ಕೋಲ್ಕತ್ತಾ: ಖ್ಯಾತ ಅರ್ಥಶಾಸ್ತ್ರಜ್ಞ, ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮಾರ್ತ್ಯ ಸೇನ್, ಪಶ್ಚಿಮ ಬಂಗಾಳದ ಶಾಂತಿನಿಕೇತನ್ ನಗರದಲ್ಲಿ ಭೂ ಅತಿಕ್ರಮಣ ಮಾಡಿದ್ದಾರೆಂದು ವಿಶ್ವನಿಕೇತನ ಕೇಂದ್ರ ವಿಶ್ವವಿದ್ಯಾಲಯ ಆರೋಪಿಸಿದ್ದು, ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ಕೇಂದ್ರ ವಿಶ್ವವಿದ್ಯಾನಿಲಯಕ್ಕೆ ಬಿಟ್ಟುಕೊಡುವಂತೆ ಆಗ್ರಹಿಸಿದೆ.
ವಿವಿಯ ಡೆಪ್ಯೂಟಿ ರಿಜಿಸ್ಟ್ರಾರ್ ಅವರು ಸಹಿ ಮಾಡಿರುವ ಪತ್ರದಲ್ಲಿ ಶಾಂತಿನಿಕೇತನದಲ್ಲಿರುವ ಸೇನ್ ಅವರ ನಿವಾಸ, ಹೆಚ್ಚುವರಿ ಭೂಮಿಯನ್ನು ಅತಿಕ್ರಮಿಸಿ ನಿರ್ಮಾಣಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಅಲ್ಲದೇ, ಅತಿಕ್ರಮಗೊಂಡಿರುವ ಭೂಮಿ, ವಿವಿಗೆ ಸೇರಿದ್ದಾಗಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆ ಹಾಗೂ ಭೌತಿಕ ಸಮೀಕ್ಷೆ ವರದಿಗಳು ಇವೆ ಎಂದಿದೆ. ಆದಾಗ್ಯೂ ಸೇನ್ ಬಯಸಿದಲ್ಲಿ, ಅವರ ವಕೀಲರು ಹಾಗೂ ಸರ್ವೇಯರ್‌ಗಳ ಜತೆಗೆ ವಿವಿಯ ಪ್ರತಿನಿಧಿಗಳು ಮತ್ತೂಮ್ಮೆ ಸರ್ವೆ ನಡೆಸಲು ಸಿದ್ಧರಿದ್ದಾರೆ ಎಂದು ತಿಳಿಸಿದೆ. ಜತಗೆ ಆದಷ್ಟು ಬೇಗ ವಿವಿಗೆ ಸೇರಿದ ಭೂಮಿಯನ್ನು ಬಿಟ್ಟುಕೊಡುವಂತೆ ಆಗ್ರಹಿಸಿದೆ.
2021ರಲ್ಲಿಯೂ ವಿವಿ ಸೇನ್ ಅವರ ಕುಟುಂಬ ವಿವಿಯ ಆವರಣದಲ್ಲಿ ಅತಿಕ್ರಮಣ ಭೂಮಿಯನ್ನು ಹೊಂದಿದೆ ಎಂದು ಆರೋಪಿಸಿತ್ತು. ಆ ಬಳಿಕ ಅಮಾತ್ಯಾ ಸೇನ್, ತಮ್ಮ ತಂದೆ ಅಶುತೋಷ್ ಸೇನ್ ಅವರು 1943ರಲ್ಲಿ ವಿವಿಯಿಂದ 125 ದಶಮಾಂಶ ಭೂಮಿಯನ್ನು ದೀರ್ಘಕಾಲದ ಗುತ್ತಿಗೆಗೆ ಪಡೆದಿದ್ದರು ಎಂದಿದ್ದರು.
– ನೋಬೆಲ್ ಪುರಸ್ಕೃತ ಅಮಾತ್ಯಸೇನ್ ವಿರುದ್ಧ ಆರೋಪ
– ವಿಶ್ವನಿಕೇತನ ವಿಶ್ವವಿದ್ಯಾಲಯದ ಭೂಮಿ ಅತಿಕ್ರಮಣ
– ಒತ್ತುವರಿ ಭೂ ಭಾಗವನ್ನು ಬಿಟ್ಟುಕೊಡುವಂತೆ ವಿವಿ ಆಗ್ರಹ
ಇದನ್ನೂ ಓದಿ: ಶತಕ ಬಾರಿಸಿದರೂ ತಂದೆಗೆ ಖುಷಿ ಆಗಿರಲಿಕ್ಕಿಲ್ಲ: ಶುಭಮನ್ ಗಿಲ್