Advertisement
ಈ ಸಂದರ್ಭದಲ್ಲಿ ಡಾ. ವಿಷ್ಣು ಅಭಿಮಾನಿಗಳು ಆಯೋಜಿಸಿದ್ದ ರಕ್ತದಾನ, ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೂ ಚಾಲನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ದಿನಗಳಿಂದ ನನೆಗುದಿಗೆ ಬಿದ್ದಿರುವ ವಿಷ್ಣು ಸ್ಮಾರಕದ ನಿರ್ಮಾಣ ಕಾರ್ಯ ಇನ್ನು ಒಂದು ವಾರದಲ್ಲಿ ಶುರುವಾಗಲಿದೆ.
Related Articles
Advertisement
ಈ ವೇಳೆ ಮಾತನಾಡಿದ ಸಮಾಜ ಸೇವಕ ಡಿ.ಟಿ.ಪ್ರಕಾಶ್, ಮೈಸೂರಿನಿಂದ ಕೆ.ಎಸ್.ಅಶ್ವತ್ಥ್, ಅಂಬರೀಶ್, ಎಂ.ಪಿ.ಶಂಕರ್ ಸೇರಿದಂತೆ ಇನ್ನೂ ಅನೇಕ ಚಿತ್ರ ಕಲಾವಿದರನ್ನು ಪುಟ್ಟಣ್ಣ ಕಣಗಾಲ್, ರಾಜೇಂದ್ರ ಸಿಂಗ್ ಬಾಬು ಚಿತ್ರ ನಿರ್ದೇಶಕರು ಸೇವೆ ಸಲ್ಲಿಸಿದ್ದಾರೆ. ಆದ್ದರಿಂದ ಚಿತ್ರ ನಗರಿಯನ್ನು ಮೈಸೂರಿನಲ್ಲಿ ಸ್ಥಾಪಿಸಬೇಕು. ಚಿತ್ರ ನಗರಿಗೆ ವಿಷ್ಣುವರ್ಧನ್ ಹೆಸರು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
ಪಾತಿ ಫೌಂಡೇಷನ್ ಅಧ್ಯಕ್ಷ ಪಾರ್ಥಸಾರಥಿ ಮಾತನಾಡಿ, ಪುಟ್ಟಣ್ಣ ಕಣಗಾಲ್ ಗರಡಿಯ ಶಿಷ್ಯನಾಗಿ ಗುರುತಿಸಿಕೊಂಡ ವಿಷ್ಣುವರ್ಧನ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಚಾಮಯ್ಯ ಮೇಷ್ಟ್ರ ಶಿಷ್ಯನಾಗಿಯೇ ಸಾರ್ವಜನಿಕರಿಗೆ ಗುರು-ಗುರಿಯ ಸಂದೇಶ ನೀಡುತ್ತಿದ್ದ ಮಹಾನ್ ವ್ಯಕ್ತಿ. ಅವರ ಸರಳಜೀವನ ಪ್ರತಿಯೊಬ್ಬರಿಗೂ ಮಾದರಿ ಎಂದರು.
ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ ಮಾತನಾಡಿ, ಎಲ್ಲಾ ಪಾತ್ರಗಳಲ್ಲಿ ನಟಿಸುವ ಮೂಲಕ ಪ್ರತಿಯೊಂದು ಕ್ಷೇತ್ರದ ಜನವಿಶ್ವಾಸ ಗಳಿಸಿದ್ದಾರೆ. ಅವರು ನಟಿಸಿರುವ ಚಿತ್ರಗಳಲ್ಲಿ ಕೆಲ ಜಿಲ್ಲೆಯ ಸ್ಥಳಗಳು ಪ್ರವಾಸೋದ್ಯಮ ತಾಣವಾಗಿವೆ. ಚಾಮುಂಡಿ ಬೆಟ್ಟದಿಂದ ಚಿತ್ರದುರ್ಗದ ಕೋಟೆಯವರೆಗೂ ಹೊಸ ಕಲಾವಿದರಿಗೆ ಸ್ಫೂರ್ತಿಯಾಗಿದ್ದರು ಡಾ.ವಿಷ್ಣುವರ್ಧನ್.
ಇಂತಹ ಅತ್ಯುತ್ತಮ ಕನ್ನಡ ನಟನ ಜಯಂತಿಯನ್ನು ರಾಜ್ಯಸರ್ಕಾರ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸಿ ಯುವ ಕಲಾವಿದರ ಪ್ರತಿಭೆಯನ್ನು ಪ್ರೋತ್ಸಾಹಿಸಿ ಮುಖ್ಯವಾಹಿನಿಗೆ ತರಬೇಕು. ವಿಷ್ಣುವರ್ಧನ್ ನಮ್ಮನ್ನಗಲಿ ಹತ್ತು ವರ್ಷ ಸಂದಿದ್ದರೂ ಆಡಳಿತ ನಡೆಸಿರುವ ಸರ್ಕಾರಗಳು ಸ್ಮಾರಕ ನಿರ್ಮಿಸಲು ವಿಳಂಬ ಮಾಡುತ್ತಿರುವುದು ಖಂಡನೀಯ ಎಂದರು.
ಈ ವೇಳೆ ಬಿಜೆಪಿ ಯುವ ಮುಖಂಡ ಚರಣ್ ರಾಜ್, ಪ್ರಚಾರಕ ಮೈಕ್ ಚಂದ್ರು, ವಿಕ್ರಂ ಅಯ್ಯಂಗಾರ್, ವಿನಯ್ ಕಣಗಾಲ್, ಲೋಹಿತ್, ಜೀವನ್, ನಾಗರಾಜ್, ಸುಚೀಂದ್ರ, ರಘು ಕಿರಣ್ ಗೌಡ, ಉಮೇಶ್, ಮಹದೇವು, ನವೀನ್ ಹಾಗೂ ನೂರಾರು ವಿಷ್ಣು ಅಭಿಮಾನಿಗಳು ಹಾಜರಿದ್ದರು.
ಸ್ಮಾರಕ ನಿರ್ಮಾಣಕ್ಕೆ ಬಿಎಸ್‌ವೈ ಸಹಕಾರ: ಸ್ಮಾರಕ ವಿಷ್ಣು ಅವರ ಕನಸು. ಸ್ಮಾರಕ ಜಾಗದಲ್ಲಿ ಜನಪರ ಕೆಲಸಗಳಾಗಬೇಕು ಎಂಬುದು ಅವರ ಬಯಕೆಯಾಗಿತ್ತು. ವಿಷ್ಣು ಸ್ಮಾರಕ ವಿಚಾರವಾಗಿ ಸಿಎಂ ಯಡಿಯೂರಪ್ಪ ಅವರು ನಿರ್ಮಾಣಕ್ಕೆ ಸಹಾಯ ನೀಡುವ ಭರವಸೆ ನೀಡಿದ್ದಾರೆ. ಇದೊಂದು ಸಂತಸ ವಿಚಾರ. 10 ವರ್ಷಗಳ ಬಳಿಕವಾದರೂ ಸ್ಮಾರಕ ನಿರ್ಮಾಣವಾಗುತ್ತಿರುವುದು ಖುಷಿ ತಂದಿದೆ ಎಂದ ಅವರು, ಸ್ಮಾರಕದ ರೂಪುರೇಷೆ ಕುರಿತು ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಭಾರತಿ ವಿಷ್ಣುವರ್ಧನ್ ತಿಳಿಸಿದರು.