ಕಿಕ್ಕೇರಿ: ಯುವ ಮನಸ್ಸುಗಳಲ್ಲಿ ಚೈತನ್ಯ ತುಂಬಲು ವಿವೇಕಾನಂದರ ತತ್ವಾದರ್ಶಗಳು ದಾರಿದೀಪವಾಗಿವೆ ಎಂದು ಸ್ಪಂದನಾ ಫೌಂಢೇಷನ್ ಟ್ರಸ್ಟಿ ತ್ರಿವೇಣಿ ಹೇಳಿದರು.
ಪಟ್ಟಣದಲ್ಲಿ ಸ್ಪಂದನಾ ಫೌಂಢೇಷನ್, ಕನ್ನಡ ಕಲಾ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ವಿವೇ ಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವಕರಿಗೆ ವಿವೇಕರ ಸಂದೇಶ ಸಿಂಹ ಘರ್ಜನೆಯಂತೆ.
ಅಂದು ಯಾವುದೇ ಸವಲತ್ತು, ಸೌಲಭ್ಯ ಗಳಿಲ್ಲದಿರು ವಾಗ ವಿವೇಕಾನಂದರು ತತ್ವಜ್ಞಾನಿಯಾಗಿ, ಆಧ್ಯಾತ್ಮಿಕ ಚಿಂತಕರಾಗಿ, ಧಾರ್ಮಿಕ ಪ್ರಚಾರಕ ರಾಗಿ ಮಾಡಿದ ಸಾಧನೆ ಯಿಂದ ವಿಶ್ವದಲ್ಲಿ ಭಾರತ ಭೂಪಟ ಗುರುತಿಸಿಕೊಳ್ಳುವಂತಾಯಿತು. ಜ್ಞಾನ ಸಾಧಕರ ಸ್ವತ್ತು ಎಂಬುದನ್ನು ತೋರಿಸಿಕೊಟ್ಟ ವಿವೇಕರ ಆದರ್ಶ ಮೈಗೂಢಿ ಸಿಕೊಂಡರೆ ಯುವಕರು ಸ್ವಾವಲಂಬಿ ಬದುಕು ಸಾಧಿಸ ಬಹುದಾಗಿದೆ ಎಂದರು. ವಿವೇಕಾ ನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ನೆನೆಯಲಾಯಿತು. ಸಮಾಜ ಸೇವಾಕರ್ತೆ ಕವಿತಾ ಇದ್ದರು.