ಶಿರಸಿ: ಮಾಜಿ ಸ್ಪೀಕರ್, ಬಿಜೆಪಿಯ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಾವು ಕಲಿತ ಕುಳವೆ ಜನತಾ ವಿದ್ಯಾಲಯದಲ್ಲಿ ಸ್ಥಾಪಿತ ಮತಗಟ್ಟೆ ೧೨೭ರಲ್ಲಿ ಮಂಗಳವಾರ ಮತದಾನ ಮಾಡಿದರು. ಕಾಗೇರಿ ಅವರ ಪತ್ನಿ ಭಾರತಿ ಹೆಗಡೆ, ಜಯಲಕ್ಷ್ಮೀ, ರಾಜಲಕ್ಷೀ, ಶ್ರೀಲಕ್ಷ್ಮೀ ಮತದಾನ ಮಾಡಿದರು. ಪ್ರಥಮ ಬಾರಿಗೆ ಕಾಗೇರಿ ಪುತ್ರಿ ಶ್ರೀಲಕ್ಷ್ಮೀ ಮತದಾನ ಮಾಡಿದರು.
ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಹತಾಶೆಯಾಗಿ ನಂಬಿಕೆ ಬಾಹಿರವಾಗಿ ಕಾರ್ಯ ಮಾಡುತ್ತಿದೆ. ಮತದಾರರು ನಿಶ್ಚಿತವಾಗಿ ಬಿಜೆಪಿ ಪರ ಮತ ಚಲಾಯಿಸಲಿದೆ.
ಬಹಳ ದೊಡ್ಡ ಉತ್ಸವ, ಹಬ್ಬ ಇದು. ಬಿಜೆಪಿಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದಾಖಲೆಯ ಅಭ್ಯರ್ಥಿಗಳ ಗೆಲುವಿನ ಮೂಲಕ ಮರಳಿ ಪ್ರಧಾನಿ ಆಗಲಿದ್ದಾರೆ ಎಂದರು.
ನಾಗರಾಜ ಶೆಟ್ಟಿ, ವಿನಯ ಭಟ್ಟ, ರಂಜಿತಾ ಹೆಗಡೆ, ಶ್ರೀನಾಥ ಶೆಟ್ಟಿ, ಕಾಗೇರಿ ಗಣಪತಿ ಶೇಟ್, ನಾಗರಾಜ ಹೆಗಡೆ ಇದ್ದರು.
ಶಿರಸಿ: ಶಾಸಕ ಭೀಮಣ್ಣ ನಾಯ್ಕ ಅವರು ತಮ್ಮ ಪತ್ನಿ ಗೀತಾ ಭೀಮಣ್ಣ ನಾಯ್ಕ, ಪುತ್ರ ಅಶ್ವಿನ್ ಅವರೊಂದಿಗೆ ಐದನೇ ನಂಬರ್ ಶಾಲೆಯ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಶಾಸಕರು ತಮ್ಮ ಕುಟುಂಬದವರೊಂದಿಗೆ ಉಳಿದ ಮತದಾರರ ಜೊತೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಇದನ್ನೂ ಓದಿ: Hunsur: ಆನೆ ನಡೆದದ್ದೇ ದಾರಿ! ಆನೆ ದಾಳಿಗೆ ಬೈಕ್ ಜಖಂ, ಕಾಂಪೌಂಡ್ ಗೆ ಹಾನಿ