ಕುಂಬಳೆ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಳೆದ ಫೆ. 18ರಿಂದ ಅತ್ಯಪೂರ್ವವಾಗಿ ನಡೆದು ಬಂದ ಅರುಣ ಕೇತುಕ ಚಯನಫೂರ್ವಕವಾಗಿ ಜರಗಿದ ವಿಶ್ವಜಿತ್ ಅತಿರಾತ್ರ ಸೋಮಯಾಗ ಅಪಾರ ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.
ಬೆಳಗ್ಗೆ ಪ್ರಾಯಶ್ಚಿತ್ತಾದಿ ಯಜ್ಞಪುಚ್ಚ, ಬಳಿಕ ಉಪ್ಪಳ ಹೊಳೆಯಲ್ಲಿ ಅವಭƒಥ ಸ್ನಾನ ನಡೆಯಿತು. ಬಳಿಕ ಉದಯನಿಯೇಷ್ಟಿ ಹಾಗೂ ಮೈತ್ರಾವರುಣ್ಯೇಷ್ಟಿ, ಉದವಸಾನೀಯ ನೆರವೇರಿತು. ಆ ಬಳಿಕ ಯಾಗಾಚಾರ್ಯ ಗಣೇಶ ವಾಸುದೇವ ಜೋಗಳೇಕರ್, ಯಾಗದ ನೇತƒತ್ವ ವಹಿಸಿದ್ದ ಅಗ್ನಿಹೋತ್ರಿ ಅನಿರುದ್ಧ ವಾಜಪೇಯಿಯವರ ಸಮಕ್ಷಮ ಪೂರ್ಣಾಹುತಿ ನೆರವೇರಿತು.
ಈ ಸಂದರ್ಭ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಯೋಗಾನಂದ ಸ್ವಾಮೀಜಿ ಹಾಗೂ ಕರಿಂಜೆ ಮುಕ್ತಾನಂದ ಸ್ವಾಮೀಜಿ, ಯಾಗ ರಕ್ಷಕರಾದ ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ್ ಎಸೊÕà ನಾಯಕ್, ಕಟೀಲು ಶ್ರೀಕ್ಷೇತ್ರದ ಕಮಲಾದೇವೀ ಪ್ರಸಾದ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಬಂಟ್ವಾಳ ಶಾಸಕ ರಾಜೇಶ್ ನಾೖಕ್, ಯಾಗ ಸಮಿತಿ ಕಾರ್ಯಾಧ್ಯಕ್ಷ ನ್ಯಾಯವಾದಿ ಕೆ. ಮೋನಪ್ಪ ಭಂಡಾರಿ, ಕೆ. ನಾರಾಯಣ ಬೆಂಗಳೂರು, ಡಾ| ಎಂ. ಶ್ರೀಧರ ಭಟ್ ಉಪ್ಪಳ, ಕೋಶಾಧಿಕಾರಿ ಶಶಿಧರ ಶೆಟ್ಟಿ ಗ್ರಾಮ ಚಾವಡಿ, ಮಾಧ್ಯಮ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಭಂಡಾರಿ ಅಡ್ಯಾರು, ರಾಮಚಂದ್ರ ಚೆರುಗೋಳಿ ಮುಂತಾದವರು ಉಪಸ್ಥಿತರಿದ್ದರು.
ಯಾಗ ಪೂರ್ಣಾಹುತಿಯ ಬಳಿಕ ಯಾಗ ಅಧ್ವರ್ಯು ಗಣೇಶ ವಾಸುದೇವ ಜೋಗಳೇಕರ್ ಅವರು ಮಾತನಾಡಿ, ಭೂಮಂಡಲದ ಜೀವಕೋಟಿಗಳ ಸೌಖ್ಯ ಸಮಾಧಾನಗಳಿಗೆ ಯಾಗ ಪುಣ್ಯ ನಿಕ್ಷಿಪ್ತವಾಗಲೆಂದು ಪ್ರಾರ್ಥಿಸಿದರು.
ಯಾಗಶಾಲೆಗೆ ಅಗ್ನಿಸ್ಪರ್ಶ
ಆ ಬಳಿಕ ಯಾಗ ಸಮರ್ಪಣೆಯ ಭಾಗವಾಗಿ ಸಂಪೂರ್ಣ ಯಾಗಶಾಲೆಗೆ ಅಗ್ನಿಸ್ಪರ್ಶವನ್ನು ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಸಂಜೆ ತನಕ ತವಕದಿಂದ ಕಾದು ನಿಂತಿದ್ದರು. ಯಾಗ ವೀಕ್ಷಣೆಗೆ ಅನ್ಯರಾಜ್ಯಗಳ ಸಹಿತ ವಿದೇಶದಿಂದಲೂ ಭಕ್ತರು ಆಗಮಿಸಿದದ್ದರು.
ಸಹಸ್ರಾರು ಸಂಖ್ಯೆಯ ಭಕ್ತರನ್ನು ಸುವ್ಯವಸ್ಥೆಯಲ್ಲಿ ತಾಳ್ಮೆಯಿಂದ ಉಪಚರಿಸಿದ ಸ್ವಯಂ ಸೇವಕರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.