Advertisement

Best Green School ಪ್ರಶಸ್ತಿಗೆ ಆಯ್ಕೆಯಾದ ವಿಠ್ಠಲ ನಗರ ಸರ್ಕಾರಿ ಪ್ರಾಥಮಿಕ ಪಾಠಶಾಲೆ

05:59 PM Jul 18, 2024 | Shreeram Nayak |

ತೀರ್ಥಹಳ್ಳಿ : ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್‌ ಕೊಡಮಾಡುವ ಪ್ರತಿಷ್ಠಿತ ಶ್ರೇಷ್ಠ ಹಸಿರು ಮತ್ತು ಸ್ವಚ್ಛ ಶಾಲೆ ಪ್ರಶಸ್ತಿಗೆ ತಾಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಠ್ಠಲ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ.

Advertisement

ಸರ್ಕಾರಿ ಶಾಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ವಚ್ಛತೆ ಮತ್ತು ಸುಸ್ಥಿರತೆಯಲ್ಲಿ ಉತ್ತಮ ಸಾಧನೆ ಮಾಡಿರುವ ಶಾಲೆಗಳನ್ನು ಆಯ್ಕೆ ಮಾಡಿ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುತ್ತದೆ.

ಪ್ರಶಸ್ತಿಗೆ ಆಯ್ಕೆಯಾಗಲು 22 ಮಾನದಂಡಗಳಿದ್ದು, ಟ್ರಸ್ಟ್‌ನ ತಂಡ ಅರ್ಜಿ ಸಲ್ಲಿಸಿದ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆಯ ಬಳಿಕ ಪ್ರಶಸ್ತಿಗಳಿಗೆ ಆಯ್ಕೆ ನಡೆಯುತ್ತದೆ.


ಈ ನಿಟ್ಟಿನಲ್ಲಿ ಪ್ರಶಸ್ತಿಗೆ ಪಟ್ಟಣದ ಕೂಗಳತೆ ದೂರದಲ್ಲಿರುವ ವಿಠ್ಠಲ ನಗರ ಶಾಲೆಯ ಶಾಲಾ ಪ್ರವೇಶ ದ್ವಾರ, ಶಾಲಾ ಆವರಣ ಮತ್ತು ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ, ಶಿಸ್ತು ಮತ್ತು ನೈರ್ಮಲ್ಯ ,ಶಾಲಾ ಕಟ್ಟಡ, ತರಗತಿ ಕೊಠಡಿ,ನಲಿ ಕಲಿ ಕೊಠಡಿ , ಕಂಪ್ಯೂಟರ್ ತರಗತಿ ಕೊಠಡಿ, ಅಡಿಗೆ ಕೋಣೆ, ಕಚೇರಿ ಕೊಠಡಿ, ಶಾಲಾ ಸಭಾಂಗಣ, ಶಾಲೆಯ ಹೂ ತೋಟ, ಶೌಚಾಲಯಗಳು ಇವೆಲ್ಲಾ ಈ ಶಾಲೆಗಳಲ್ಲಿವೆ.

ಸಾಮುದಾಯಿಕ ಕಾರ್ಯಕ್ರಮ: ಸ್ಥಳೀಯ ಗ್ರಾಮಗಳ ಸ್ವಚ್ಛತೆ, ಪರಿಸರ ಮಾಲಿನ್ಯ ಮತ್ತು ಇತರೆ ವಿಷಯಗಳ ಕುರಿತು ಜಾಗೃತಿ ಮೂಡಿಸುವಂತಹ ಸಾಮಾಜಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ.

ಪಠ್ಯೇತರ ಚಟುವಟಿಕೆ: ಕ್ರೀಡೆ ಆಟೋಟ, ಕಲೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಇನ್ನಿತರೆ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ.

Advertisement

ಶಿಸ್ತು: ವಿದ್ಯಾರ್ಥಿಗಳ ಸಮಯಪಾಲನೆ, ಶಾಲಾ ನೀತಿ ನಿಯಮಗಳ ಪಾಲನೆ ಮತ್ತು ಶಾಲೆಯ ಚಟುವಟಿಕೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ.

ಲಿಖಿತ ಪ್ರಶಂಸಾಪತ್ರಗಳು
ಪರಿಸರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಗಿಡಗಳಿಗೆ ದಿನನಿತ್ಯ ನೀರುಣಿಸುವ ಮತ್ತು ತೋಟಗಳ, ಮರಗಳ ನಿರ್ವಹಣೆ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಇತ್ಯಾದಿ ಗಳನ್ನು ಗಮನಿಸಿ ಶಾಲೆಗೆ ಶ್ರೇಷ್ಠ ಹಸಿರು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿಯಲ್ಲಿ ಹತ್ತು ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಪಾರಿತೋಷಕವನ್ನು ಒಳಗೊಂಡಿದ್ದು,27.07.24ರಂದು ಮುದ್ದೇನಹಳ್ಳಿಯಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದು.ಈ ಪ್ರಶಸ್ತಿ ದೊರೆಯಲು ಶಾಲಾ ಪ್ರಗತಿಯಲ್ಲಿ ಶ್ರಮಿಸುತ್ತಿರುವ ಸಮಸ್ತ ಶಾಲಾ ಪರಿವಾರಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಕೃತಜ್ಞತೆ ಸಲ್ಲಿಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next