Advertisement

ವಿವೇಕಾನಂದರ ಚಿಂತನೆ ಯುವ ಜನಾಂಗಕ್ಕೆ ಸ್ಪೂರ್ತಿ: ಪಾಟೀಲ್‌

02:58 PM Jan 15, 2022 | Team Udayavani |

ಸುರಪುರ: ರಾಷ್ಟ್ರದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರ ತತ್ವ, ಚಿಂತನೆ, ವಿಚಾರಗಳು ಯುವ ಜನಾಂಗಕ್ಕೆ ಸ್ಫೂರ್ತಿ ಮತ್ತು ಪ್ರೇರಣೆಯಾಗಿವೆ ಎಂದು ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್‌ ಹೇಳಿದರು.

Advertisement

ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ನೆಹರು ಯುವ ಕೇಂದ್ರ ಕಲಬುರಗಿ, ಸಗರನಾಡು ಯುವಕ ಸಂಘದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಯುವದಿನ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ನಿಮಿತ್ತ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಯಾಗೋ ಸಮ್ಮೇಳನದ ಮೂಲಕ ವಿಶ್ವದ ಗಮನ ಸೆಳೆದ ಸ್ವಾಮಿ ವಿವೇಕಾನಂದರು ಈ ರಾಷ್ಟ್ರದ ಯುವ ಜನಾಂಗಕ್ಕಾಗಿ ಅನೇಕ ವಿಚಾರ, ಚಿಂತನೆ, ಆಲೋಚನೆಗಳನ್ನು ತಿಳಿಸಿದ್ದಾರೆ. ಯುವ ಜನಾಂಗಕ್ಕೆ ವಿವೇಕಾನಂದರ ವಿಚಾರಗಳು ಅತ್ಯಂತ ಅವಶ್ಯಕ ಎಂದು ಹೇಳಿದರು.

ಯುವಕ ಸಂಘದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಾ| ಮಲ್ಲಿಕಾರ್ಜುನ ಕುಲಕರ್ಣಿ ಮಾತನಾಡಿದರು. ಬಸವೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ವೀರೇಶ ಹಳಿಮನಿ, ಶಾಂತು ನಾಯಕ, ಕರ್ನಾಟಕ ನವನಿರ್ಮಾಣ ವೇದಿಕೆಯ ಅಧ್ಯಕ್ಷ ಶಿವರಾಜ ಕಲಿಕೇರಿ, ಶ್ರೀಗುರು ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದ್ಯಾಪುರ, ಪೊಲೀಸ್‌ ಪೇದೆ ದಯಾನಂದ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next