Advertisement

ತುಳುನಾಡಿನ ಶ್ರದ್ಧಾಭಕ್ತಿಯ “ಬಿಸು’ಆಚರಣೆ

01:29 AM Apr 16, 2022 | Team Udayavani |

ಮಂಗಳೂರು/ಉಡುಪಿ: ಕರಾವಳಿಯಾದ್ಯಂತ ಶುಕ್ರವಾರ ಬಿಸು ಅಥವಾ ವಿಷು ಹಬ್ಬ (ಸೌರಮಾನ ಯುಗಾದಿ)ವನ್ನು ದೇವಸ್ಥಾನ, ಮನೆ ಮತ್ತು ಸಂಘ ಸಂಸ್ತೆಗಳಲ್ಲಿ ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

Advertisement

ಧರ್ಮಸ್ಥಳ ಮಂಜುನಾಥ ಸ್ವಾಮಿ ಕ್ಷೇತ್ರ, ಸುರ್ಯ ಸದಾಶಿವ ರುದ್ರ ದೇವಸ್ಥಾನ, ಉಜಿರೆ ಜನಾರ್ದನ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಸಜಿಪ ಮಿತ್ತಮಜಲು ನಾಲ್ಕೈತ್ತಾಯ ದೈವಸ್ಥಾನ ಸೇರಿದಂತೆ ವಿವಿಧೆಡೆ ವಿಷುಕಣಿ ಪೂಜೆ, ವಿಶೇಷ ಪೂಜೆ ಸಹಿತ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನ, ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಮಹತೋಭಾರ ಶ್ರೀ ಮಂಗಳಾದೇವಿ ಕ್ಷೇತ್ರ, ಕದ್ರಿ ಶ್ರೀ ಮಂಜುನಾಥ ಕ್ಷೇತ್ರ, ಕೊಡಿಯಾಲ್‌ಬೈಲ್‌ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ
ದಲ್ಲಿಯೂ ಬಿಸು ಹಬ್ಬದ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

ಉಡುಪಿಯಲ್ಲಿ ಶ್ರೀಕೃಷ್ಣ ಮಠ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಆನೆಗುಡ್ಡೆ ಸಿದ್ಧಿ ವಿನಾಯಕ ದೇವಸ್ಥಾನ, ಮಂದಾರ್ತಿ ದುರ್ಗಾಪರಮೇಶ್ವರೀ ದೇವಸ್ಥಾನ, ನೀಲಾವರ ಮಹಿಷ ಮರ್ದಿನೀ, ಕಾರ್ಕಳದ ಅನಂತಶಯನ ದೇವಸ್ಥಾನಗಳಲ್ಲಿ ಯುಗಾದಿಯನ್ನು ಆಚರಿಸಲಾ ಯಿತು. ದೇವಸ್ಥಾನಗಳಲ್ಲಿ ಭಕ್ತರ ಸಂದಣಿ ಇತ್ತು.

ಇದನ್ನೂ ಓದಿ:ಮಳೆ ಅವಾಂತರಕ್ಕೆ 10ಕ್ಕೂ ಮನೆಗಳಿಗೆ ಹಾನಿ, ಸಿಡಿಲಿಗೆ ತೆಂಗಿನ ಮರ ಭಸ್ಮ

Advertisement

ಬಿಸು: ತುಳುವಿನಲ್ಲೇ ಶುಭಕೋರಿದ ಸಿಎಂ
ಮಂಗಳೂರು: ತುಳುನಾಡಿನಲ್ಲಿ ಶುಕ್ರವಾರ ಬಿಸು ಹಬ್ಬ ಆಚರಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಳು ಭಾಷೆಯಲ್ಲೇ ಹಬ್ಬದ ಶುಭಾಶಯ ಕೋರಿದ್ದಾರೆ. “ಪೊಸ ವರ್ಸೊದ ಪೊಸ ಗಲಿಗೆಗ್‌ ಪೊಸ ಬುಲೆಕ್‌ಲೆನ ಕಣಿ ದೀದ್‌ ಪೊಲ್ಸುದ ತುಡರ್‌ ಪೊತ್ತಾದ್‌ ಬಿಸು-ಕಣಿಕ್‌ ಎಡ್ಡೆಪ್ಪು ಬಾಮ್ಯೊಂದುಲ್ಲೆ… ಮಹಾ ಜನತೆಗ್‌ ಬಿಸು-ವಿಷು ಪಬೊìದ ಎಡ್ಡೆಪ್ಪುಲು’ ಎಂದು ತುಳು ಭಾಷೆಯಲ್ಲಿ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next