Advertisement

Chhattisgarh: ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಆಯ್ಕೆ ಮಾಡಿದ ಬಿಜೆಪಿ

04:18 PM Dec 10, 2023 | Team Udayavani |

ರಾಯ್ ಪುರ್: ಛತ್ತೀಸ್‌ಗಢದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ಭಾನುವಾರ ತೆರೆ ಬಿದ್ದಿದ್ದು, ಪ್ರಬಲ ಬುಡಕಟ್ಟು ನಾಯಕ ವಿಷ್ಣು ದೇವ್ ಸಾಯಿ ಅವರನ್ನು ಬಿಜೆಪಿ ಕೇಂದ್ರ ನಾಯಕತ್ವವು ಭಾನುವಾರ ಆಯ್ಕೆ ಮಾಡಿದೆ.

Advertisement

ರಾಯ್‌ಪುರದಲ್ಲಿ ಬಿಜೆಪಿಯ ಹೊಸದಾಗಿ ಚುನಾಯಿತರಾದ 54 ಶಾಸಕರ ಮಹತ್ವದ ಸಭೆಯ ನಂತರ ಛತ್ತೀಸ್‌ಗಢ ಮುಖ್ಯಮಂತ್ರಿಯಾಗಿ ವಿಷ್ಣು ದೇವ ಸಾಯಿ ಅವರ ಹೆಸರನ್ನು  ಘೋಷಿಸಲಾಯಿತು.

59 ರ ಹರೆಯದ ಸಾಯಿ ಅವರು ಈ ವಿಧಾನಸಭಾ ಚುನಾವಣೆಯಲ್ಲಿ ಕುನ್‌ಕುರಿ ಕ್ಷೇತ್ರದಿಂದ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಮೂರು ಬಾರಿ ಛತ್ತೀಸ್‌ಗಢ ಬಿಜೆಪಿ ಅಧ್ಯಕ್ಷರಾಗಿದ್ದರು. (2006ರಿಂದ 2010, 2014ರಲ್ಲಿ ಕೆಲವುತಿಂಗಳು, 2020ರಿಂದ 2022). 2014ರಿಂದ 2019ರವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರದಲ್ಲಿ ಕೇಂದ್ರದ ಉಕ್ಕು ಸಚಿವರಾಗಿದ್ದರು.

ಛತ್ತೀಸ್‌ಗಢ ಇನ್ನೂ ಮಧ್ಯಪ್ರದೇಶದ ಭಾಗವಾಗಿದ್ದಾಗ ಜನಿಸಿದ್ದರು. ಮಧ್ಯಪ್ರದೇಶದ ತಪ್ಕಾರ ಕ್ಷೇತ್ರದ ಶಾಸಕರಾಗಿ ರಾಜಕೀಯ ಜೀವನ ಆರಂಭಿಸಿದರು. ಪ್ರಸ್ತುತ ಛತ್ತೀಸ್‌ಗಢದ ಬುಡಕಟ್ಟು ಸಮುದಾಯದ ಪ್ರಬಲ ನಾಯಕರಲ್ಲೊಬ್ಬರು. ಬಿಜೆಪಿ ನಾಯಕತ್ವ ಬುಡಕಟ್ಟು ಸಮುದಾಯವನ್ನು ಆದ್ಯತೆಯಾಗಿಸಿಕೊಂಡಿದ್ದು, ವಿಷ್ಣು ದೇವ್‌ ಅವರಿಗೆ ಪಟ್ಟ ಒಲಿದಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸದೆ ಸ್ಪರ್ಧಿಸಿತ್ತು. ಒಟ್ಟು 90 ಸ್ಥಾನಗಳ ಪೈಕಿ 54 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರ ಹಿಡಿದಿತ್ತು.

Advertisement

ಬುಡಕಟ್ಟು ಸಮುದಾಯದ ಮತಗಳೇ ನಿರ್ಣಾಯಕವಾಗಿದ್ದು, ಮತಗಳು ಪೂರ್ಣ ಪ್ರಮಾಣದಲ್ಲಿ ಬಿಜೆಪಿಯತ್ತ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಲೋಕಸಭಾ ಚುನಾವಣೆಯಲ್ಲೂ ರಾಷ್ಟ್ರ ಮಟ್ಟದಲ್ಲಿ ಬುಡಕಟ್ಟು ಸಮುದಾಯದ ಮತಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಹುದ್ದೆ ನೀಡಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next