Advertisement

Mangaluru; ಕಣ್ವತೀರ್ಥದಲ್ಲಿ ಪೇಜಾವರ ಶ್ರೀಗಳಿಂದ ಸಮುದ್ರ ಪೂಜೆ

12:51 AM Jan 11, 2024 | Team Udayavani |

ಮಂಗಳೂರು: ಉಡುಪಿಯಿಂದ ಜ. 15ರಂದು ಅಯೋಧ್ಯೆಗೆ ತೆರಳಲಿರುವ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಬುಧವಾರ ಪುರಾಣ ಪ್ರಸಿದ್ಧ ಕಣ್ವತೀರ್ಥ ಮಠಕ್ಕೆ ಭೇಟಿ ನೀಡಿದರು.

Advertisement

ತೀರ್ಥಕೆರೆಯಲ್ಲಿ ತೀರ್ಥಸ್ನಾನಮಾಡಿದ ಶ್ರೀಗಳು ಶ್ರೀರಾಮಾಂಜ ನೇಯ ದೇವರಿಗೆ ಆರತಿ ಬೆಳಗಿದರು. ಗ್ರಾಮದ ಬೋವಿ ಸಮಾಜ, ಗಟ್ಟಿ ಸಮಾಜ, ಮಲಯಾಳಿ ಬಿಲ್ಲವ, ಬಂಟ, ಮೊಗವೀರ, ಬ್ರಾಹ್ಮಣ ಸಮಾಜ ಸಹಿತ ವಿವಿಧ ಸಮಾಜದ ಪ್ರಮುಖರು, ಗುರಿಕಾರರು, ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ ಸಂಸ್ಥೆಯ ಸದಸ್ಯರು, ಮಂಜೇಶ್ವರ ಪಂಚಾಯತ್‌ನ ಅಧ್ಯಕ್ಷರು ಒಳಗೊಂಡಂತೆ ಸಾರ್ವಜನಿಕರ ಜೊತೆಗೂಡಿ ಪೇಜಾವರ ಶ್ರೀಗಳು ಮೆರವಣಿ ಗೆಯ ಮೂಲಕ ಕಡಲ ಕಿನಾರೆಗೆ ತೆರಳಿ ಸಮುದ್ರ ರಾಜನಿಗೆ ಹಾಲೆರೆದು, ಹೂ ಹಣ್ಣು ಸಹಿತ ಅಭಿಷೇಕದೊಂದಿಗೆ ಆರತಿ ಬೆಳಗಿದರು.

ಶ್ರೀ ರಾಮಾಂಜನೇಯ ದೇವಸ್ಥಾದ ನವೀಕೃತ ಹೊರ ಸುತ್ತು ಪೌಳಿಯನ್ನು ಶ್ರೀಗಳು ಲೊಕಾರ್ಪಣೆಗೊಳಿಸಿದರು. ಸುತ್ತುಪೌಳಿ ನವೀಕರಣದ ಉಸ್ತುವಾರಿ ವಹಿಸಿದ ಅರಿಬೈಲು ಗೋಪಾಲಕೃಷ್ಣ ಶೆಟ್ಟಿ ಮತ್ತು ಸುರೇಖಾ ಶೆಟ್ಟಿ ದಂಪತಿಯನ್ನು ಗೌರವಿಸಿದರು.

ಪೇಜಾವರ ಮಠದ ದಿವಾನರಾದ ರಘುರಾಮ ಆಚಾರ್ಯ, ಸುಬ್ರಹ್ಮಣ್ಯ ಭಟ್‌, ವಾಸುದೇವ ಭಟ್‌ ಪೆರಂಪಳ್ಳಿ, ಮಂಜೇಶ್ವರ ಶ್ರೀಮದನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಟಿ. ಗಣಪತಿ ಪೈ, ಮಧುಸೂದನ ಆಚಾರ್ಯ ಕಣ್ವತೀರ್ಥ, ಎಸ್‌. ಪ್ರದೀಪ ಕುಮಾರ ಕಲ್ಕೂರ, ಸುಧಾಕರ ರಾವ್‌ ಪೇಜಾವರ, ಜನಾರ್ದನ ಹಂದೆ ಮೊದಲಾದವರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next