ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನದ ಹಿನ್ನೆಲೆಯಲ್ಲಿ, ಈ ಬಾರಿಯ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ವಿವೇಕಾನಂದರಿಗೆ ಮೀಸಲಿಡಲಾಗಿದೆ. ಶುಕ್ರವಾರದಿಂದ ಆರಂಭವಾಗಿರುವ ಪ್ರದರ್ಶನವು 26ರವರೆಗೆ ನಡೆಯಲಿದೆ. ಲಕ್ಷಾಂತರ ಹೂವುಗಳನ್ನು ಬಳಿಸಿ 16 ಅಡಿ ಎತ್ತರದ ವಿವೇಕಾನಂದರ ಪ್ರತಿಮೆ, ಚಿಕಾಗೋ ವಿವೇಕಾನಂದ ಸ್ಮಾರಕ, ಬೇಲೂರು ವಿವೇಕಾನಂದರ ಮಠ, ಕನ್ಯಾಕುಮಾರಿ ವಿವೇಕಾನಂದ ಸ್ಮಾರಕ ಸೇರಿದಂತೆ ವಿವಿಧ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ.
ಈ ಬಾರಿ 98ಕ್ಕೂ ಹೆಚ್ಚು ಬಗೆಯ ಹೂವುಗಳನ್ನು ಪ್ರದರ್ಶನದಲ್ಲಿ ಬಳಸಲಾಗಿದ್ದು, ಬ್ರೆಝಿಲ್, ಥಾಯ್‌ಲ್ಯಾಂಡ್, ಕೀನ್ಯಾ, ಅರ್ಜಂಟೈನಾ, ಅಮೆರಿಕ, ಹಾಲೆಂಡ್ ಮುಂತಾದ ಹತ್ತು ದೇಶಗಳಿಂದ ಹೂವುಗಳನ್ನು ಆಮದು ಮಾಡಿಕೊಂಡಿರುವುದು ವಿಶೇಷ. ಗಾಜಿನ ಮನೆ ಬಲಭಾಗದಲ್ಲಿ ವರ್ಟಿಕಲ್ ಗಾರ್ಡ್‌ನ್ ಮೂಲಕ ವಿವೇಕಾನಂದರು ಬೆಂಗಳೂರಿಗೆ ಭೇಟಿ ನೀಡಿದ್ದ ನೆನಪನ್ನು ಕಟ್ಟಿಕೊಡಲಾಗಿದೆ.
1.6 ಕೋಟಿ ರೂ. ವೆಚ್ಚದಲ್ಲಿ ಸುಮಾರು 6 ಲಕ್ಷ ಹೂವುಗಳನ್ನು ಬಳಸಿ, ವಿವೇಕಾನಂದರಿಗೆ ಜೀವ ತುಂಬುವ ಕೆಲಸವನ್ನು ನುರಿತ ಕಲಾವಿದರು ಮಾಡಿದ್ದಾರೆ. ವಾರ್ತಾ ಇಲಾಖೆಯಿಂದ ವಿವೇಕಾ ನಂದರ ಕುರಿತಾದ ಐತಿಹಾಸಿಕ ಛಾಯಾಚಿತ್ರ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.
ಎಲ್ಲಿ?: ಲಾಲ್‌ಬಾಗ್ ಉದ್ಯಾನ
ಯಾವಾಗ?: ಜ.18-26, ಬೆಳಗ್ಗೆ 9- 6.30
ಟಿಕೆಟ್ ದರ: ವಯಸ್ಕರಿಗೆ 70 ರೂ.,ಮಕ್ಕಳಿಗೆ 20 ರೂ.