೊಸ ಸ್ಮಾರ್ಟ್ ಪೋನಿನ ಕುರಿತಾಗಿ ಸಂಸ್ಥೆಯು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಅದಾಗ್ಯೂ  ಬೆಲೆ, ಸ್ಮಾರ್ಟ್ ಫೋನ್ ಫೀಚರ್ ಗಳ ಕುರಿತಾದ ಮಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದ್ದು, ಆ ಕುರಿತ ಮಾಹಿತಿ ಇಲ್ಲಿದೆ.

ವಿವೋ ವಿ20 ಪ್ರೋ  ವಿಶೇಷತೆಗಳು:

ವಿವೋ ವಿ20 ಪ್ರೋ 5G  ಸಾಮರ್ಥ್ಯವಿರುವ ಸ್ಮಾರ್ಟ್ ಫೋನ್ ಆಗಿದ್ದು, 6.44 ಇಂಚಿನ ಫುಲ್ ಹೆಚ್ ಡಿ ಪ್ಲಸ್ ಅಮೋಲ್ಡ್ ಡಿಸ್ ಪ್ಲೇ ಯೊಂದಿಗೆ ಮುಂಭಾಗದಲ್ಲಿ ಎರಡು ಕ್ಯಾಮಾರಗಳನ್ನು ಹೊಂದಿದೆ.  ಮಾತ್ರವಲ್ಲದೆ ಡಿಸ್ ಪ್ಲೇಯಲ್ಲಿ ಇನ್ ಫಿಂಗರ್ ಪ್ರಿಂಟ್ ಸೆನ್ಸಾರ್ ಕೂಡ ಅಳವಡಿಸಲಾಗಿದೆ.

ಇದನ್ನೂ ಓದಿ: ಆದಿಪುರುಷನಿಗೆ ಜೊತೆಯಾಗಲಿದ್ದಾರಂತೆ ಕೃತಿ ಕೃತಿ ಸನನ್

Advertisement

ಸ್ನ್ಯಾಪ್ ಡ್ರ್ಯಾಗನ್ 765ಜಿ ಚಿಪ್ ಸೆಟ್ ನೊಂದಿಗೆ 8ಜಿಬಿ RM ಮತ್ತು 128 ಜಿಬಿ ಸ್ಟೋರೇಜ್ ಅನ್ನು ಒಳಗೊಂಡಿದೆ. ಕ್ಯಾಮಾರ ವಿಭಾಗ ಕೂಡ ಅದ್ಬುತವಾಗಿದ್ದು, 64 ಎಂಪಿ ಪ್ರಾಥಮಿಕ, 8 ಎಂಪಿ ವೈಡ್ ಆ್ಯಂಗಲ್ ಲೆನ್ಸ್, 2 ಎಂಪಿ ಸೆನ್ಸಾರ್ ಅನ್ನು ಹೊಂದಿದೆ. ಮುಂಭಾಗದಲ್ಲೂ ಡ್ಯುಯೆಲ್ ಲೆನ್ಸ್ ಸೆಟಪ್ ಹೊಂದಿದ್ದು, 48 ಮೆಗಾಫಿಕ್ಸೆಲ್ ಪ್ರಾಥಮಿಕ ಮತ್ತು 8 ಎಂಪಿ ವೈಡ್ ಆ್ಯಂಗಲ್ ಲೆನ್ಸ್ ಇದೆ. 4,000 mAh ಬ್ಯಾಟರಿ ಸಾಮರ್ಥ್ಯವಿದ್ದು, 33 W ಫ್ಲ್ಯಾಶ್ ಚಾರ್ಜಿಂಗ್ ವ್ಯವಸ್ಥೆ ಹೊಂದಿದೆ.

ಬೆಲೆ: ವಿವೋ ವಿ20 ಪ್ರೋ ಬೆಲೆ ಸುಮಾರು 29,990 ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:  ಸಂತೋಷ್ ಆತ್ಮಹತ್ಯೆ ಪ್ರಯತ್ನದ ಹಿಂದೆ ವಿಜಯೇಂದ್ರ ಒತ್ತಡ ಇರಬಹುದು: ಕಾಂಗ್ರೆಸ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next