Advertisement

ವಿವೇಕಾನಂದರ ಆದರ್ಶ ಯುವಜನರಿಗೆ ಸ್ಫೂರ್ತಿ; ಎಚ್‌.ಕೆ. ಉಮೇಶ

04:38 PM Jan 16, 2021 | Nagendra Trasi |

ಸಿಂದಗಿ: ಸ್ವಾಮಿ ವಿವೇಕಾನಂದರ ಹೆಸರು ಕೇಳಿದರೆ ಮೈ ರೋಮಾಂಚನ ಗೊಳ್ಳುತ್ತದೆ. ಕಣಕಣದಲ್ಲೂ ದೇಶ ಭಕ್ತಿಯನ್ನು ತುಂಬಿಕೊಂಡಿದ್ದ ಮಹಾನ್‌ ಚೇತನ ಭಾರತದ ವೈಶಿಷ್ಟ್ಯವನ್ನು ವಿಶ್ವಕ್ಕೆ ಪರಿಚಯಿಸಿದವರು. ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ ಎಂದು ನ್ಯಾಯಾಧೀಶ ಎಚ್‌.ಕೆ. ಉಮೇಶ ಹೇಳಿದರು.

Advertisement

ಶುಕ್ರವಾರ ಪಟ್ಟಣದ ತಾಲೂಕು ಶಿಕ್ಷಣ ಪ್ರಸರಕ ಮಂಡಳಿಯ ಸಿ.ಎಂ. ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಸಭಾಭವನದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ, ಮಹಾವಿದ್ಯಾಲಯದ ಐಕ್ಯೂಎಎಸ್‌, ಎನ್‌ಸಿಸಿ, ಎನ್ನೆಸ್ಸೆಸ್‌ ಘಟಕಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯಯುವ ದಿನ, ಭಾರತ ಸಂವಿಧಾನ ದಿನ ಹಾಗೂ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿವೇಕಾನಂದರಿಗೆ ಯುವಶಕ್ತಿ ಮೇಲೆ ಅಪಾರವಾದ ನಂಬಿಕೆ ಇತ್ತು. ಯುವಶಕ್ತಿಗಿಂತ ಮಿಗಿಲಾದುದ್ದು ಯಾವುದು ಇಲ್ಲ. ನನಗೆ 100 ಜನ ಗಟ್ಟಿ ಮುಟ್ಟಾದ ಯುವಕರನ್ನು ಕೊಡಿ, ನಾವು ನವಭಾರತವನ್ನು ನಿರ್ಮಾಣ ಮಾಡುತ್ತೇನೆ ಎನ್ನುತ್ತಿದ್ದರು ಎಂದು ಹೇಳಿದರು. ಹೆಚ್ಚುವರಿ ನ್ಯಾಯಾಧೀಶ ರಾಮಲಿಂಗಪ್ಪ ಮಾತನಾಡಿ, ಸ್ವಾಮಿ ವಿವೇಕಾನಂದರ ತತ್ವಜ್ಞಾನ ಮತ್ತು ಅವರು ಬದುಕಿ ಬೋಧಿಸಿದ ಆದರ್ಶಗಳು ಭಾರತದ ಯುವಜನತೆಯ ದೊಡ್ಡ ಸಂಪನ್ಮೂಲ ಹಾಗೂ
ಸ್ಫೂರ್ತಿ ಮೂಲವಾಗಿವೆ.

ಅವುಗಳನ್ನು ಯುವಕರು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕ ಎಂ.ಎಸ್‌. ಹೊಸಮನಿ, ಐಕ್ಯೂಎಎಸ್‌ ಸಂಯೋಜಕ ಪ್ರೊ| ಜಿ.ಜಿ. ಕಾಂಬಳೆ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್‌.ಬಿ. ದೊಡಮನಿ, ಸಹಾಯಕ ಸರಕಾರಿ ಅಭಿಯೋಜಕ ಆನಂದ ರಾಠೊಡ, ಸಹಾಯಕ ಸರಕಾರಿ ಅಭಿಯೋಜಕ ವಿ.ಬಿ. ಪಾಟೀಲ ವೇದಿಕೆಯಲ್ಲಿದ್ದರು.

ಸಂಸ್ಥೆ ನಿರ್ದೇಶಕ ಶಿವಪ್ಪಗೌಡ ಬಿರಾದಾರ, ಪ್ರಾಧ್ಯಾಪಕರಾದ ಬಿ.ಜಿ. ಮಠ, ಬಿ.ಡಿ.ಮಾಸ್ತಿ, ಪಿ.ಆರ್‌. ಸೌಂಶಿಕರ, ಎಸ್‌.ಎಂ. ಬಿರಾದಾರ, ಎಸ್‌.ಎಸ್‌. ಪಾಟೀಲ,
ಡಾ| ಬಿ.ಜಿ. ಪಾಟೀಲ, ಎಸ್‌.ಕೆ. ಹೂಗಾರ, ಗ್ರಂಥಪಾಲಕ ಆರ್‌.ಪಿ. ಬಿರಾದಾರ, ವಿ.ಬಿ. ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು. ಪ್ರೊ| ಎಸ್‌.ಎಸ್‌. ಪಾಟೀಲ ಸ್ವಾಗತಿಸಿದರು. ಪ್ರೊ| ಎಸ್‌.ಎ. ಕೆರುಟಗಿ ನಿರೂಪಿಸಿದರು. ಪ್ರೊ| ಜಿ.ಜಿ. ಕಾಂಬಳೆ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next