ಕಾಪು : ಕಾಪು ಪುರಸಭೆಯ ಘನ, ದ್ರವ, ತ್ಯಾಜ್ಯ ವಸ್ತುಗಳ ಸಂಪನ್ಮೂಲ ಘಟಕಕ್ಕೆ ಉಳ್ಳಾಲ ನಗರ ಸಭೆ ವ್ಯಾಪ್ತಿಯ ಸ್ವಸಹಾಯ ಗುಂಪುಗಳ ಸದಸ್ಯರು ಭೇಟಿ ನೀಡಿ, ಸ್ವತ್ಛತೆಗಾಗಿ ಕೈಗೆತ್ತಿಕೊಳ್ಳಲಾಗಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ಕಾಪು ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಅವರು ಸ್ವಸಹಾಯ ಗುಂಪುಗಳ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಮಾಹಿತಿ ನೀಡಿ, ಪುರಸಭಾ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಒಣ ಕಸವನ್ನು 17 ಬಗೆಯ ತ್ಯಾಜ್ಯಗಳನ್ನಾಗಿ ವಿಂಗಡಿಸಿ ಸಂಗ್ರಹಿಸುತ್ತಿರುವ ವಿಧಾನದ ಬಗ್ಗೆ ವಿವರಿಸಿದರು.
ತ್ಯಾಜ್ಯಗಳನ್ನು ಮೂಲದಲ್ಲಿಯೇ ವಿಂಗಡಿಸಿ ಹಸಿ ಕಸವನ್ನು ಕಾಂಪೋಸ್ಟ್ ಆಗಿ ಪರಿವರ್ತನೆ ಮಾಡುತ್ತಿರುವ ಕುರಿತು ಹಾಗೂ ಒಣ ಕಸದಿಂದ ಬರುವಂತಹ ರಟ್ಟು, ಬಾಟಲು, ಕಾರ್ಡು ಬೋರ್ಡು, ಹಾಲಿನ ಪ್ಯಾಕೆಟ್, ಕಬ್ಬಿಣ, ಇ-ವೇಸ್ಟ್, ಪೇಪರ್, ಗ್ಲಾಸ್, ಬಟ್ಟೆ, ಇತರೆ ವಸ್ತುಗಳನ್ನು ಪ್ರತೇÂಕ ಪ್ರತೇÂಕವಾಗಿ ವಿಂಗಡಿಸಿ ಸಂಗ್ರಹಿಸಲಾಗುತ್ತಿದೆ ಹಾಗೂ ಆಹಾರ ಪಾದಾರ್ಥಗಳನ್ನು ಸಂಗ್ರಹಿಸಿ ಪ್ಲಾಸ್ಟಿಕ್ ಕವರ್‌ಗಳನ್ನು ಸಂಗ್ರಹಿಸಿ ತೊಳೆದು ಒಣಗಿಸಿ ಪ್ರತೇÂಕವಾಗಿ ಸಂಗ್ರಹಿಸಿ ಮಾರಾಟಕ್ಕೆ ಸಿದ್ಧತೆ ಮಾಡಲಾಗುತ್ತಿರುವ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ವಿವರಿಸಿದರು.
ಎಸ್.ಎಲ್.ಆರ್.ಎಮ್ ಘಟಕದಲ್ಲಿ ನಗರ ಪ್ರದೇಶದಲ್ಲಿ ಪ್ರತೀ ಮನೆ, ಹೊಟೇಲ್, ವಾಣಿಜ್ಯ ಕಟ್ಟಡ, ವಸತಿ ಕಟ್ಟಡಗಳಲ್ಲಿ ವಾಸ್ತವ್ಯವಿರುವ ನಾಗರಿಕರಿಗೆ ತ್ಯಾಜ್ಯ ವಸ್ತುಗಳ ಬಗ್ಗೆ ಅರಿವು ಮೂಡಿಸಿ ತ್ಯಾಜ್ಯ / ಆಹಾರ ಪದಾರ್ಥಗಳನ್ನು ತಾಜಾ ಇರುವಾಗಲೇ 12 ಗಂಟೆಯ ಒಳಗಾಗಿ ಸಂಗ್ರಹಿಸಿ ಪ್ರಾಣಿ ಪಕ್ಷಿಗಳಿಗೆ ನೀಡಲಾಗುತ್ತಿದೆ.
ಇದರಿಂದ ಪ್ರಾಣಿ ಸಂಕುಲಕ್ಕೆ ಆಹಾರ ಒದಗಿಸಿದಂತಾಗಿ ಅವುಗಳ ಹಸಿವು ನೀಗಿಸಲು ಸಾಧ್ಯವಾಗುತ್ತದೆ ಎಂದು ಮುಖ್ಯಾಧಿಕಾರಿ ರಾಯಪ್ಪ ಅವರು ತಿಳಿಸಿದರು.
ಉಳ್ಳಾಲ ನಗರ ಸಭೆ ವ್ಯಾಪ್ತಿಯ ಸ್ವ ಸಹಾಯ ಗುಂಪುಗಳ ಪದಾಧಿಕಾರಿಗಳು, ಸದಸ್ಯರು ಮತ್ತು ಅಧಿಕಾರಿಗಳು ನಿಯೋಗದ ಜೊತೆಗಿದ್ದರು.