Advertisement

ಹಾಯಿದೋಣಿ: ಒಲಿಂಪಿಕ್ಸ್‌ಗೆ ನಾಲ್ವರು

10:58 PM Apr 08, 2021 | Team Udayavani |

ಹೊಸದಿಲ್ಲಿ: ಒಲಿಂಪಿಕ್ಸ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ನಾಲ್ವರು ಹಾಯಿದೋಣಿ ಸ್ಪರ್ಧೆಗೆ ಅರ್ಹತೆ ಸಂಪಾದಿಸಿದ್ದಾರೆ.

Advertisement

ಒಮಾನ್‌ನಲ್ಲಿ ನಡೆಯುತ್ತಿರುವ ಅರ್ಹತಾ ಪಂದ್ಯಾವಳಿಯಲ್ಲಿ ಭಾರತದಿಂದ ಈ ಸಾಧನೆ ದಾಖಲಾಯಿತು. ನೇತ್ರಾ ಕುಮನನ್‌ ರೇಡಿಯಲ್‌ ಕ್ಲಾಸ್‌ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಬೆನ್ನಲ್ಲೇ, ಗುರುವಾರ ಇನ್ನೂ ಮೂವರು ಈ ಯಾದಿಯನ್ನು ಅಲಂಕರಿಸಿದರು. ಇವರೆಂದರೆ ವಿಷ್ಣು ಸರವಣನ್‌, ಗಣಪತಿ ಚೆಂಗಪ್ಪ ಮತ್ತು ವರುಣ್‌ ಥಕ್ಕರ್‌.

ನೇತ್ರಾ ಕುಮನನ್‌ ಒಲಿಂಪಿಕ್ಸ್‌ ಅರ್ಹತೆ ಪಡೆದ ಭಾರತದ ಮೊದಲ ವನಿತಾ ಸೈಲರ್‌ ಆಗಿದ್ದಾರೆ. ಸರವಣನ್‌ ಲೇಸರ್‌ ಸ್ಟಾಂಡರ್ಡ್‌ ಕ್ಲಾಸ್‌ ವಿಭಾಗದಲ್ಲಿ ದ್ವಿತೀಯ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಬಳಿಕ ಗಣಪತಿ-ವರುಣ್‌ 49ಇಆರ್‌ ಕ್ಲಾಸ್‌ನಲ್ಲಿ ಅಗ್ರಸ್ಥಾನಿಯಾದರು. ಈ ಜೋಡಿ 2018ರ ಏಶ್ಯಾಡ್‌ನ‌ಲ್ಲಿ ಕಂಚಿನ ಪದಕ ಜಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next