Advertisement

ವಿಟ್ಲ: ಕಿಡಿಗೇಡಿಗಳಿಂದ ಎಸ್ ಡಿಪಿಐ ಕಚೇರಿಗೆ ಬೆಂಕಿ!

10:27 AM Jan 04, 2021 | Team Udayavani |

ವಿಟ್ಲ: ವಿಟ್ಲ ಮೇಗಿನಪೇಟೆಯಲ್ಲಿರುವ ವಿಟ್ಲ ವಲಯ ಎಸ್ ಡಿಪಿಐ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಸಂಭವಿಸಿದೆ.

Advertisement

ರವಿವಾರ ರಾತ್ರಿ ಈ ಕೃತ್ಯ ನಡೆಸಿರಬಹುದೆಂದು ಅಂದಾಜಿಸಲಾಗಿದ್ದು, ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಕಚೇರಿಯ ಮುಂಭಾಗದ ಬಾಗಿಲಿಗೆ ಬೆಂಕಿ ಹಚ್ಚಿದ್ದು, ಸ್ಥಳದಲ್ಲಿ ಪೈಂಟ್ ಡಬ್ಬಗಳು ಪತ್ತೆಯಾಗಿದ್ದು, ಪೈಂಟ್ ಹಚ್ಚಿ ಬೆಂಕಿ ಹಾಕಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಇದರಿಂದ ಕಚೇರಿಯ ಮುಂಭಾಗ ಹಾನಿಗೊಂಡಿದೆ.

ಇದನ್ನೂ ಓದಿ:ಟೋಲ್ ಕೇಳಿದ ಸಿಬ್ಬಂದಿ ಮೇಲೆ ಕಿಡಿಗೇಡಿಗಳಿಂದ ಹಲ್ಲೆ :ಘಟನೆಯ ದೃಶ್ಯ CCTVಯಲ್ಲಿ ಸೆರೆ

ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next