Advertisement

ಟೀಸರ್‌ ನಲ್ಲಿ ‘ವಿಷ್ಣುಪ್ರಿಯ’ ಲವ್‌ ಸ್ಟೋರಿ

05:12 PM Apr 10, 2023 | Team Udayavani |

ನವನಟ ಶ್ರೇಯಸ್‌ ಅಭಿನಯದ “ವಿಷ್ಣುಪ್ರಿಯ’ ಸಿನಿಮಾದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಚಿತ್ರ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಅಂದಹಾಗೆ, ಈ ಚಿತ್ರವನ್ನು ಕೆ.ಮಂಜು ನಿರ್ಮಿಸಿದ್ದು, ವಿ.ಕೆ. ಪ್ರಕಾಶ್‌ ನಿರ್ದೇಶಿಸಿದ್ದಾರೆ. “ಕಣ್ಸನ್ನೆ ಹುಡುಗಿ’ ಪ್ರಿಯಾ ವಾರಿಯರ್‌ ಈ ಸಿನಿಮಾದ ನಾಯಕಿ.

Advertisement

ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ಕೆ.ಮಂಜು, “ಪಡ್ಡೆಹುಲಿ ನಂತರ ಒಳ್ಳೆ ಕಥೆಗಾಗಿ ಹುಡುಕುತ್ತಿದೆ. ರೀಮೇಕ್‌ ಮಾಡಲು ನನ್ನ ಮಗ ಒಪ್ಪಲಿಲ್ಲ. ಒಳ್ಳೆಯ ಕಥೆಯಿದ್ದರೆ ತನ್ನಿ ಅಂತ ಅನೌನ್ಸ್‌ ಮಾಡಿದೆ. ಆಗ 65 ಕಥೆಗಳು ಬಂದವು. ಅದರಲ್ಲಿ ಧಾರವಾಡದ ಸಿಂಧುಶ್ರೀ ಅವರ ಕಥೆ ತುಂಬಾ ಚೆನ್ನಾಗಿತ್ತು.ಅದರ ಒಂದು ಲೈನ್‌ ತಗೊಂಡು ಈ ಸ್ಕ್ರಿಪ್ಟ್ ಮಾಡಿದ್ದೇವೆ. ವಿಕೆ ಪ್ರಕಾಶ್‌, ಗೋಪಿಸುಂದರ್‌ ಅವರಂಥ ತಂತ್ರಜ್ಞರನ್ನು ಒಪ್ಪಿಸಿದೆ. ನಾಗೇಂದ್ರ ಪ್ರಸಾದ್‌ ಒಳ್ಳೆ ಸಾಹಿತ್ಯ ಕೊಟ್ಟಿದ್ದಾರೆ.

ಮೊದಲು ಚಿತ್ರೀಕರಿಸಿದ ಕ್ಲೈಮ್ಯಾಕ್ಸ್‌ ತೃಪ್ತಿಯಾಗಲಿಲ್ಲ. ಹಾಗಾಗಿ ಅದನ್ನು ಮತ್ತೆ ರೀಶೂಟ್‌ ಮಾಡಿದ್ದೇವೆ. ಜೀವನದಲ್ಲಿ ಪ್ರೀತಿ ಎಷ್ಟು ಮುಖ್ಯ ಅಂತ ಚಿತ್ರದಲ್ಲಿ ತೋರಿಸಿದ್ದೇವೆ’ ಎನ್ನುತ್ತಾರೆ.

ನಾಯಕ ಶ್ರೇಯಸ್‌ಗೆ ಒಂದೊಳ್ಳೆಯ ಸಿನಿಮಾದಲ್ಲಿ ನಟಿಸಿದ ಖುಷಿ ಇದೆ. ಜೊತೆಗೆ ಸಿನಿಮಾ ಬಿಡುಗಡೆ ತಡವಾಗುತ್ತಿರುವ ಬಗ್ಗೆ ಬೇಸರವಿದೆ. ಹಾಗಂತ ಜಗಳವಾಡುವಂತಿಲ್ಲ. ಏಕೆಂದರೆ ಸಿನಿಮಾ ನಿರ್ಮಾಣ ಮಾಡಿದ್ದು ಶ್ರೇಯಸ್‌ ತಂದೆ ಮಂಜು. ಸಿನಿಮಾ ಬಗ್ಗೆ ಮಾತನಾಡುವ ಶ್ರೇಯಸ್‌, “90ರ ದಶಕದ ಲವ್‌ ಸ್ಟೋರಿ ಇರುವ ಈ ಚಿತ್ರದಲ್ಲಿ ಫ್ಯಾಮಿಲಿ ವ್ಯಾಲ್ಯೂಸ್‌ಗೆ ಹೆಚ್ಚಿನ ಮಹತ್ವವಿದೆ. ವಿಷ್ಣು ಒಬ್ಬ ಸಿಂಪಲ್‌ ಹುಡುಗ. ಪ್ರೀತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವಂತಹ ಪ್ರೇಮಿ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇಂತಹ ಒಳ್ಳೆ ಪ್ರಯತ್ನಗಳು ಗೆದ್ದರೆ ಉಳಿದವರಿಗೆ ಪ್ರೇರಣೆಯಾಗುತ್ತದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next