ಬೆಂಗಳೂರು: ಅತ್ಯುತ್ತಮ ವಿಧಾನಪರಿಷತ್ತು/ವಿಧಾನಸಭೆ ಪ್ರಶಸ್ತಿಗೆ ಮಾನದಂಡಗಳನ್ನು ಸೂಚಿಸುವ ಪೀಠಾಸೀನಾಧಿಕಾರಿಗಳ ಸಮಿತಿಯ ಅಧ್ಯಕ್ಷರನ್ನಾಗಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ನೇಮಕ ಮಾಡಲಾಗಿದೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಈ ಸಮಿತಿ ರಚಿಸಿ ವಿಶ್ವೇಶ್ವರ ಹೆಗಡೆ ಕಾಗೇರಿಯವನ್ನರು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.
ದೆಹಲಿ ವಿಧಾನಸಭೆಯ ಸಭಾಧ್ಯಕ್ಷ ರಾಮ ನಿವಾಸ್ ಗೋಯಲ್, ಮಹಾರಾಷ್ಟ್ರ ವಿಧಾನಪರಿಷತ್ತಿನ ಸಭಾಪತಿ ರಾಮರಾಜೆ ಪ್ರಥಾಪ್‌ಸಿಂಗ್ ನಾಯಕ್ ನಿಂಬಾಳ್ಕರ್, ಬಿಹಾರ ವಿಧಾನಸಭೆಯ ಸಭಾಧ್ಯಕ್ಷ ವಿಜಯ ಕುಮಾರ್ ಸಿನ್ಹ, ಅಸ್ಸಾಂ ವಿಧಾನಸಭೆಯ ಸಭಾಧ್ಯಕ್ಷ ಬಿಶ್ವಜಿತ್ ಡೈಮರಿ, ಗುಜರಾತ್ ವಿಧಾನಸಭೆಯ ಸಭಾಧ್ಯಕ್ಷೆ ಡಾ. ನಿಮಾಬೆನ್ ಆಚಾರ್ಯ, ತಮಿಳುನಾಡು ವಿದಾನಸಭೆಯ ಸಭಾಧ್ಯಕ್ಷ ಎಂ. ಅಪ್ಪಾವು ಸಮಿತಿ ಸದಸ್ಯರಾಗಿದ್ದಾರೆ.
ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 2021ರ ನವೆಂಬರ್ 17 ಮತ್ತು 18ರಂದು ನಡೆದ 82ನೇ ಅಖೀಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯದಂತೆ ಅತ್ಯುತ್ತಮ ವಿಧಾನನಪರಿಷತ್ತು/ವಿಧಾನಸಭೆ ಪ್ರಶಸ್ತಿಗೆ ಮಾನದಂಡಗಳನ್ನು ಸೂಚಿಸಲು ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾ ಅವರು ಈ ಸಮಿತಿ ರಚಿಸಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಲಾಕ್ಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.