Advertisement

ಪಂಢರಪುರ 2 ಸಾವಿರ ಭಕ್ತರಿಗೆ ದರ್ಶನದ ಅವಕಾಶ !

07:41 PM Nov 17, 2020 | mahesh |

ಪಂಢರಪುರ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭಕ್ತಾದಿಗಳಿಗಾಗಿ ಶ್ರೀ ವಿಠಲ ರುಕ್ಮಿಣಿ ದೇವಸ್ಥಾನವನ್ನು ತೆರೆಯಲಾಗಿದ್ದು, ಹೆಚ್ಚುತ್ತಿರುವ ಜನ ಸಂದಣಿ ಮತ್ತು ಭಕ್ತರ ಬೇಡಿಕೆಯನ್ನು ಪರಿಗಣಿಸಿ ದೇವಾಲಯ ಸಮಿತಿಯು ಬುಧವಾರದಿಂದ 2,000 ಭಕ್ತರಿಗೆ ದೇವರ ದರ್ಶನಕ್ಕಾಗಿ ಅವಕಾಶ ಮಾಡಿಕೊಡಲು ನಿರ್ಧರಿಸಿದೆ.

Advertisement

ಕೊರೊನಾದ ಹಿನ್ನೆಲೆಯಲ್ಲಿ ಸರಕಾರ ವಿಧಿಸಿರುವ ನಿಯಮಗಳು ಮತ್ತು ಷರತ್ತುಗಳನ್ನು ಅನುಷ್ಠಾನಗೊಳಿಸುವಾಗ ದರ್ಶನ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ದೇವಾಲಯಗಳು, ಧಾರ್ಮಿಕ ಸ್ಥಳಗಳು ಮತ್ತು ಪೂಜಾ ಸ್ಥಳಗಳನ್ನು ತೆರೆಯಲು ರಾಜ್ಯ ಸರಕಾರ ಅನುಮತಿ ನೀಡಿದೆ. ಪಂಢರಪುರದ ಶ್ರೀ ವಿಠಲನ ದರ್ಶನಕ್ಕಾಗಿ ಪ್ರತಿದಿನ ಒಂದು ಸಾವಿರ ಭಕ್ತರನ್ನು ಮಂದಿರದ ಒಳಗೆ ದರ್ಶನಕ್ಕೆ ಬಿಡಲಾಗುತ್ತಿದ್ದು, ಈಗ ಸಂಖ್ಯೆಯನ್ನು ಹೆಚ್ಚಿಸಿ ಎರಡು ಸಾವಿರ ಭಕ್ತರಿಗೆ ದರ್ಶನಕ್ಕಾಗಿ ಬಿಡಲು ನಿರ್ಧರಿಸಲಾಗಿದೆ.

ಕೊರೊನಾದ ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳಿಂದ ದೇವಾಲಯಗಳನ್ನು ಮುಚ್ಚಲಾಗಿದೆ. ಆದರೆ ನಿತ್ಯಸೇವೆಯು ನಡೆಸಲಾಗುತ್ತಿತ್ತು. ದೀಪಾವಳಿಯ ಸಂದರ್ಭದಲ್ಲಿ ಭಕ್ತಾದಿಗಳ ದರ್ಶನಕ್ಕಾಗಿ ಭೇಟಿ ನೀಡಲು ದೇವಾಲಯಗಳನ್ನು ತೆರೆಯಲಾಗಿದೆ. ಇದರ ಭಾಗವಾಗಿ ದೇವಾಲಯ ಸಮಿತಿಯು ಮಂದಿರದ ಸ್ವಚ್ಚತೆ, ಸ್ಯಾನಿಟೈಜರ್‌ ಸಿಂಪಡಿಸಲಾಗುತ್ತಿದೆ. ದರ್ಶನ ಸರತಿಯಲ್ಲಿರುವ ಇಬ್ಬರು ಭಕ್ತರ ನಡುವೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಕಾಳಜಿ ವಹಿಸಲಾಗಿದ್ದು, ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಸ್ಯಾನಿಟೈಜರ್‌ ಸೌಲಭ್ಯ ಮತ್ತು ಥರ್ಮಲ್‌ ಸ್ಕ್ರೀನಿಂಗ್‌ ಸೌಲಭ್ಯವಿದೆ. ಅದೇ ಸಮಯದಲ್ಲಿ, ಸರಕಾರದ ಸೂಚನೆಯಂತೆ, ದೇವಾಲಯಕ್ಕೆ ದರ್ಶನಕ್ಕಾಗಿ ಬರುವ ಭಕ್ತರು ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ.ಮಂದಿರ ಸಮಿತಿಯ ಪರವಾಗಿ ಎಂದಿನಂತೆ ಬೆಳಗ್ಗೆ 6 ಗಂಟೆಯಿಂದ ಭಕ್ತರನ್ನು ದರ್ಶನಕ್ಕಾಗಿ ಬಿಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next