Advertisement

ಅಯೋಧ್ಯೆ ಭೂಖರೀದಿ ವ್ಯವಹಾರ ಪಾರದರ್ಶಕ: ಪೇಜಾವರಶ್ರೀ

06:58 PM Jul 19, 2021 | Team Udayavani |

ಉಡುಪಿ : ಅಯೋಧ್ಯೆ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಮಂದಿರ ನಿವೇಶನದ ಪಕ್ಕದಲ್ಲಿರುವ ಭೂಮಿ ಖರೀದಿಸಿದ ವ್ಯವಹಾರ ಸರಿಯಾಗಿಯೇ ಇದೆ ಎಂದು ಟ್ರಸ್ಟ್‌ ಟ್ರಸ್ಟಿ ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ.

Advertisement

“ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ನಾವು ಇತ್ತೀಚಿಗೆ ಅಯೋಧ್ಯೆಗೆ ತೆರಳಿ ಅಲ್ಲಿನ ಸ್ಥಿತಿಗತಿಗಳನ್ನು ಕಂಡಿದ್ದೇವೆ. ಟ್ರಸ್ಟ್‌ನ ಸದಸ್ಯರು ಮೂರು ದಿನವಿದ್ದು ಎಲ್ಲ ದಾಖಲೆಗಳನ್ನು ಪರಿಶೀಲಿಸಿದ್ದು ಎಲ್ಲ ವ್ಯವಹಾರಗಳೂ ಸಮರ್ಪಕವಾಗಿದೆ ಎಂದು ಖಜಾಂಚಿ ಶ್ರೀಗೋವಿಂದದೇವ ಗಿರಿ ಸ್ವಾಮೀಜಿಯವರು ತಿಳಿಸಿರುವುದಾಗಿ ಹೇಳಿದರು.

ಭೂಮಿಯನ್ನು ಕೊಟ್ಟ ಮನ್ಸೂರರೂ ತಾವು ಹಿಂದೆ ಭೂಮಿಯನ್ನು ಪಡೆದುಕೊಂಡ ಸಂದರ್ಭ ದರ ಕಡಿಮೆ ಇತ್ತು. ಈಗ ದರ ಹೆಚ್ಚಿಗೆಯಾಗಿದೆ. ಆದರೂ ಸರಕಾರ ನಿಗದಿಪಡಿಸಿದ ದರಕ್ಕಿಂತ ಕಡಿಮೆಯಲ್ಲಿಯೇ ಕೊಟ್ಟಿದ್ದೇನೆಂದೂ ಹೇಳಿರುವುದಾಗಿ ಪೇಜಾವರ ಸ್ವಾಮೀಜಿ ತಿಳಿಸಿದರು. ಮಂದಿರದ ಪಂಚಾಂಗದ ಕೆಲಸ ಭರದಿಂದ ನಡೆಯುತ್ತಿದೆ. ನಿಗದಿತ ವೇಳೆಯಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಇದನ್ನೂ ಓದಿ : ಪ್ರತಿ ವರ್ಷ ತಲಕಾಡು ಗಂಗರ ಉತ್ಸವ ಆಯೋಜಿಸುತ್ತೇವೆ : ಸಚಿವ ಸಿ‌.ಪಿ.ಯೋಗೇಶ್ವರ್

ಜು. 28ರಿಂದ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳಬೇಕೆಂದಿದ್ದೇವೆ. ಗುರುಗಳು ನಡೆಸುತ್ತಿದ್ದ ಅನೇಕ ಸಂಘ ಸಂಸ್ಥೆಗಳಿವೆ. ಇದುವರೆಗೆ ಕೊರೊನಾ ಕಾರಣದಿಂದ ಮೇಲ್ವಿಚಾರಣೆ ನಡೆಸಲು ಆಗಲಿಲ್ಲ. ಗುರುಗಳು ಅಲ್ಲಲ್ಲಿ ಸ್ಥಳೀಯ ಸಮಿತಿ, ಟ್ರಸ್ಟ್‌ ರಚಿಸಿ ನಿರ್ವಹಣ ವ್ಯವಸ್ಥೆ ಮಾಡಿರುವುದರಿಂದ ನಿರ್ವಹಣೆಗೆ ತೊಂದರೆಯಾಗಿಲ್ಲ.

Advertisement

ಚಾತುರ್ಮಾಸದ ಅವಧಿಯಲ್ಲಿ ಇವರನ್ನು ಕರೆಸಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಬೇಕಾಗಿದೆ. ಬೆಂಗಳೂರಿನ ಇತರ ಸಂಘ ಸಂಸ್ಥೆಗಳಿಗೆ ಚಾತುರ್ಮಾಸದ ವಿಚಾರವನ್ನು ಇನ್ನೂ ಹೇಳಿಲ್ಲ. ಜು. 28ರೊಳಗೆ ಏನಾದರೂ ಕಾನೂನು ನಿಯಮಾವಳಿಯಲ್ಲಿ ಬದಲಾವಣೆಯಾದರೆ ಉಡುಪಿಗೆ ಬಂದರೂ ಬರಬಹುದಾದ ಕಾರಣ ಪ್ರಕಟಪಡಿಸಿಲ್ಲ ಎಂದರು.

ಗುರುಗಳು ಆರಂಭಿಸಿದ ಸಂಸ್ಥೆಗಳಿಗೆ ಆರ್ಥಿಕ ಅಡಚಣೆ ಏನಾದರೂ ಆಗಿದೆಯೆ ಎಂದು ಪ್ರಶ್ನಿಸಿದಾಗ ಎರಡು ಹಾಸ್ಟೆಲ್‌ಗ‌ಳಿಗೆ ವಿದ್ಯಾರ್ಥಿಗಳೂ ಇಲ್ಲದ ಕಾರಣ ಅಂತಹ ತೊಂದರೆ ಏನಾಗಿಲ್ಲ. ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿರುವ ದೇವಸ್ಥಾನಗಳಿಂದ ಬರುವ ಆದಾಯ ಕಡಿಮೆಯಾಗಿ ವಿದ್ಯಾಪೀಠದ ನಿರ್ವಹಣೆಗೆ ಸ್ವಲ್ಪ ತೊಂದರೆಯಾಗಿದೆ. ಅಂತಹ ಗಂಭೀರ ಸಮಸ್ಯೆಗಳು ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next