Advertisement

ಕೃತಿ ರೂಪದಲ್ಲಿ ಆನಂದ್‌ ಜೀವನಗಾಥೆ

09:28 PM Oct 17, 2019 | Team Udayavani |

ಹೊಸದಿಲ್ಲಿ: ಚೆಸ್‌ ದಂತಕತೆ ವಿಶ್ವನಾಥನ್‌ ಆನಂದ್‌ ಅವರ ಜೀವನಗಾಥೆ ಪುಸ್ತಕ ರೂಪದಲ್ಲಿ ಬರಲಿದೆ. ಬದುಕುವುದು ಹೇಗೆ ಎನ್ನುವುದನ್ನು ಅವರು ಈ ಪುಸ್ತಕದಲ್ಲಿ ತನ್ನದೇ ಬದುಕಿನ ಕತೆಯ ಮೂಲಕ ಸ್ಫೂರ್ತಿಯುತವಾಗಿ ವಿವರಿಸಿದ್ದಾರೆ.

Advertisement

ಮೈಂಡ್‌ ಮಾಸ್ಟರ್‌: ವಿನ್ನಿಂಗ್‌ ಲೆಸನ್ಸ್‌ ಫ್ರಮ್ ಎ ಚಾಂಪಿಯನ್ಸ್‌ ಲೈಫ್’ ಎಂಬ ಈ ಪುಸ್ತಕ ಪತ್ರಕರ್ತೆ ಸೂಸಾನ್‌ ನಿನಾನ್‌ ನಿರೂಪಣೆಯಲ್ಲಿ ಬಂದಿದೆ. ಹ್ಯಾಶೆಟ್‌ ಇಂಡಿಯಾ ಪ್ರಕಟಿಸಿದ್ದು, ಡಿ. 11ರಂದು ಬಿಡುಗಡೆಯಾಗಲಿದೆ.

ತಾನಾಡಿದ ಶ್ರೇಷ್ಠ ಪಂದ್ಯಗಳು, ಹೀನಾಯ ಸೋಲುಗಳು, ಜಗತ್ತಿನ ಅತ್ಯುತ್ತಮ ಚೆಸ್‌ ಪಟುಗಳ ಜತೆಗೆ ಆಡುವಾಗ ಆದ ಅನುಭವ, ನಿರಾಶೆಗಳನ್ನು ಮೆಟ್ಟಿ ನಿಂತ ಪರಿ, ಎಲ್ಲದಕ್ಕೂ ಮಿಗಿಲಾಗಿ ಸುದೀರ್ಘ‌ ಕಾಲ ಪಂದ್ಯದಲ್ಲಿ ಉಳಿದಿರುವುದು… ಮೊದಲಾದ ವಿಚಾರಗಳನ್ನು ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.

ಬರವಣಿಗೆಯ ಅನುಭವ
“ಆಟ ಮತ್ತು ಬದುಕಿನ ಅನೇಕ ಮಹತ್ವದ ಘಟನೆಗಳ ನೆನಪುಗಳು ನನ್ನಲ್ಲಿವೆ. ಅವುಗಳನ್ನೆಲ್ಲ ಅಕ್ಷರಕ್ಕಿಳಿಸಬೇಕೆಂದು ಅನ್ನಿಸಿದಾಗ ನೆನಪುಗಳನ್ನು ವ್ಯವಸ್ಥಿತವಾಗಿ ಜೋಡಿಸಬೇಕಾಗುತ್ತದೆ. ಅವುಗಳ ಬಗ್ಗೆ ವಿವರವಾಗಿ ಚಿಂತಿಸಬೇಕಾಗುತ್ತದೆ. ಬರವಣಿಗೆ ನನಗೆ ಹಲವು ಕುತೂಹಲಕಾರಿ ಕತೆಗಳನ್ನು ಮತ್ತು ಘಟನೆಗಳನ್ನು ಮೆಲುಕು ಹಾಕುವ ಅವಕಾಶ ನೀಡಿತು’ ಎಂದು ಬರವಣಿಗೆಯ ಅನುಭವವನ್ನು ವಿಶ್ವನಾಥನ್‌ ಆನಂದ್‌ ಹಂಚಿಕೊಂಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next