ನಿತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ, ಜಗಳಗಳು ಸಾಮಾನ್ಯ. ಆದರೆ, ಕೆಲವೊಮ್ಮೆ ಒಂದು ಸಣ್ಣ ಭಿನ್ನಾಭಿಪ್ರಾಯದಿಂದ ಸಂಸಾರವೇ ಹಾಳಾಗುವ, ಸ್ನೇಹ ಮುರಿದು ಬೀಳುವ ಅಪಾಯವಿರುತ್ತದೆ. ನಮ್ಮ ದೃಷ್ಟಿಕೋನವನ್ನು ಚೂರು ಬದಲಿಸಿಕೊಂಡುಬಿಟ್ಟರೆ ಇಂಥ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು.
ಹಾಗಾದರೆ, ಯೋಚನಾಕ್ರಮವನ್ನು ಬದಲಿಸಿಕೊಳ್ಳೋದು ಹೇಗೆ? ಅದನ್ನು ವಿವರಿಸಲೆಂದೇ ” ಎ ಟೇಕ್ ಆನ್ ಲೈಫ್ ಹ್ಯಾಂಡ್ಲಿಂಗ್ ಕಾನ್‌ಫ್ಲಿಕ್ಟ್’ ಎಂಬ ಕಾರ್ಯಾಗಾರ ನಡೆಯುತ್ತಿದೆ. ದಿರೀಶ್ ಮೋಹನ್ ಅವರು ಈ ಕಾರ್ಯಾಗಾರ ನಡೆಸಿ ಕೊಡಲಿದ್ದಾರೆ.
ಕಳೆದ ಒಂದು ವರ್ಷಗಳಿಂದ ಇವರು, ಒತ್ತಡ ನಿರ್ವಹಣೆ, ಬದಲಾವಣೆ, ಸೋಲು, ಭಾವನೆಗಳ ತಾಕಲಾಟದ ನಿರ್ವಹಣೆ….ಹೀಗೆ ಅನೇಕ ವಿಚಾರಗಳ ಕುರಿತು ಕಾರ್ಯಾಗಾರ ನಡೆಸಿದ್ದಾರೆ. ನಿಮ್ಮ ಬದುಕಿನ ಅನುಭವಗಳನ್ನು ಹಂಚಿಕೊಳ್ಳಲೂ ಅವಕಾಶವಿದೆ. ಟಿಕೆಟ್‌ಗಳು ಬುಕ್ ಮೈ ಶೋನಲ್ಲಿ ಲಭ್ಯವಿದ್ದು, ದರ 150 ರೂಪಾಯಿ.
ಎಲ್ಲಿ?: ಲಾಹೆ ಲಾಹೆ, ನಂ.2906-07, 80 ಅಡಿ ರಸ್ತೆ, ಇಂದಿರಾನಗರ
ಯಾವಾಗ?: ಜ. 28, ಭಾನುವಾರ ಸಂಜೆ 5