Advertisement

ಹುಣಸೂರು ಜಿಲ್ಲೆಯನ್ನಾಗಿಸಲು ವಿಶ್ವನಾಥ್‌ ಮನವಿ

09:29 PM Oct 04, 2019 | Team Udayavani |

ಹುಣಸೂರು: ಮಾಜಿ ಸಿಎಂ ದೇವರಾಜ ಅರಸು ಪ್ರತಿನಿಧಿಸಿದ ಹುಣಸೂರನ್ನು ಜಿಲ್ಲೆಯನ್ನಾಗಿಸಿ, ಅದಕ್ಕೆ ದೇವರಾಜ ಅರಸು ಜಿಲ್ಲೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ವಿಜಯದಶಮಿಯಂದು ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸುವುದಾಗಿ ಮಾಜಿ ಶಾಸಕ ಎಚ್‌.ವಿಶ್ವನಾಥ್‌ ತಿಳಿಸಿದರು.

Advertisement

ಹುಣಸೂರು ಉಪ ವಿಭಾಗ ಕೇಂದ್ರವಾಗಿದ್ದು, ದೇವರಾಜ ಅರಸು ದೂರದೃಷ್ಟಿ ಫಲವಾಗಿ ಹುಣಸೂರು ಸಾಕಷ್ಟು ಅಭಿವೃದ್ಧಿಯಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಹುಣಸೂರು, ಎಚ್‌.ಡಿ.ಕೋಟೆ, ಪಿರಿಯಾಪಟ್ಟಣ, ಕೆ.ಆರ್‌.ನಗರ, ಸರಗೂರು, ಸಾಲಿಗ್ರಾಮ ತಾಲೂಕುಗಳಗೊಂಡಂತೆ ಜಿಲ್ಲಾ ಕೇಂದ್ರವನ್ನಾಗಿಸಿ, ದೇವರಾಜ ಅರಸು ಹೆಸರನ್ನು ಕರ್ನಾಟಕ ಭೂಪಟದಲ್ಲಿ ಉಳಿಸುವಂತೆ ಮಾಡಬೇಕೆಂದು ಕ್ಷೇತ್ರದ ಜನರ ಪರವಾಗಿ ಮನವಿ ಸಲ್ಲಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಸ್‌ ವಾಪಾಸ್‌ಗೆ ಮನವಿ: ನಗರದಲ್ಲಿ 2015ರಲ್ಲಿ 17 ಹಾಗೂ 2017ರಲ್ಲಿ ದಾಖಲಾಗಿದ್ದ 6 ಪ್ರಕರಣ ದಾಖಲಾಗಿದ್ದಲ್ಲದೇ, ಕಲಂ 107ರ ಅಡಿಯಲ್ಲಿ ದಾಖಲಾಗಿರುವ ಎಲ್ಲಾ ಪ್ರಕರ‌ಣಗಳು ಹಾಗೂ ರೌಡಿಶೀಟರ್‌ ಕೇಸ್‌ಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ವಾಪಸ್‌ ಪಡೆದು ತಾಲೂಕಿನಲ್ಲಿ ಶಾಂತಿ ನೆಲೆಸಲು ಅನುಕೂಲವಾಗುವಂತೆ ಕೋರಲು ಅ.8ರಂದು ತಾಲೂಕಿನ ಮಾಜಿ ಶಾಸಕರು, ಎಲ್ಲಾ ಪಕ್ಷಗಳ ಮುಖಂಡರು ಮತ್ತು ಸಂಘಸಂಸ್ಥೆಗಳ ಪ್ರಮುಖರೊಂದಿಗೆ ಮೈಸೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಪ್ರತಾಪ್‌ ಮಾತು ಸಲ್ಲ: ಮಹಿಷಾ ದಸರಾ ಆಚರಣೆ ಕುರಿತು ಸಂಸದ ಪ್ರತಾಪ್‌ ಸಿಂಹ ಲಘುವಾಗಿ ಮಾತನಾಡಬಾರದಿತ್ತು. ಅವರು ದಲಿತ ಸಮುದಾಯದ ಭಾವನೆ ಕೆರಳಿಸುವ ಮಾತುಗಳನ್ನಾಡಿದ್ದಾರೆ. ಇದು ಮತ್ತಷ್ಟು ವಿವಾದವಾಗುವುದ‌ನ್ನು ತಪ್ಪಿಸಲು ಉಸ್ತುವಾರಿ ಸಚಿವ ಸೋಮಣ್ಣ ಅವರು ಪ್ರಗತಿಪರ ಮುಖಂಡರನ್ನು ಹಾಗೂ ಸಂಸದರನ್ನು ಕರೆಸಿ, ಚರ್ಚೆ ನಡೆಸಬೇಕು ಈ ಬಗ್ಗೆ ತಾವೇ ಸಚಿವರ ಜತೆ ಮಾತುಕತೆ ನಡೆಸುತ್ತೇನೆ ಎಂದರು. ಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ಸತೀಶ್‌ಕುಮಾರ್‌, ಮುಖಂಡರಾದ ಅಣ್ಣಯ್ಯನಾಯಕ, ವಾಸೇಗೌಡ, ಗಣೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next