Advertisement

ಶಿಲ್ಪ ಕಲಾ ವೈಭವಕ್ಕೆ ವಿಶ್ವ ಕರ್ಮರ ಕೊಡುಗೆ ಅಪಾರ

07:42 PM Sep 18, 2022 | Team Udayavani |

ಸೈದಾಪುರ: ದೇಶದ ಸಂಸ್ಕೃತಿ ಮತ್ತು ಶಿಲ್ಪಕಲಾ ವೈಭವಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ಪಿಡಿಒ ಮೌಲಾಲಿ ಎ. ಐಕೂರು ಅಭಿಪ್ರಾಯಪಟ್ಟರು.

Advertisement

ಪಟ್ಟಣದ ವಿಶ್ವಕರ್ಮ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಿಶ್ವಕರ್ಮ ಸಮುದಾಯದವರು ತಮ್ಮ ಕುಲವೃತ್ತಿಗಳ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಇತಿಹಾಸ ಹಾಗೂ ಪುರಾಣಗಳಲ್ಲಿ ಕೂಡ ಅವರ ಕಾರ್ಯದ ಬಗ್ಗೆ ಉಲ್ಲೇಖವಿಲ್ಲದೇ. ಮನುಷ್ಯನ ಭಾವನೆಗಳನ್ನು ವಸ್ತುಗಳ ಮೇಲೆ ಕೆತ್ತನೆ ಮಾಡಿ ತೋರಿಸುವ ಬಹುದೊಡ್ಡ ಕೆಲಸ ವಿಶ್ವಕರ್ಮ ಸಮುದಾಯದಿಂದ ನಡೆಯುತ್ತಿದೆ. ಹಿಂದುಳಿದ ವಿಶ್ವಕರ್ಮ ಸಮುದಾಯವನ್ನು ಗುರುತಿಸಿ ವಿಶ್ವಕರ್ಮ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ. ವಿಶ್ವಕರ್ಮ ಸಮುದಾಯಕ್ಕೆ ಹೆಚ್ಚಿನ ಸೌಲಭ್ಯ ದೊರಕಿಸಿ ಕೊಡಬೇಕು. ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು. ವಿಶ್ವಕರ್ಮ ಸಮುದಾಯದ ಬಗ್ಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಿಳಿಸುವಂತಾಗಬೇಕು ಎಂದರು.

ವಿಶ್ವಕರ್ಮ ಸಮುದಾಯದ ಉಪಾಧ್ಯಕ್ಷ ಬಾಲಪ್ಪ ಸೌರಾಷ್ಟ್ರಹಳ್ಳಿ ಮಾತನಾಡಿದರು. ವಿಶ್ವಕರ್ಮ ವಲಯಾಧ್ಯಕ್ಷ ಮೋನಪ್ಪ ಗೊಂದಡಿಗಿ, ಕಾಳಪ್ಪ ದುಪ್ಪಲ್ಲಿ, ರಾಘು, ಸಿದ್ಧಪ್ಪ ಮುನಗಾಲ, ಗಂಗಪ್ಪ ಸುರಪುರ, ಮೋನಪ್ಪ, ಶ್ರೀನಿವಾಸ ಬಾಡಿಯಾಲ, ದೊಡ್ಡಪ್ಪ ಗ್ವಾಡಿಯಾಳ, ಮಹೇಶ, ಸಂಜೀವ, ನಿಂಗಪ್ಪ ಪೂಜಾರಿ ದುಪ್ಪಲ್ಲಿ, ಕಿರಣ ಕುಮಾರ ವಿಶ್ವಕರ್ಮ, ರಮೇಶ, ಮೊನೇಶ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next