Advertisement
ಮಾಜಿ ಚಾಂಪಿಯನ್ ಜೈಪುರ್ ತಂಡ ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿತ್ತು. ನಿರಂತರವಾಗಿ ಡೆಲ್ಲಿಗಿಂತ ಹೆಚ್ಚಿನ ಅಂಕವನ್ನು ಕಾಯ್ದುಕೊಳ್ಳುತ್ತ ಸಾಗಿತ್ತು. ಹೀಗಾಗಿ ಮೊದಲ ಅವಧಿ ಅಂತ್ಯದಲ್ಲಿ ಜೈಪುರ 16-9 ರಿಂದ ಭಾರೀ ಮುನ್ನಡೆ ಪಡೆದಿತ್ತು.
ಮೊದಲ ಅವಧಿಯಲ್ಲಿ ಜೈಪುರ್ ತಂಡದ ಸಂಘಟಿತ ಪ್ರದರ್ಶನದಿಂದ ಡೆಲ್ಲಿ ತಂಡವನ್ನು 1 ಬಾರಿ ಆಲೌಟ್ ಮಾಡಿ 2 ಅಂಕವನ್ನು ಪಡೆದಿತ್ತು. ಆದರೆ 2ನೇ ಅವಧಿಯಲ್ಲಿ ಡೆಲ್ಲಿ ತಿರುಗಿ ಬಿದ್ದ ಪರಿಣಾಮ ಜೈಪುರ್ 2 ಬಾರಿ ಆಲೌಟ್‌ಗೆ ತುತ್ತಾಯಿತು. ಹೀಗಾಗಿ ಡೆಲ್ಲಿ ತಂಡಕ್ಕೆ 4 ಆಲೌಟ್ ಅಂಕ ದೊರೆಯಿತು. ಉಳಿದಂತೆ ಜೈಪುರ್ 15 ರೈಡಿಂಗ್ ಅಂಕ ಪಡೆದರೆ, ಡೆಲ್ಲಿ 13 ಅಂಕವನ್ನು ಪಡೆಯಿತು. ಉತ್ತಮ ರಕ್ಷಣಾ ಪಡೆಯನ್ನು ಹೊಂದಿದ್ದ ಡೆಲ್ಲಿ 12 ಟ್ಯಾಕಲ್ ಅಂಕ ಪಡೆಯಿತು. ಆದರೆ ಜೈಪುರ್ ತಂಡ ವೈಫಲ್ಯ ಎದುರಿಸಿದ್ದು, ರಕ್ಷಣಾ ವಿಭಾಗದಲ್ಲಿ. ಮಂಜಿತ್ ಚಿಲ್ಲರ್ ಸೇರಿದಂತೆ ಸ್ಟಾರ್ ಆಟಗಾರರು ವೈಫಲ್ಯ ಎದುರಿಸಿದರು. ಇದರ ಫಲವಾಗಿ ಜೈಪುರ್ ಕೇವಲ 4 ಟ್ಯಾಕಲ್ ಅಂಕವನ್ನು ಪಡೆಯಿತು.
Related Articles
Advertisement
ಕಬಡ್ಡಿಯ ಶುಕ್ರವಾರದ ಎರಡನೇ ಪಂದ್ಯದಲ್ಲಿ ಪುನೇರಿ ಪಲ್ಟಾನ್ಸ್ ತಂಡವು ಯು ಮುಂಬಾ ತಂಡವನ್ನು 33-21 ಅಂಕಗಳಿಂದ ಸೋಲಿಸಿತು. ಮಹಾರಾಷ್ಟ್ರದ ಎರಡು ಬಲಿಷ್ಠ ತಂಡಗಳ ನಡುವಣ ಈ ಹೋರಾಟದಲ್ಲಿ ಗೆಲುವಿಗಾಗಿ ಎರಡೂ ತಂಡಗಳು ಶಕ್ತಿಮೀರಿ ಪ್ರಯತ್ನ ನಡೆಸಿದ್ದವು. ಆದರೆ ಅಂತಿಮವಾಗಿ ಪುನೇರಿ ಜಯಭೇರಿ ಬಾರಿಸಿತು.