Advertisement
ಸುದ್ದಿಗಾರರ ಜೊತೆ ಮೈಸೂರಿನಲ್ಲಿ ಭೂ ಅಕ್ರಮದ ವರದಿ ಬಗ್ಗೆ ಮಾತನಾಡಿದ ವಿಶ್ವನಾಥ್, ಸರಿಯಾದ ಸರ್ವೇ ನಂಬರ್ ನಮೂದಿಸಿ ವರದಿ ನೀಡಬೇಕು. ಈಗಾಗಲೇ ಈ ಪ್ರಕರಣದಲ್ಲಿ ಆದೇಶ ಆಗೋಗಿದೆ. ಇದೀಗಾ ಸರಪಳಿ ಹಿಡಿದು ಆ ಕಡೆ ಈ ಕಡೆ ತಿರುಗಿಸುತ್ತಿದ್ದಾರೆ ಅಷ್ಟೇ. ಈ ಪ್ರಕರಣವನ್ನ ಮುಚ್ಚಿ ಹಾಕುವ ಕೆಲಸ ಆಗುತ್ತಿದೆ. ಮೊದಲು ಇದೆಲ್ಲದರ ಬಗ್ಗೆ ಪ್ರಾದೇಶಿಕ ಆಯುಕ್ತರು ಸಮಗ್ರ ತನಿಖೆ ಮಾಡಬೇಕು ಎಂದರು.
Related Articles
ರಾಜಕಾಲುವೆ ವಿಚಾರ ಡಿಸಿ ಆದೇಶದಲ್ಲಿ ಎಲ್ಲೂ ಇಲ್ಲ. ಆದೇಶದಲ್ಲಿ ಇಲ್ಲದೆ ಇರೋ ವಿಚಾರ ತನಿಖೆ ಮಾಡಿ ಇದರಲ್ಲಿ ಅಕ್ರಮ ಇಲ್ಲ ಅಂತಾ ವರದಿ ಪಡೆಯುವ ಯತ್ನವಿದು. ಪ್ರಾದೇಶಿಕ ಆಯುಕ್ತರು, ಕಳಂಕಿತರ ನಡುವೆ ಒಪ್ಪಂದ ನಡೆದಿರೋ ರೀತಿ ಕಾಣುತ್ತಿದೆ. ಹೀಗಾಗಲೆ ವರದಿಯೂ ಸಿದ್ಧವಿದೆ. ಸೋಮವಾರ ಅದು ಬಿಡುಗಡೆಯಾಗುತ್ತದೆ ಅಷ್ಟೆ.
Advertisement
ಹಿಂದಿನ ಡಿಸಿ ಮಾಡಿದ ಆದೇಶ ಎಲ್ಲಾ ಬಿಟ್ಟು ನಿಮಗೆ ಅನುಕೂಲಕವಾದ ಭಾಗದ ತನಿಖೆಗೆ ಮಾತ್ರ ಆಗ್ರಹ ಮಾಡಲಾಗಿದೆ. ಡಿಸಿ ಮಾಡಿದ ಆದೇಶ ಬಿಟ್ಟು ಪಾಸಿಂಗ್ ರೀಮಾರ್ಕ್ ಅಷ್ಟನ್ನೆ ಹಿಡಿದು ಕೊಂಡು ಯಾಕೆ ಎಳೆದಾಡಲಾಗುತ್ತಿದೆ. ಪ್ರಾದೇಶಿಕ ಆಯುಕ್ತರು ಸೋಮವಾರ ಕೊಡುವ ವರದಿಗೆ ಯಾವ ಬೆಲೆಯೂ ಇಲ್ಲ. ಕಣ್ಣಿಗೆ ಮಣ್ಣೆರೆಚಿ, ರೋಹಿಣಿ ಸಿಂಧೂರಿ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುವ ಯತ್ನ. ಈ ವರದಿ ಮೂಲಕ ನಡೆದಿದೆ. ಪ್ರಾದೇಶಿಕ ಆಯುಕ್ತರಿಗೆ ಒಳ್ಳೆಯ ಹೆಸರಿಲ್ಲ. ಪ್ರಾದೇಶಿಕ ಆಯುಕ್ತರು ಕಳಂಕಿತರ ಬಗ್ಗೆ ಸೋಮವಾರ ನೀಡುವ ವರದಿ ಜನ ನಂಬಬಾರದು. ಒಂಟಿ ಧ್ವನಿಗೆ ಗಟ್ಟಿಧ್ವನಿ. ಒಂಟಿಯಾದರೂ ಪರವಾಗಿಲ್ಲ ನಾನು ಹೋರಾಡುತ್ತೇನೆ ಎಂದು ಮೈಸೂರಿನಲ್ಲಿ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.