Advertisement
ಸಂಜೆ ಯಜ್ಞ ಸಮರ್ಪಣೆ (ಯಜ್ಞಶಾಲೆಗೆ ಅಗ್ನಿಸ್ಪರ್ಶ) ಮಂತ್ರಾ ಶೀರ್ವಾದ, ಮಹಾ ಪ್ರಸಾದದೊಂದಿಗೆ ಸಂಪನ್ನಗೊಂಡಿತು. ರವಿವಾರ ಯಾಗಕ್ಕೆ ಭಕ್ತ ಜನಪ್ರವಾಹ ಹರಿದು ಬಂತು.
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಜರಗಿದ ಅರುಣ ಕೇತುಕ ಚಯನ ಪೂರ್ವಕವಾದ ವಿಶ್ವಜಿತ್ ಅತಿರಾತ್ರ ಸೋಮಯಾಗಕ್ಕೆ ಸ್ಥಳೀಯ ಪತ್ವಾಡಿಯ ಬದ್ರಿಯಾ ಜಮಾಅತ್ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿ ಶುಭಹಾರೈಸುವುದರೊಂದಿಗೆ ಸರ್ವಧರ್ಮ ಸಹಿಷ್ಣುತೆಯ ಚಿಂತನೆಗೆ ಯಾಗಭೂಮಿ ಸಾಕ್ಷಿಯಾಯಿತು.
ಶ್ರೀಕ್ಷೇತ್ರದೊಂದಿಗೆ ನಿಕಟ ಸಂಪರ್ಕ ವಿರುವ ಪತ್ವಾಡಿ ಮಸೀದಿಯ ಪದಾಧಿ ಕಾರಿಗಳು ಕಳೆದೊಂದು ವಾರದಿಂದ ಜರಗಿದ ಸೋಮಯಾಗದ ವಿಶೇಷತೆಗಳನ್ನು ಕೇಳಿ ಸಾಮರಸ್ಯದ ಸಂದೇಶವನ್ನು ಶ್ರೀಗಳೊಂದಿಗೆ ಹಂಚಿಕೊಂಡರು. ಶ್ರೀಗಳು ಅವರನ್ನು ಅಭಿನಂದಿಸಿದರು. ಶ್ರೀ ನಿತ್ಯಾನಂದ ಚಾರಿಟೆಬಲ್ ವಿಶ್ವಸ್ತ ಮಂಡಳಿಯ ವಿಶ್ವಸ್ತರಲ್ಲಿ ಓರ್ವರಾದ ಗೋಪಾಲ ಎ. ಬಂದ್ಯೋಡು, ಬದ್ರಿಯಾ ಜಮಾಅತ್ ಸಮಿತಿ ಪದಾಧಿಕಾರಿಗಳಾದ ಉಪಾಧ್ಯಕ್ಷ ಅಲಿ ಮಾಸ್ತರ್, ಕಾರ್ಯದರ್ಶಿ ಮೊ„ದು ಹಾಜಿ, ಸದಸ್ಯರಾದ ಇಬ್ರಾಹಿಂ, ಅಬ್ದುಲ್ಲ, ಅಲಿ ಉಪಸ್ಥಿತರಿದ್ದರು.
Related Articles
ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಜರಗಿದ ಸೋಮಯಾಗದ ಐದನೇ ದಿನದಂದು ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಗೆ “ಧರ್ಮ ಚಕ್ರವರ್ತಿ’ ಬಿರುದನ್ನು ನೀಡಿ ಗೌರವಿಸಲಾಯಿತು.
Advertisement
ಸಮಾರಂಭದಲ್ಲಿ ಮಾತನಾಡಿದ ಡಾ| ಹೆಗ್ಗಡೆಯವರು, ಮಾನ ಸಮ್ಮಾನಗಳು ಅಂತರಂಗದಲ್ಲಿ ಅಹಂಕಾರವಾಗಿ ಮೂಡದೆ, ಆರ್ತರ ಸೇವೆಮಾಡುವ, ಬದುಕನ್ನು ಸಾರ್ಥಕ್ಯಗೊಳಿಸುವ ಉತ್ತಮ ಕರ್ತವ್ಯಕ್ಕೆಳಸಲು ಪ್ರೇರಣೆ ನೀಡಬೇಕು ಎಂದು ತಿಳಿಸಿದರು. ಗೌರವ, ಅಭಿನಂದನೆಗಳು ಕರ್ತವ್ಯ ಪ್ರಜ್ಞೆಯನ್ನು ಜಾಗƒತಗೊಳಿಸಿ ಮುನ್ನಡೆಯಲು ಪ್ರೇರಣೆ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಗುರುವಾಯೂರು ದೇವಾಲಯದ ತಂತ್ರಿವರ್ಯ ಬ್ರಹ್ಮಶ್ರೀ ಚೇನಾಸ್ ದಿನೇಶನ್ ನಂಬೂದಿರಿಪ್ಪಾಡ್ ಅವರು ಮಾತನಾಡಿ, ಇಂದಿನ ಗೊಂದಲಮಯವಾದ ಪ್ರಪಂಚ, ನೋವುಗಳ ಮಧ್ಯೆ ಇಂತಹ ವೇದೋಕ್ತ ವಿಧಿವಿಧಾನಗಳಿಂದ ಸುಭಿಕ್ಷ ನೆಲೆಗೊಳ್ಳಲಿ. ಕೊಂಡೆವೂರು ಪ್ರದೇಶವು ಧನಾತ್ಮಕಶಕ್ತಿ ಕೇಂದ್ರವಾಗಿ ಬೆಳವಣಿಗೆಗೊಂಡಿದ್ದು, ಇಲ್ಲಿಯ ವಾತಾವರಣ ಸಂಕಷ್ಟವನ್ನು ದೂರಗೊಳಿಸಿ ಸಂತƒಪ್ತಿ ನೀಡುವ ತಾಣವಾಗಿ ರೂಪುಗೊಂಡಿದೆ ಎಂದರು.