Advertisement

ವಿಟ್ಲ ರಸ್ತೆ ವಿಸ್ತರಣೆ: ವಿದ್ಯುತ್‌ ಕಂಬಗಳ ಸ್ಥಳಾಂತರ

04:52 AM Feb 08, 2019 | |

ವಿಟ್ಲ : ವಿಟ್ಲ ಪೇಟೆಯ ರಸ್ತೆ ವಿಸ್ತರಣೆ ಬಗ್ಗೆ 7 ವರ್ಷಗಳಿಂದ ಕಾಣುತ್ತಿದ್ದ ಕನಸು ಇದೀಗ ನನಸಾಗಿದೆ. ರಸ್ತೆ ವಿಸ್ತರಣೆ, ನಾಲ್ಕು ರಸ್ತೆಗಳು ಸೇರುವ ಜಂಕ್ಷನ್‌ ವಿಸ್ತರಣೆ, ವಿದ್ಯುತ್‌ ಕಂಬಗಳ ಸ್ಥಳಾಂತರ ಕಾಮಗಾರಿ ಗಳು ನಿಧಾನಗತಿಯಲ್ಲಿ ಸಾಗಿದ್ದರೂ ಇದೀಗ ಪೂರ್ತಿಯಾಗಿದೆ.

Advertisement

ವಿಟ್ಲ ಜಂಕ್ಷನ್‌ನಿಂದ ವಿಟ್ಲ ಪುತ್ತೂರು ರಸ್ತೆಯಲ್ಲಿ 7 ವಿದ್ಯುತ್‌ ಕಂಬಗಳು ರಸ್ತೆ ಯಲ್ಲೇ ಇದ್ದುದರಿಂದ ವಾಹನ ಸಂಚಾ ರಕ್ಕೆ ಅಡ್ಡಿಯಾಗುತ್ತಿತ್ತು. ರಸ್ತೆ ವಿಸ್ತರಣೆ ಯಾಗಿದ್ದರೂ ಕಂಬಗಳ ಸ್ಥಳಾಂತರವಾಗದೇ ಇದ್ದುದರಿಂದ ಸಮಸ್ಯೆ ಹೆಚ್ಚಾಗಿತ್ತು. ಈ ಕಂಬಗಳ ಸ್ಥಳಾಂತರಕ್ಕೆ ಲೋಕೋ ಪಯೋಗಿ ಇಲಾಖೆ ಅನು ದಾನ ನೀಡಬೇಕು ಎಂದು ಮೆಸ್ಕಾಂ ಬೇಡಿಕೆಯಾ ಗಿತ್ತು. ರಸ್ತೆ ಪಕ್ಕದಲ್ಲಿ ಕಂಬಗಳನ್ನು ಸ್ಥಾಪಿಸುವ ಸಂದರ್ಭ ಲೋಕೋಪಯೋಗಿ ಇಲಾಖೆ ಅನುಮತಿ ಅವಶ್ಯವಿಲ್ಲವೆಂದಾದಲ್ಲಿ ಅನುದಾನ ಯಾಕೆ ಬಿಡುಗಡೆ ಮಾಡ ಬೇಕೆಂಬ ವಾದವೂ ಕೇಳಿ ಬಂದಿತ್ತು. ಕೊನೆಗೂ ಅರಮನೆ ರಸ್ತೆಯಲ್ಲಿ, ಮಂಗಳೂರು ರಸ್ತೆಯಲ್ಲಿ, ಶಾಲಾ ರಸ್ತೆಯಲ್ಲಿದ್ದ ಕಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಅದಕ್ಕೆ ಲೋಕೋಪಯೋಗಿ ಇಲಾಖೆ ಅನುದಾನ ಬಿಡುಗಡೆಗೊಳಿಸಿತ್ತು.

8.5 ಲಕ್ಷ ರೂ. ಅನುದಾನ ಬಿಡುಗಡೆ
ಆದರೆ ಪುತ್ತೂರು ರಸ್ತೆಯ 7 ಕಂಬಗಳು ಸ್ಥಳಾಂತರವಾಗಿರಲಿಲ್ಲ. ಮೆಸ್ಕಾಂ ಇದಕ್ಕೆ ಮತ್ತೆ ಅನುದಾನದ ಬೇಡಿಕೆಯನ್ನಿಟ್ಟಿತ್ತು. ಅನುದಾನ ಬಿಡುಗಡೆಗೊಳಿಸಲು ಲೋಕೋ ಪಯೋಗಿ ಇಲಾಖೆ ಸಿದ್ಧವಾಯಿತು. ಆದರೆ ಪೇಟೆಯಲ್ಲಿ ಕಂಬಗಳನ್ನು ಸ್ಥಳಾಂತರ ಗೊಳಿಸಲು ಜಾಗದ ಕೊರತೆ ಯಿತ್ತು. ಇದಕ್ಕೆ ಸೂಕ್ತ ಯೋಜನೆ ರೂಪಿಸಿದ ಮೆಸ್ಕಾಂ, 11 ಮೀ. ಎತ್ತರದ 7 ಸ್ಪನ್‌ಪೋಲ್‌ ಸ್ಥಾಪಿ ಸಲು ನಿಶ್ಚಯಿಸಿತು. ಹಲವು ಸಭೆ ಏರ್ಪಡಿಸಿದರೂ ಕಂಬಗಳು ಸ್ಥಳಾಂತರಗೊಂಡಿರಲಿಲ್ಲ. ಲೋಕೋ ಪಯೋಗಿ ಇಲಾಖೆ 8.50 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿತು. ಆದರೂ ಕಾಮಗಾರಿ ಕೈಗೆತ್ತಿಕೊಳ್ಳು ಮೀನ ಮೇಷ ಎಣಿಸಲಾಗುತ್ತಿತ್ತು.

ಸ್ಪನ್‌ಪೋಲ್‌ ಬಂತು !
ಹಳೆಯ ಕಂಬಗಳ ಬದಲಾಗಿ 7 ಸ್ಪನ್‌ಪೋಲ್‌ಗ‌ಳನ್ನು ಅಳವಡಿಸಲಾಯಿತು. ಲೆವಿನ್‌ ಎಲೆಕ್ಟ್ರಿಕಲ್ಸ್‌ನವರು ಗುತ್ತಿಗೆ ವಹಿಸಿ, ಅಳವಡಿಸಿದ ಕಂಬಗಳಿಗೆ ಬುಧವಾರ ತಂತಿಗಳನ್ನು ಜೋಡಿಸಿದರು. ಜಿಗ್‌ಜಾಗ್‌ ರೂಪದಲ್ಲಿ ಅಂದರೆ ರಸ್ತೆಯ ಎರಡೂ ಬದಿಗಳನ್ನು ಬಳಸಿ, ಕಂಬಗಳನ್ನು ಸೂಕ್ತ ಜಾಗದಲ್ಲಿ ಸ್ಥಾಪಿಸಿ, ಸಮಸ್ಯೆ ಬಗೆಹರಿಯುವ ಕ್ರಮಕೈಗೊಳ್ಳಲಾಗಿದೆ.

ಇನ್ನೂ ಇದೆ
ಒಂದು ಹಂತದ ಕಾಮಗಾರಿ ಮುಕ್ತಾಯಗೊಂಡಿದ್ದರೂ ಪೇಟೆಯ ಅಭಿವೃದ್ಧಿಗೆ ಕೆಲವು ಆವಶ್ಯಕತೆ ಪೂರೈಸ ಬೇಕಾಗಿದೆ. ಕಂಬಗಳ ಮಧ್ಯೆ ವಾಹನಗಳನ್ನು ನಿಲ್ಲಿಸುವವರಿಗೆ ಇನ್ನು ಜಾಗದ ಕೊರತೆ ಕಂಡುಬರುತ್ತದೆ. ಅದಕ್ಕಾಗಿ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆಯಾಗಬೇಕಾಗಿದೆ. ಸಾರಿಗೆ, ಪೊಲೀಸ್‌ ಇಲಾಖೆ ಬಸ್‌, ಇತರ ವಾಹನಗಳ ಅವ್ಯವಸ್ಥೆಯನ್ನು ಸರಿಪಡಿಸ ಬೇಕಾಗಿದೆ. ನಿಷೇಧಿತ ಪ್ರದೇಶದಲ್ಲಿ ವಾಹನ ನಿಲ್ಲಿಸುವವರ ವಿರುದ್ಧ ಕ್ರಮ ಕೈಗೊಳ್ಳ ಬೇಕಾಗಿದೆ. ನಗರೋತ್ಥಾನ, ಪ.ಪಂ. ಸಹ ಭಾಗಿತ್ವದಲ್ಲಿ ಅಡ್ಡದಬೀದಿ ರಸ್ತೆಯೊಂದು ಬೈಪಾಸ್‌ ರಸ್ತೆಯಾಗಿ ಮೂಡಿಬಂದಿರುವುದು ಶ್ಲಾಘನೀಯ. ಇತರ ರಸ್ತೆಗಳಲ್ಲೂ ಬೈಪಾಸ್‌ ರಸ್ತೆ ನಿರ್ಮಿಸಲು ಅವಕಾಶವಿದೆ. ಕೈಗೊಂಡಿ ರುವ ಅಭಿವೃದ್ಧಿ ಕಾಮಗಾರಿಗಳಿಗೆ ಇದೆಲ್ಲ ಪೂರಕವಾಗಲಿದೆ. ಪ.ಪಂ. ಮೇಲ್ದರ್ಜೆ ಗೇರಿರುವುದು ಅರ್ಥಪೂರ್ಣವಾಗುತ್ತದೆ.

Advertisement

ಉದಯವಾಣಿಯಿಂದ ನಿರಂತರ ಸುದ್ದಿ
ಉದಯವಾಣಿ ಸಮಸ್ಯೆಗಳನ್ನು ನಿರಂತರವಾಗಿ ಪ್ರಕಟಿಸುತ್ತಿದ್ದಾಗ ಓದುಗರು ಸಂತಸ ವ್ಯಕ್ತಪಡಿಸುತ್ತಿದ್ದರು. ಶೀಘ್ರ ಸ್ಪಂದನೆ ನೀಡದ ಸಂಬಂಧಪಟ್ಟವರ ವಿರುದ್ಧ ಅನೇಕ ಮಂದಿ ಪ್ರತಿಭಟನೆಗೆ ಸಿದ್ಧರಾಗಿದ್ದರು. ನಡು ನಡುವೆಯೇ ವ್ಯಾಪಾರಿಗಳು ತಮ್ಮ ಕಟ್ಟಡವನ್ನು ಕೆಡವಿ, ರಸ್ತೆ ವಿಸ್ತರಣೆಗೆ ಬೆಂಬಲ ನೀಡಿದ್ದರು. ಚರಂಡಿ ನಿರ್ಮಿಸಲು ಅವಕಾಶ ಕಲ್ಪಿಸಿದ್ದರು. ಜಂಕ್ಷನ್‌ನಲ್ಲಿ ರಸ್ತೆ ವಿಸ್ತರಣೆಗೆ ಅವಕಾಶ ಕಲ್ಪಿಸದ ನಾಲ್ಕು ಅಂಗಡಿಗಳನ್ನು ಕೆಡವಿಹಾಕಲಾಯಿತು. ಹಂತ ಹಂತವಾಗಿ ಕಾಮಗಾರಿಗಳನ್ನು ಪೂರೈಸಲಾಯಿತು. ಲೋಕೋಪಯೋಗಿ ಇಲಾಖೆ ಅತ್ಯಂತ ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸಿತು. ವಿಟ್ಲ ಗ್ರಾ.ಪಂ. ಮತ್ತು ಪ.ಪಂ.ಗಳು, ಕಂದಾಯ ಇಲಾಖೆಗಳು ಸೂಕ್ತ ಕ್ರಮಕೈಗೊಂಡು, ಸಹಕರಿಸಿದವು. ಕೊನೆಗೆ ಮೆಸ್ಕಾಂ ಮಾತ್ರ ಹಿಂದೇಟು ಹಾಕಿತ್ತು. ಕೊನೆಗೂ ಇದೀಗ ಪೇಟೆ ವಿಸ್ತರಣೆಯ ಒಂದು ಹಂತ ಮುಕ್ತಾಯಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next