Advertisement
ಅಧ್ಯಕ್ಷರು ಅಜೆಂಡವನ್ನು ಸಭೆಗೆ ಓದುತ್ತಿದ್ದಾಗ ಬಿಜೆಪಿ ಸದಸ್ಯ ರಾಮದಾಸ ಶೆಣೈ ಆಕ್ಷೇಪಿಸಿ, ಮಾ. 1ರಂದು ನಡೆದ ಸಾಮಾನ್ಯ ಸಭೆಯ ನಿರ್ಣಯ ನಂ. 257/2018-19ರಲ್ಲಿ 3 ಕಾಮಗಾರಿಗಳ ಟೆಂಡರ್ ಮಂಜೂರಾತಿಯನ್ನು ರದ್ದುಪಡಿಸಬೇಕೆಂದು ಪ.ಪಂ. ಉಪಾಧ್ಯಕ್ಷರು, ಸ್ಥಾಯೀ ಸಮಿತಿ ಅಧ್ಯಕ್ಷರು ಸಹಿತ ಒಟ್ಟು 12 ಮಂದಿ ಸದಸ್ಯರು ನಿರ್ಣಯ ಮಾಡಲಾಗಿದೆ. ಸಭೆಯ ಮಂಜೂರಾತಿ ಪಡೆಯದೇ ಟೆಂಡರ್ ಕರೆಯಲಾಗಿದೆ. ಆ ಬಗ್ಗೆ ನಿರ್ಣಯ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು. ಅಧ್ಯಕ್ಷೆ ದಮಯಂತಿ ಮಾತನಾಡಿ, ತಿದ್ದುಪಡಿ ಮಾಡ ಲಿಲ್ಲ. ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಮಂಜೂ ರಾದ ಮತ್ತು ನಿರ್ಣಯ ಕೈಗೊಳ್ಳ ಲಾಗಿದ್ದುದನ್ನೇ ಮುಂದು ವರಿಸಲಾಗಿದೆ. ಹೊಸ ಅನುದಾನವಲ್ಲ ಎಂದರು.
Related Articles
Advertisement
ಬಿಜೆಪಿ ಪ್ರತಿಭಟನೆ
ಮಾಜಿ ಅಧ್ಯಕ್ಷ ಅರುಣ್ ಎಂ. ವಿಟ್ಲ, ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಸದಸ್ಯರಾದ ರವಿಪ್ರಕಾಶ್, ರಾಮದಾಸ ಶೆಣೈ, ಶ್ರೀಕೃಷ್ಣ ವಿಟ್ಲ, ಲೋಕನಾಥ ಶೆಟ್ಟಿ ಕೊಲ್ಯ, ಮಂಜುನಾಥ ಕಲ್ಲಕಟ್ಟ, ಉಷಾ ಕೃಷ್ಣಪ್ಪ, ಇಂದಿರಾ ಅಡ್ಡಾಳಿ, ಗೀತಾ ಪುರಂದರ, ಸಂಧ್ಯಾ ಮೋಹನ್ ಸಭಾಭವನದಲ್ಲೇ ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.
ಬಳಿಕ ಪ.ಪಂ. ಕಚೇರಿ ಮುಂಭಾಗದಲ್ಲಿ ಕುಳಿತ ಬಿಜೆಪಿ ಸದಸ್ಯರು ಅಧ್ಯಕ್ಷರಿಗೆ ಧಿಕ್ಕಾರ ಕೂಗಲಾರಂ ಭಿಸಿದರು. ಮಾಜಿ ಅಧ್ಯಕ್ಷ ಅರುಣ್ ಎಂ. ವಿಟ್ಲ ಮಾತನಾಡಿ, ಕೊಡಂಗೆಯಲ್ಲಿ ಸೋಲಾರ್ ದೀಪ ಅಳವಡಿಕೆ, ಬೊಬ್ಬೆಕೇರಿ ಕೋಡಿಯಲ್ಲಿ ದಾರಿ ಅಭಿವೃದ್ಧಿ ಕಾಮಗಾರಿ, ರಥಬೀದಿಯಲ್ಲಿ ಚರಂಡಿ ಕಾಮಗಾರಿ, ಕೊಡಂಗೆ ರಸ್ತೆ ಬದಿ ತಡೆಗೋಡೆ ರಚನೆ ಕಾಮಗಾರಿ ನಿರ್ಣಯಗಳಿಗೆ ಆಕ್ಷೇಪಿಸಿ ದ್ದೇವೆ. ಆದರೆ ಅದನ್ನು ತಿದ್ದುಪಡಿ ಮಾಡಿ, ಟೆಂಡರ್ ಕರೆದಿದ್ದಾರೆ. ಈ ಸಭೆಯಲ್ಲಿ ಟೆಂಡರ್ ಅಂತಿಮಗೊಳಿಸಲು ನಾವು ವಿರೋಧಿಸಿದ್ದೇವೆ. ಅಧ್ಯಕ್ಷರು ಇದನ್ನೆಲ್ಲ ತಿರಸ್ಕರಿಸಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.
ಸದಸ್ಯ ರಾಮದಾಸ ಶೆಣೈ ಮಾತನಾಡಿ, ಸಭೆ ಮೊಟಕುಗೊಳಿಸಿ ಬರಲಾಗಿದೆ. ನಿರ್ಣಯ ಕೈಗೊಳ್ಳಲಿಲ್ಲ. ಇದನ್ನು ಮುಖ್ಯಾಧಿಕಾರಿಗೆ, ಮೇಲಧಿಕಾರಿಗಳಿಗೆ ತಿಳಿಸಿ, ನಿರ್ಣಯ ತಿದ್ದುಪಡಿ ಮಾಡಿದ ಬಗ್ಗೆ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ ಎಂದರು.
ಕ್ರಮಕ್ಕೆ ಆಗ್ರಹ
ಸದಸ್ಯ ರಾಮದಾಸ ಶೆಣೈ ಮಾತನಾಡಿ, ಸಭೆ ಮೊಟಕುಗೊಳಿಸಿ ಬರಲಾಗಿದೆ. ನಿರ್ಣಯ ಕೈಗೊಳ್ಳಲಿಲ್ಲ. ಇದನ್ನು ಮುಖ್ಯಾಧಿಕಾರಿಗೆ, ಮೇಲಧಿಕಾರಿಗಳಿಗೆ ತಿಳಿಸಿ, ನಿರ್ಣಯ ತಿದ್ದುಪಡಿ ಮಾಡಿದ ಬಗ್ಗೆ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ ಎಂದರು.