Advertisement

ಶ್ರೀಲಂಕಾ ಪ್ರಧಾನಿ ಕೊಲ್ಲೂರು ಭೇಟಿ

08:58 AM Nov 22, 2017 | |

ಕೊಲ್ಲೂರು: ಶ್ರೀಲಂಕಾದ ಪ್ರಧಾನಿ ರಣಿಲ್‌ ವಿಕ್ರಮ ಸಿಂಘೆ ಅವರು ಸಪತ್ನಿಕರಾಗಿ ಮಂಗಳವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವ ಸ್ಥಾನಕ್ಕೆ ಆಗಮಿಸಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶತಚಂಡಿ ಯಾಗದ ಪೂರ್ಣಾಹುತಿ ಹಾಗೂ ಪುಷ್ಪ ರಥೋತ್ಸವದಲ್ಲಿ ಪಾಲ್ಗೊಂಡರು.

Advertisement

ದೇಗುಲಕ್ಕೆ ಆಗಮನದ ಸಂದರ್ಭ ಪ್ರಧಾನಿ ಅವರನ್ನು ಪೂರ್ಣ ಕುಂಭ ಸ್ವಾಗತದೊಡನೆ ಬರಮಾಡಿ ಕೊಳ್ಳಲಾಯಿತು. ಕೊಲ್ಲೂರು ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ಜನಾರ್ದನ್‌, ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್‌ ಕುಮಾರ್‌ ಶೆಟ್ಟಿ, ಉಪ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮೂರ್ತಿ, ಸಮಿತಿ ಸದಸ್ಯರಾದ ರಮೇಶ್‌ ಗಾಣಿಗ ಕೊಲ್ಲೂರು, ವಂಡಬಳ್ಳಿ ಜಯರಾಮ ಶೆಟ್ಟಿ, ನರಸಿಂಹ ಹಳಗೇರಿ, ಅಂಬಿಕಾ ದೇವಾಡಿಗ, ಅಭಿಲಾಷ್‌ ಉಪಸ್ಥಿತ ರಿದ್ದು ರಣಿಲ್‌ ವಿಕ್ರಮ ಸಿಂಘೆ ದಂಪತಿ ಯನ್ನು ದೇಗುಲದ ವತಿ ಯಿಂದ ಸಮ್ಮಾನಿಸಿದರು.

ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಂಜೀವ ಪಾಟಿಲ್‌, ಉಪ ವಿಭಾಗಾಧಿಕಾರಿ ಶಿಲ್ಪಾನಾಗ್‌, ದೇಗುಲದ ಅರ್ಚಕ ರಾದ ಡಾ| ಕೆ.ಎನ್‌. ನರಸಿಂಹ ಅಡಿಗ, ಶ್ರೀಧರ ಅಡಿಗ, ಕೆ.ಎನ್‌. ಗೋವಿಂದ ಅಡಿಗ, ತಂತ್ರಿ ಹಾಗೂ ಸಮಿತಿ ಸದಸ್ಯ ಮಂಜುನಾಥ ಅಡಿಗ, ರಾಮಚಂದ್ರ ಅಡಿಗ, ನಿತ್ಯಾನಂದ ಅಡಿಗ, ಸುಬ್ರಹ್ಮಣ್ಯ ಅಡಿಗ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ನಡೆದವು.  

ಅರೆಶಿರೂರಿನಿಂದ ಕೊಲ್ಲೂರು ವರೆಗೆ ವಿಶೇಷ ಭದ್ರತೆ 
ಅರೆಶಿರೂರಿನಲ್ಲಿರುವ ಹೆಲಿಪ್ಯಾಡ್‌ನಿಂದ ಕೊಲ್ಲೂರು ವರೆಗೆ ರಸ್ತೆ ದಾರಿ ಯಲ್ಲಿ ಶ್ರೀಲಂಕಾ ಹಾಗೂ ರಾಜ್ಯದ ವಿಶೇಷ ಭದ್ರತಾ ಪಡೆಗಳನ್ನು ನಿಯೋ ಜಿಸಲಾಗಿತ್ತು. ದೇಗುಲದ ಮುಖ್ಯರಸ್ತೆ ಯಲ್ಲಿರುವ ಅಂಗಡಿ ಮುಂಗಟ್ಟು, ವಸತಿಗೃಹಗಳನ್ನು ಮುಚ್ಚಲಾಗಿದ್ದು ಭಕ್ತರಿಗೆ ದೇವರ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು.

ಮಾಧ್ಯಮದವರಿಗೂ ನಿರ್ಬಂಧ 
ಪ್ರಧಾನಿ ಸಿಂಘೆ ಭೇಟಿ ವೇಳೆ ಮಾಧ್ಯಮದವರಿಗೂ ದೇಗುಲದ ಒಳಗೆ ನಿರ್ಬಂಧ ಹೇರಲಾಗಿತ್ತು. ಇದರೊಂದಿಗೆ ಯಾಗದಲ್ಲಿ ಪ್ರಧಾನಿ ಸಿಂಘೆ ಅವರು ಭಾಗಿಯಾದ ಛಾಯಾ ಚಿತ್ರ ವನ್ನು ನೀಡದಂತೆ ಶ್ರೀಲಂಕಾ ಅಧಿ ಕಾರಿಗಳು ದೇಗುಲ ನಿರ್ವಹಣಾಧಿಕಾರಿಗಳಿಗೆ ತಾಕೀತು ಮಾಡಿದ್ದರು. ಇದು ಮಾಧ್ಯಮ ಪ್ರತಿನಿಧಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next