Advertisement

ಅಡ್ಡದಬೀದಿ ಮನೆಗಳಿಗೆ ನೀರು ನುಗ್ಗಿ ಹಾನಿ

12:54 PM Sep 28, 2018 | |

ವಿಟ್ಲ: ವಿಟ್ಲ ಪ.ಪಂ. ಬಿಡುಗಡೆಗೊಳಿಸಿದ 19 ಲಕ್ಷ ರೂ. ಅನುದಾನದಲ್ಲಿ ಬೈಪಾಸ್‌ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಭಾರೀ ಮಳೆಗೆ ಅಡ್ಡದಬೀದಿಯಲ್ಲಿರುವ ಕೆಲವು ಮನೆಗಳಿಗೆ ಹಾನಿಯಾಗಿದೆ. ವಿಟ್ಲ- ಪುತ್ತೂರು ರಸ್ತೆಯಿಂದ ನೇರವಾಗಿ ವಿಟ್ಲ – ಕಾಸರಗೋಡು ರಸ್ತೆಗೆ ತೆರಳುವುದಕ್ಕೆ ಅರಮನೆ ಗದ್ದೆ ಬದಿಯಲ್ಲಿರುವ ಚರಂಡಿ ಸಮೀಪದಲ್ಲಿ ಹೊಸ ರಸ್ತೆ ನಿರ್ಮಾಣಕ್ಕೆ ಪ.ಪಂ. ಕಾಮಗಾರಿ ಕೈಗೆತ್ತಿಕೊಂಡಿತ್ತು.

Advertisement

ಹಿಟಾಚಿ ಸಂಚರಿಸುವ ಉದ್ದೇಶದಿಂದ ಚರಂಡಿಗೆ ಮಣ್ಣು ತುಂಬಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಭಾರೀ ಮಳೆಗೆ ಚರಂಡಿಯಲ್ಲಿ ನೀರು ಹರಿಯದೆ ಮನೆಗಳಿಗೆ ನುಗ್ಗಿದೆ. ಅಡ್ಡದಬೀದಿ ನಿವಾಸಿಗಳಾದ ಅಬ್ದುಲ್ಲ, ವೇದಾವತಿ ಅಮ್ಮ, ರವಿ ಜೋಶಿ ಅವರ ಮನೆಗೆ ನೀರು ನುಗ್ಗಿದೆ. ಅಬ್ದುಲ್ಲ ಹಾಗೂ ವೇದಾವತಿ ಅವರ ಬಾವಿಯಲ್ಲಿ ಚರಂಡಿಯ ನೀರು ತುಂಬಿಕೊಂಡಿದೆ. ತತ್‌ಕ್ಷಣ ಕ್ರಮ ಕೈಗೊಳ್ಳಬೇಕೆಂದು ವಿಟ್ಲ ಗ್ರಾ.ಪಂ. ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ವಿಟ್ಲ ನಗರ ಅಧ್ಯಕ್ಷ ಕಾಂಗ್ರೆಸ್‌ನ ವಿ.ಕೆ.ಎಂ. ಅಶ್ರಫ್‌ ಆಗ್ರಹಿಸಿದ್ದಾರೆ.

ಪ.ಪಂ. ಅಧ್ಯಕ್ಷ ಅರುಣ ಎಂ. ವಿಟ್ಲ, ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಸದಸ್ಯ ವಿ. ರಾಮದಾಸ ಶೆಣೈ, ಮುಖ್ಯಾಧಿಕಾರಿ ಮಾಲಿನಿ ಸ್ಥಳ ಪರಿಶೀಲಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಬಳಿಕ ಚರಂಡಿಯಿಂದ ಮಣ್ಣು ಎತ್ತಲಾಯಿತು.

ಸ್ಥಳೀಯರ ಆಗ್ರಹ
ಪೇಟೆಯ ತ್ಯಾಜ್ಯ ಸಹಿತ ನೀರು ಮನೆಗೆ ಹಾಗೂ ಕುಡಿಯುವ ನೀರಿನ ಮೂಲಗಳಿಗೆ ನುಗ್ಗಿ ಆಗಿರುವ ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next