Advertisement
ಪ್ರಸಕ್ತ ಕಟ್ಟಡ ನಿರ್ಮಾಣವಾಗಿದೆ. ಆದರೆ ಗಾರೆ ಕಾಮಗಾರಿ, ಎಲೆಕ್ಟ್ರಿಕಲ್ ಕೆಲಸ ಆಗಿಲ್ಲ. ಸುತ್ತ ಆವರಣ ಗೋಡೆ ಆಗಿಲ್ಲ. ಹತ್ತಿರದಲ್ಲೇ ಶಾಲೆ ಇದ್ದು ಚಿಕ್ಕ ಮಕ್ಕಳು ಓಡಾಡುವ ಜಾಗವಾಗಿರುವುದರಿಂದ ಕಾಮಗಾರಿ ಮುಗಿಯದೆ ಶಾಲೆಯ ಚಟುವಟಿಕೆಗಳಿಗೂ ಸಮಸ್ಯೆಯಾಗುತ್ತಿದೆ.
ವಿಟ್ಲ ದ.ಕ. ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹೆಸರಿನಲ್ಲಿ 4.72 ಎಕ್ರೆ ನಿವೇಶನವಿದೆ. ಶಾಲೆಯ ಆವರಣದಲ್ಲೇ ಬಾಕಿಮಾರುಗದ್ದೆಗೆ ಹೋಗುವ ದಾರಿ ಇತ್ತು. ಅದು ರಸ್ತೆಯಾಗಿ ಎರಡು ಶಾಲಾ ಕಟ್ಟಡದ ನಡುವೆ ಸಾರ್ವಜನಿಕರು ಓಡಾಡುವಂತಾಗಿದೆ. ವಾಹನಗಳು ಕೂಡಾ ಇಲ್ಲೇ ಸಂಚರಿಸುತ್ತವೆ. ಕಂದಾಯ ಇಲಾಖೆಯ ನಾಡಕಚೇರಿ ಕಟ್ಟಡಕ್ಕಾಗಿ ಇನ್ನಷ್ಟು ಜಾಗವನ್ನು ಬಳಸಿಕೊಳ್ಳಲಾಗಿದೆ. ಎರಡೂ ಕಟ್ಟಡಗಳಿಗೂ ಹಲವು ವಿಘ್ನಗಳು ಎದುರಾಗಿದ್ದು, ಇದೀಗ ಇಂದಿರಾ ಕ್ಯಾಂಟೀನ್ ಕೂಡಾ ಅರ್ಧಂಬರ್ಧ ಕಾಮಗಾರಿಯಿಂದ ಸ್ಥಗಿತಗೊಂಡಿದೆ. ನೋಂದಣಿ ಕಚೇರಿ, ನಾಡ ಕಚೇರಿ ಪಕ್ಕದಲ್ಲೇ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ನಿವೇಶನ ನಿಗದಿಪಡಿಸಲಾಗಿದೆ. ಪಟ್ಟಣ ಪಂಚಾಯತ್ ಆಡಳಿತಾಧಿಕಾರಿಗಳು ಇದೇ ಜಾಗ ಸೂಕ್ತವೆಂದು ಗುರುತಿಸಿದ್ದರು. ಆದರೆ ಇದು ಸರಕಾರಿ ಶಾಲೆಯ ಜಾಗವೆಂದು ಹೇಳಲಾಗಿದೆ. ಸರಕಾರಿ ಜಾಗವಾಗಿದ್ದರಿಂದ ಯಾವುದೇ ಆಕ್ಷೇಪ ಕೇಳಿಬಂದಿಲ್ಲ.
ಟೆಂಡರ್ ಪ್ರಕ್ರಿಯೆ ಮೂಲಕ ಬೆಂಗಳೂರು ಮೆ.ಎಕ್ಸೆಲ್ ಪ್ರಿಕಾಸ್ಟ್ ಸೊಲ್ಯುಶನ್ ಲಿಮಿಟೆಡ್ ಸಂಸ್ಥೆಯು ಗುತ್ತಿಗೆಯನ್ನು ಪಡೆದುಕೊಂಡಿದೆ.
Related Articles
Advertisement