Advertisement

ವಿಶ್ವಕ್ಕೆ ಕಲೆ,ಸಂಸ್ಕೃತಿ ಪರಿಚಯಿಸಿದವರು ವಿಶ್ವಕರ್ಮರು: ಆಸ್ಕರ್‌ 

02:38 PM Aug 15, 2017 | |

ಮುಂಬಯಿ: ವಿಶ್ವಕ್ಕೆ ಭಾರತದ ಕಲೆ ಸಂಸ್ಕೃತಿಯನ್ನು ಪರಿಚಯಿಸಿದವರು ವಿಶ್ವಕರ್ಮರು. ಶಿಲ್ಪಕಲೆ ಇಡೀ ಜಗತ್ತಿಗೆ ಮಾದರಿಯಾಗಿದೆ, ವಿಶ್ವಕರ್ಮರಿಗೆ ಕಲೆ ಸಂಸ್ಕೃತಿ ಹುಟ್ಟಿನಿಂದಲೇ ಬಂದಿದೆ. ಯಾವುದೇ ತರಬೇತಿಯ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ,  ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಹೇಳಿದರು.

Advertisement

ಅವರು  ಹೊಸದಿಲ್ಲಿಯ ಕರ್ನಾಟಕ ಸಂಘದ ಸಭಾಂಗಣದಲ್ಲಿ ಕಲಾ ಸಂಕುಲ ಸಂಸ್ಥೆಯ ವತಿಯಿಂದ ಆ. 11ರಂದು ನಡೆದ ಅಖೀಲ ಭಾರತ 2ನೇ ವಿಶ್ವಕರ್ಮ ಸಂಸ್ಕೃತಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕದಲ್ಲಿ ವಿಶ್ವಕರ್ಮ ಸಮುದಾಯದವರು ಅಭಿವೃದ್ಧಿಯಾಗಬೇಕು ಎಂಬ ಮಹತ್ವದ ಉದ್ದೇಶ ದಿಂದಲೇ ಕರ್ನಾಟಕ ಸರ್ಕಾರ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿದೆ, ಕರ ಕುಶಲಕರ್ಮಿಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲಿ.  ಮಾರುತಿ ಬಡಿಗೇರ್‌ ದೆಹಲಿಯಲ್ಲಿ ನಡೆಸುತ್ತಿರುವ ಸಮ್ಮೇಳನ ಅತಿ  ಮಹತ್ವದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮ್ಮೇಳನ ಸಮಿತಿಯ ಅಧ್ಯಕ್ಷ ರಾದ ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷ
ಮಾರುತಿ ಬಡಿಗೇರ್‌ ಮಾತನಾಡಿ  ದೆಹಲಿಯಲ್ಲಿ ವಿಶ್ವಕರ್ಮ ಭವನ ನಿರ್ಮಾಣ, ಕೇಂದ್ರ ಸರ್ಕಾರದಿಂದ ವಿಶ್ವಕರ್ಮ ಜಯಂತಿ ಘೋಷಣೆ, ಮತ್ತು ಕೇಂದ್ರ ಸರ್ಕಾರ ದೇಶದಇತರ ರಾಜ್ಯಗಳಲ್ಲೂ ವಿಶ್ವಕರ್ಮ ಜಯಂತಿ ಘೋಷಣೆ ಮಾಡಬೇಕು ಎನ್ನುವ ಉದ್ದೇಶದಿಂದ ಸಮ್ಮೇಳನ ನಡೆಸಲಾಗುತ್ತಿದೆ ಎಂದರು.

ನಿವೃತ್ತ ಐಎಎಸ್‌ ಅಧಿಕಾರಿ ಬೆಂಗಳೂರಿನ ಕೆ. ಎಸ್‌. ಪ್ರಭಾಕರ್‌ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್‌. ನಂದಕುಮಾರ್‌, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಾಬು ಪತ್ತಾರ್‌, ನವದೆಹಲಿ ಜನಕಪುರಿ ಕನ್ನಡ ಕೂಟದ ಅಧ್ಯಕ್ಷ ಎನ್‌. ಆರ್‌. ಶ್ರೀನಾಥ್‌, ಕಲಬುರ್ಗಿ ವಿಶ್ವಕರ್ಮ ಎಜುಕೇಷನಲ್‌ ಟ್ರಸ್ಟ್‌ ಅಧ್ಯಕ್ಷ ವೀರೇಂದ್ರ ಇನಾಂದಾರ್‌, ದೆಹಲಿ ವಿಶ್ವಕರ್ಮ ಸಮಾಜದ ಮುಖಂಡ ಓರಿಲಾಲ್‌ ಶರ್ಮಾ, ದಿನೇಶ್‌ ವತ್ಸ,  ಪರಮಾನಂದ ಜಾಂಗೀರ, ವೇದ ಪ್ರಕಾಶ್‌ ಪಾಂಚಾಲ್‌, ಪ್ರಕಾಶ್‌ ಪಾಂಚಾಳ್‌, ಒಲಿಂಪಿಕ್‌ ಕ್ರೀಡಾಪಟು ದೀಪಾ ಕರ್ಮಾಕರ್‌ ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ ಮಂಗಳೂರಿನ ನೃತ್ಯ ಕಲಾವಿದೆ ಕು| ರೆಮೋನಾ ಇವೆಟ್‌ ಪಿರೇರಾ ಅವರಿಂದ ನƒತ್ಯ ವೈಭವ, ಕಲಾವಿದರಾದ ಉಡುಪಿಯ ಸುರೇಶ್‌ ಆಚಾರ್ಯ ಮತ್ತು ರಾಯಚೂರಿನ ಸೌಭಾಗ್ಯ ಅವರಿಂದ ಗೀತಗಾಯನ ನಡೆಯಿತು. ವಿವಿಧ ಕ್ಷೇತ್ರಗಳ ಗಣ್ಯ ಸಾಧಕರಾದ ದಿನೇಶ್‌ ಕುಮಾರ್‌ ವತ್ಸ ವಿಶ್ವಕರ್ಮ ನವದೆಹಲಿ, ಅಜಯ್‌ ಕುಮಾರ್‌ ಶೋಬಾನೆ ಭೂಪಾಲ್‌, ಆಬೇìಟ್ಟು ಜ್ಞಾನದೇವಾ ಕಾಮತ್‌, ಹೇಮ ರೆಡ್ಡಿ, ಎನ್‌. ಆರ್‌. ಸೌಭಾಗ್ಯಾ, ಸೋಮಶೇಖರ್‌, ಜಿ. ಮಹೇಶ್‌, ಫಾತೀಮಾ ಹುಸೇನ್‌, ಕೃಷ್ಣ ಕುಮಾರ್‌ ಎಸ್‌. ಯಾಧವ್‌, ವಿಜಯ ಕುಮಾರ್‌ ಹಂಚಿನಾಳ್‌, ಮೋನಪ್ಪ ಇನಾಂದಾರ್‌, ಕಾಳಪ್ಪ ಇನಾಂದಾರ್‌, ಎಂ. ಜಿ. ಪತ್ತಾರ್‌ ಇವರಿಗೆ ಪ್ರಶಸ್ತಿ ಪ್ರದಾನ ಮತ್ತು ಮಂಗಳೂರಿನ ನೃತ್ಯ ಕಲಾವಿದೆ ರೆಮೋನಾ ಇವೆಟ್‌ ಪಿರೇರಾಗೆ ಭಾರತ ಗೌರವ ಪ್ರಶಸ್ತಿ ಪ್ರದಾನ ನಡೆಯಿತು

Advertisement
Advertisement

Udayavani is now on Telegram. Click here to join our channel and stay updated with the latest news.

Next